ಭೀಷ್ಮ ವಿಹಾರ ಧಾಮದಲ್ಲಿ ನೂತನ ಸೋಲಾರ ಇಲೆಕ್ಟ್ರಿಕ್ ಬೋಟಿಂಗ್ ವ್ಯವಸ್ಥೆಗೆ ಚಾಲನೆ ನೀಡಿದ ಸಚಿವ ಎಚ್.ಕೆ.ಪಾಟೀಲ
ಗದಗ 16: ನಗರದ ಭೀಷ್ಮ ವಿಹಾರ ಧಾಮದಲ್ಲಿ ಪ್ರವಾಸಿಗರಿಗಾಗಿ ನೂತನವಾಗಿ ಪ್ರಾರಂಭಿಸಲಾದ ಸೋಲಾರ ಇಲೆಕ್ಟ್ರಿಕ್ ಬೋಟಿಂಗ್ ವ್ಯವಸ್ಥೆಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಶನಿವಾರ (ಮಾ.15) ಚಾಲನೆ ನೀಡಿ ಸೋಲಾರ ಇಲೆಕ್ಟ್ರಿಕಲ್ ಬೋಟನಲ್ಲಿ ಭೀಷ್ಮ ಕೆರೆಯ ವಿಹಾರ ನಡೆಸಿದರು.ತದ ನಂತರ ಮಾತಾನಾಡಿದ ಸಚಿವರು ರಾಜ್ಯದಲ್ಲಿಯೇ ಮೊದಲ ಸೋಲಾರ ಇಲೆಕ್ಟ್ರಿಕ್ ಬೋಟಿಂಗ್ ವ್ಯವಸ್ಥೆಯನ್ನು ಗದಗನ ಭೀಷ್ಮ ವಿಹಾರ ಧಾಮದಲ್ಲಿ ಪ್ರಾರಂಭಿಸಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.ಸಧ್ಯ ಪ್ರವಾಸಿಗರ ಅನುಕೂಲಕ್ಕಾಗಿ ಸೋಲಾರ ಇಲೆಕ್ಟ್ರಿಕ್ ಬೋಟ್ ಕಾರ್ಯನಿರ್ವಹಿಸತ್ತಿದ್ದು, ಸಧ್ಯದಲ್ಲೇ ಮತ್ತೆರಡು ಸೋಲಾರ ಇಲೆಕ್ಟ್ರಿಕ್ ಬೋಟ್ ಗಳು ಆಗಮಿಸಲಿವೆ ಎಂದು ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ.ಎಸ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ನಗರ ಸಭೆ ಸದಸ್ಯರುಗಳು, ನಗರ ಸಭೆ ಆಯುಕ್ತರಾದ ರಾಜಾರಾಂ ಪವಾರ, ಪ್ರವಾಸೋದ್ಯಮನಿಲಾಖೆ ಸಹಾಯಕ ನಿರ್ದೆಶಕ ಕೊಟ್ರೇಶ್ವರ ವಿಭೂತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚೆಪ್ಪನವರ, ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.