ಡಿಜಿಟಲ್ ಲೈಬ್ರರರಿಗೆ ಸಚಿವ ಜಮೀರ ಖಾನ್ ಚಾಲನೆ

ಹಾವೇರಿ23: ಹಾವೇರಿ ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ನೂತನವಾಗಿ ಆರಂಭಿಸಲಾದ ಡಿಜಟಲ್ ಗ್ರಂಥಾಲಯ ಹಾಗೂ ಪುಸ್ತಕ ಪ್ರದರ್ಶನಕ್ಕೆ ಗುರುವಾರ ಆಹಾರ ಮತ್ತು ನಾಗರಿಕ ಸರಬರಾಜು, ಹಜ್ ಹಾಗೂ ವಕ್ಫ್ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಇವರು ಚಾಲನೆ ನೀಡಿದರು.

ಆನ್ಲೈನ್ ಮೂಲಕ ಗ್ರಂಥಾಲಯ ಸದಸ್ಯರ ವಿವರ ಹಾಗೂ ಪುಸ್ತಕಗಳ ವಿವವರನ್ನು ಆನ್ಲೈನ್ ಮೂಲಕವೇ ಶೀಷರ್ಿಕೆವಾರು, ಲೇಖಕರವಾರು ಓದುಗರು ವೀಕ್ಷಣೆ ಮಾಡಬಹುದಾಗಿದೆ ಎಂದು ಹೇಳಿದರು.

  ಇದೇ ಸಂದರ್ಭದಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ  ಆರ್.ಶಂಕರ್, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಶಾಸಕರಾದ ನೆಹರು ಓಲೇಕಾರ, ಬಿ.ಸಿ.ಪಾಟೀಲ, ವಿರಪಾಕ್ಷಪ್ಪ ಬಳ್ಳಾರಿ, ಜಿ.ಪಂ. ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಗ್ರಂಥಾಲಯ ಇಲಾಖೆ ನಿದರ್ೆಶಕರಾದ ಸತೀಶಕುಮಾರ, ಜಿಲ್ಲಾ ಗ್ರಂಥಾಲಯ ಅಧಿಕಾರಿ ಅಖಿಲೇಶ್ವರಿ, ಇತರರು ಉಪಸ್ಥಿತರಿದ್ದರು.