ಲೋಕದರ್ಶನ ವರದಿ
ಬೆಳಗಾವಿ 14: ಪಂಚಮಿಯೆಂದು ಹುತ್ತಿಗೆ ಹಾಲು ಸುರಿಯುವ ಮೌಢ್ಯ ಸಂಪ್ರದಾಯಗಳಿಗೆ ಕೊನೆ ಹಾಡಬೇಕು. ನೆಚ್ಚಿನ ನಟರ ಚಲನ ಚಿತ್ರಗಳು ಬಿಡುಗಡೆಯಾದಾಗ ಆ ನಟರ ಕಟೌಟಗಳಿಗೆ ಹಾಲು ಸುರಿಯುವದನ್ನು ಬಿಡಬೇಕು. ಪೌಷ್ಠಿಕ ಆಹಾರವಾಗಿರುವ ಹಾಲು ಮಕ್ಕಳ ಹೊಟ್ಟೆ ಸೇರಬೇಕು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಹೇಳಿದ್ದಾರೆ.
ನಟ ಉಪೇಂದ್ರ ಅವರ ಐ ಲವ್ ಯುವ ಚಲನಚಿತ್ರದ ಬಿಡುಗಡೆ ನಿಮಿತ್ಯ ದುಗರ್ಾ ಕಂಬೈನ್ಸ್ನ ಕರೆಪ್ಪ ಮಾದರ ಅವರು ಹಮ್ಮಿಕೊಂಡಿದ್ದ ನಗರದ ಗಂಗಮ್ಮ ಚಿಕ್ಕುಂಬಿ ಬಾಲ ಕಲ್ಯಾಣ ಕೇಂದ್ರದ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪೌಷ್ಠಿಕತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹುತ್ತಕ್ಕೆ ಹಾಲೆರೆಯುವ, ಅಭಿಷೇಕದ ಹೆಸರಿನಲ್ಲಿ ಹಾಲು ವ್ಯರ್ಥ ಮಾಡುವ, ಕಟೌಟಗಳ ಮೇಲೆ ಹಾಲು ಸುರಿಯುವದನ್ನು ಬಿಟ್ಟು, ಆ ಹಾಲನ್ನು ಮಕ್ಕಳಿಗೆ ಕುಡಿಸಬೇಕು. ಅಪೌಷ್ಠಿಕತೆ ತಡೆಯಬೇಕು ಎಂದು ಮನವಿ ಮಾಡಿದರು.
ದುಗರ್ಾ ಕಂಬೈನ್ಸ್ನ ಕರೆಪ್ಪ ಮಾದರ ಅವರು ಮಾತನಾಡಿ, ಕಟೌಟಗಳಿಗೆ ಹಾಲು ಸುರಿದು ವ್ಯರ್ಥ ಮಾಡುವದರ ಬದಲು ಆ ಹಾಲನ್ನು ಮಕ್ಕಳಿಗೆ ಕುಡಿಸುವಂತೆ ರಿಯೆಲ್ ಸ್ಟಾರ್ ಉಪೇಂದ್ರ ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಅವರ ಅಭಿಮಾನಿಯಾಗಿ ಅವರ ಮನವಿಯೆಂತೆ ಇಂದು ಇಲ್ಲಿಯ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಉಪೇಂದ್ರ ಅವರ ನೂತನ ಚಲನಚಿತ್ರದ ಬಿಡುಗಡೆಯ ಸಂಭ್ರಮವನ್ನು ಆಚರಿಸುತ್ತಿರುವದಾಗಿ ತಿಳಿಸಿದರು. ಸಂಗೀತ ಶಿಕ್ಷಕಿ ವಿಜಯಲಕ್ಷ್ಮೀ, ಬಾಲ ಕಲ್ಯಾಣ ಕೇಂದ್ರದ ಮಲ್ಲಿಕಾಜರ್ುನ ಭಾವಿಕಟ್ಟಿ, ಮೇಲ್ವಿಚಾರಕಿ ಗಿರೀಜಾ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನೂರಾರು ಮಕ್ಕಳಿಗೆ ಹಾಲುಣಿಸಲಾಯಿತು.