ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಕಳ್ಳತನ

ಲೋಕದರ್ಶನ ವರದಿ

ರಾಯಬಾಗ 03: ಮೊಬೈಲ್ ಅಂಗಡಿಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಲೆಬಾಳುವ ಮೊಬೈಲ್ಗಳನ್ನು ಕಳ್ಳರು ಕದ್ದೊಯ್ಯದ ಪ್ರಕರಣ ಬುಧವಾರ ನಸುಕಿನಲ್ಲಿ ಪಟ್ಟಣದಲ್ಲಿ ನಡೆದಿದೆ. 

ಪಟ್ಟಣದ ಅಂಕಲಿ ರಸ್ತೆಯ ಹಳೆ ಪೊಲೀಸ್ ಠಾಣೆ ಎದುರಿನಲ್ಲಿರುವ ಬಾಬುರಾವ್ ಶಿವಾಜಿ ಜಾಧವ ಅವರಿಗೆ ಸೇರಿದ ರೇಣುಕಾ ಮೊಬೈಲ್ ಅಂಗಡಿಯಲ್ಲಿ ಬುಧವಾರ ನಸುಕಿನ ಜಾವ ಅಂಗಡಿ ಸೆಟರ್ ಮುರಿದು ಅಲ್ಲಿದ್ದ ಬ್ರಾಂಡೆಡ್ ಕಂಪನಿಗಳ ಬೆಲೆಬಾಳುವ ಸುಮಾರು 60 ಮೊಬೈಲ್ಗಳನ್ನು ಕದ್ದೊಯ್ಯದಿದ್ದಾರೆ. ಇವುಗಳ ಮೌಲ್ಯ ಸುಮಾರು 6.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. 

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಎಮ್.ರಾಜು ಮತ್ತು ಸಿಪಿಐ ಎನ್.ಮಹೇಶ ಅವರು ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಳ್ಳರ ಬಂಧನಕ್ಕೆ ಬಲೆ ಬಿಸಿದ್ದಾರೆ. ಬಾಬುರಾವ್ ಶಿವಾಜಿ ಜಾಧವ ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.