ದುಬೈನಲ್ಲಿ ನಡೆಯುವ ಕನ್ನಡ ಸಮ್ಮೇಳನ, ಜಾನಪದ ಉತ್ಸವದಲ್ಲಿ ಮೆಟ್ರಿ ಕಲಾವಿದ ಕೆ.ಶಂಕರ್ ಭಾಗಿ

Metry artist K. Shankar participated in the Kannada conference and folk festival in Dubai

ದುಬೈನಲ್ಲಿ ನಡೆಯುವ ಕನ್ನಡ ಸಮ್ಮೇಳನ, ಜಾನಪದ ಉತ್ಸವದಲ್ಲಿ ಮೆಟ್ರಿ ಕಲಾವಿದ ಕೆ.ಶಂಕರ್ ಭಾಗಿ

ಕಂಪ್ಲಿ 23: ಗಣಿ ನಾಡು ಬಳ್ಳಾರಿ ಜಿಲ್ಲೆಯ ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎಂಬ ಪ್ರಖ್ಯಾತಿಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ರಂಗಭೂಮಿ ಕಲಾವಿದ ಕೆ.ಶಂಕರ್ ಇವರು ಜೀವನದುದ್ದಕ್ಕೂ ತಮ್ಮ ಕಲೆಯ ಕಲೆಕರಗತದೊಂದಿಗೆ ನಾಡಿನಾದ್ಯಂತ ತಮ್ಮ ಅಮೋಘ ಕಲೆಯೊಂದಿಗೆ ಗಮನ ಸೆಳೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದವರೆಗೆ ತಮ್ಮ ಛಾಪನ್ನು ಮೂಡಿಸಿದ್ದಾರೆ.  ಇದೇ ಫೆ.24ರಂದು ದುಬೈನಲ್ಲಿ ನಡೆಯುತ್ತಿರುವ 48ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಕನ್ನಡ ಸಮ್ಮೇಳನ ಮತ್ತು ಜಾನಪದ ಉತ್ಸವದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕಲಾಮೈತ್ರಿ ತಂಡವು ಕೆ.ರಾಮಕೃಷ್ಣಯ್ಯ ನಿರ್ದೇಶಕದಲ್ಲಿ ಎಚ್‌.ಎಸ್‌.ಶಿವಪ್ರಕಾಶ ರಚಿಸಿರುವ ‘ಮಂಟೆಸ್ವಾಮಿ ಕಥಾ ಪ್ರಸಂಗ’ ನಾಟಕದಲ್ಲಿ ಕಂಪ್ಲಿಯ ಮೆಟ್ರಿ ಗ್ರಾಮದ ಕಲಾವಿದ ಕೆ.ಶಂಕರ್ ಮೆಟ್ರಿ ಇವರು ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಳ್ಳಿಯಿಂದ ದಿಲ್ಲಿ ಕಡೆಗೆ ಎಂಬಂತೆ ಮೆಟ್ರಿ ಗ್ರಾಮದಿಂದ ದುಬೈ ಕಡೆಗೆ ತಮ್ಮ ಕಲೆಯನ್ನು ಪ್ರತಿಭಿಂಬಿಸುತ್ತಿರುವುದು ಕಂಪ್ಲಿ ಕೀರ್ತಿ ಹೆಚ್ಚಿಸುವಂತಾಗಿದೆ. ಹಳ್ಳಿಯ ಸೊಗಡಿನಲ್ಲಿ ಬೆಳೆದು, ರಂಗಭೂಮಿಯಲ್ಲಿ ತಮ್ಮ ಕಲೆಯ ಕೈಚಳಕದೊಂದಿಗೆ ದುಬೈವರೆಗೆ ಕಲಾ ಪ್ರರ್ದಶನ ನೀಡುವ ಮಟ್ಟಿಗೆ ಬೆಳೆದ ಸಾಧನೆ ಅಮೋಘವಾಗಿದೆ. ಈ ಉತ್ಸವದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 'ಕಲಾ ಮೈತ್ರಿ' ತಂಡ ಡಾ.ಕೆ ರಾಮಕೃಷ್ಣಯ್ಯ ನವರ ನಿರ್ದೇಶನದ ಹೆಚ್‌.ಎಸ್ ಶಿವಪ್ರಕಾಶ್ ರಚನೆಯ ‘ಮಂಟೇ ಸ್ವಾಮಿ ಕಥಾ ಪ್ರಸಂಗ' ನಾಟಕವನ್ನು 20 ಜನ ನಟ-ನಟಿಯ ತಂಡದಲ್ಲಿ ಪ್ರದರ್ಶಿಸಲಿದ್ದಾರೆ. ಒಟ್ನಲ್ಲಿ ಮೆಟ್ರಿ ಕೆ.ಶಂಕರ್ ಇವರು ತಮ್ಮ ಕಲೆಯನ್ನು ದುಬೈನಲ್ಲಿ ಉತ್ತಮವಾಗಿ ಪ್ರದರ್ಶಿಸಲಿ ಎಂಬುದು ಕಲಾ ಪ್ರೇಮಿಗಳ ಆಶಯವಾಗಿದೆ.