ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ?:ವಾಟಾಳ್ ಕರೆಗೆ ಮೌನ ಬೆಂಬಲ ನೀಡಿದ ಜನತೆ
ಕಾರವಾರ. 22; ಜಿಲ್ಲೆಯಲ್ಲಿ ಬಸ್ ಸಂಚಾರ ಎಂದಿನಂತೆಕಾರವಾರ : ಉತ್ತರ ಕನ್ನಡದಲ್ಲಿ ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಟಾಳ್ ನಾಗರಾಜ್ ಅವರು ಎಂಇಎಸ್ ಕಾಟದ ವಿರುದ್ಧ ನೀಡಿದ ಬಂದ್ ಕರೆಗೆ ಉತ್ತರ ಕನ್ನಡದಲ್ಲಿ ಜನತೆ ಮೌನ ಬೆಂಬಲ ನೀಡಿದರು. ಯಾವುದೇ ಕನ್ನಡ ಸಂಘಟನೆಗಳು ಬಂದ್ ಸಂಬಂಧ ಪ್ರತಿಭಟನೆ, ಮೆರವಣಿಗೆ ಮಾಡದಿದ್ದರೂ ಸಹ, ಬಂದ್ ವಾತಾವರಣ ಕಂಡು ಬಂತು. ಕುಮಟಾ, ಕಾರವಾರ, ಅಂಕೋಲಾ, ಭಟ್ಕಳ, ಹೊನ್ನಾವರ ಸೇರಿದಂತೆ ಘಟ್ಟದ ಮೇಲಿನ ತಾಲೂಕಿನಲ್ಲಿ ಜನ ಸಂಚಾರ ವಿರಳವಾಗಿತ್ತು. ಕಾರವಾರದಿಂದ ರಾಜ್ಯದ ಎಲ್ಲಾ ಪ್ರಮುಖ ಕೇಂದ್ರ ಗಳಿಗೆ ತೆರಳುವ ಬಸ್ ಬಸ್ ಗಳು ಎಂದಿನಂತೆ ಸಂಚರಿಸಿದವು. ನಾಲ್ಕನೇ ಶನಿವಾರ ಆದ ಕಾರಣ ಸರ್ಕಾರಿ ನೌಕರರ ಓಡಾಟ ಕಾಣಲಿಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷೆ ಶನಿವಾರ ಇಲ್ಲದ ಕಾರಣ, ವಿದ್ಯಾರ್ಥಿಗಳ ಸಂಚಾರವೂ ಇರಲಿಲ್ಲ. ಕಾರವಾರ, ಕುಮಟಾ, ಅಂಕೋಲಾ, ಹೊನ್ನಾವರ, ಭಟ್ಕಳದಲ್ಲಿ ಹೋಟೆಲ್ ಅಂಗಡಿಗಳು ತೆರೆದ್ದವು. ಕರಾವಳಿಯಲ್ಲಿ ಬಸ್ ಸಂಚಾರ ಎಂದಿನಂತೆಯೇ ಇತ್ತು. ಅಂಗಡಿ ಮುಂಗಟ್ಟು ಮಧ್ಯಾಹ್ನದ ನಂತರ ತೆರೆದಿದ್ದವು . ಪೊಲೀಸ್ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಮಾಹಿತಿ ನೀಡಿವೆ.