ಕೊಟ್ಟೂರು ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತ ಸಾಕ್ಷಿ
ಕೊಟ್ಟೂರು 23: ಕೊಟ್ಟೂರು ದೊರೆಯೇ ನಿನಗಾರು ಸರಿಯೇ.. ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್ ಎನ್ನುವ ಲಕ್ಷಬಹುಪರಾಕ್ ಜಯಘೋಷದ ಮಧ್ಯೆ ಮಧ್ಯ ಕರ್ನಾಟಕದ ಆರಾಧ್ಯ ದೈವ ಕೊಟ್ಟೂರೇಶ್ವರನ ಸ್ಜಾಮಿ ರಥೋತ್ಸವ ಶನಿವಾರ ಸಂಜೆ 5.30ಕ್ಕೆ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನಡೆಯಿತು. ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಬಂದಿದ್ದರು. ಶನಿವಾರ ಜರುಗಿದ ಸಂಭ್ರಮದ ರಥೋತ್ಸವನ್ನು ಕಣ್ಣುಂಬಿಸಿಕೊಂಡರು. ಬೆಳಗ್ಗಿನಿಂದಲೇ ಭಕ್ತರ ಸರದಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು. ವಿವಿಧ ವಾದ್ಯ ಮೇಳಗಳು ಸಮಾಳ, ನಂದಿಕೋಲು ರಥೋತ್ಸವಕ್ಕೆ ಮೆರಗು ತಂದವು. ಗುರು ಬಸವೇಶ್ವರ ಸ್ವಾಮಿಯ ಪಲ್ಲಕ್ಕೆ ರಥೋತ್ಸವದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು.ನಂತರ ಪೂಜೆ ಸಲ್ಲಿಸಿ ಮೂಲ ನಕ್ಷತ್ರ ಕೂಡಿ ಬಂದ ಮೇಲೆ ರಥ ಸಾಗಿತು. ದಾರಿ ಉದ್ದಕ್ಕೂ ಲಕ್ಷಾಂತರ ಭಕ್ತರು ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಿಸಿದರು.