ಬೆಳಗಾವಿ, 23: ಬರುವ ಆಗಸ್ಟ್ 15 ರಿಂದಲೇ ಆಟೋಮೀಟರ್ ಕಡ್ಡಾಯವಾಗಿ ಅಳವಡಿಸಲು ಕ್ರಮಕೈಗೊಳ್ಳಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಬಗ್ಗೆ ಆಟೋರಿಕ್ಷಾ ಚಾಲಕರ/ ಮಾಲೀಕರ ಸಂಘದ ಸಭೆ ಕರೆದು ಈ ಬಗ್ಗೆ ಅವರ ಜತೆ ಚಚರ್ಿಸಿ ಆಗಸ್ಟ್ 15 ರಿಂದ ಆಟೋಮೀಟರ್ ಕಡ್ಡಾಯಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಜು.23) ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸ್ ಆಯುಕ್ತರು, ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಆಟೋಚಾಲಕರ ಸಂಘಗಳ ಜತೆ ವಿಸ್ತ್ರತ ಚರ್ಚೆ ನಡೆಸಿದ ಬಳಿಕ ದರಪಟ್ಟಿಯನ್ನು ಒಂದು ವಾರದಲ್ಲಿಯೇ ಅಂತಿಮಗೊಳಿಸಬೇಕು ಎಂದು ಹೇಳಿದರು.
ಆಗಸ್ಟ್ 15 ರಿಂದ ಪ್ರಿಪೇಡ್ ಆಟೋ ಸೇವೆ:
ಆಟೋಮಿಟರ್ ಕಡ್ಡಾಯಗೊಳಿಸುವುದರ ಜತೆಗೆ ಆಗಸ್ಟ್ 15ರಿಂದಲೇ ಬೆಳಗಾವಿ ನಗರದ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಂದ ಪ್ರಿಪೇಡ್ ಆಟೋ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ
ನೀಡಿದರು.
ಈ ಬಗ್ಗೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಆಟೋಮೀಟರ್ ಕಡ್ಡಾಯಗೊಳಿಸಿದ ಮೇಲೆ ನಿರಂತರವಾಗಿ ನಿಗಾ ವಹಿಸಲು ಅಗತ್ಯ ಸಿಬ್ಬಂದಿ ನಿಯೋಜನೆಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ತಿಳಿಸಿದರು.
126 ಆಟೋ ಪರವಾನಿಗೆ ಅಮಾನತು:
ನಗರದಲ್ಲಿ ಮಿತಿಗಿಂತ ಜಾಸ್ತಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ 126 ಆಟೋಗಳ ಪರವಾನಿಗೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಿತಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುವುದನ್ನು ನಿಯಂತ್ರಿಸುವುದಕ್ಕಾಗಿ ಅಮಾನತು ನಿಧರ್ಾರ ಮಾಡಲಾಗಿರುತ್ತದೆ.
ನಿಯಮ ಪಾಲಿಸದೇ ಇರುವ ಆಟೋಚಾಲಕರ ವಿರುದ್ಧ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಮರ್ಿಟ್ ನೀಡುವಾಗ ಕಡ್ಡಾಯವಾಗಿ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ರಾಮದುರ್ಗದಲ್ಲಿ ಹೊಸದಾಗಿ ಆರಂಭಗೊಂಡಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸ್ವತಂತ್ರ ಕರ್ತವ್ಯ ನಿಭಾಯಿಸಲು ವಿವಿಧ ಅಧಿಕಾರಗಳನ್ನು ಪ್ರತ್ಯಾಯೋಜಿಸುವಂತೆ ನಿದರ್ೇಶನ ನೀಡಿದರು.
ಹದಿನೈದು ವರ್ಷ ಮೀರಿರುವ ಎಲ್ಲ ಬಗೆಯ ಪ್ರಯಾಣಿಕರ ವಾಹನಗಳನ್ನು ಪಟ್ಟಿ ಮಾಡಿ, ಪರಿಶೀಲನೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದರು.
ನಿಯಮಾವಳಿ ಪ್ರಕಾರ ಅಂತಹ ವಾಹನಗಳ ಸಂಚಾರ ನಿರ್ಬಂಧಕ್ಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗ್ದುಂ ವಿವರಿಸಿದರು.
6000 ಕ್ಕೂ ಅಧಿಕ ಆಟೋಗಳು ನಗರದಲ್ಲಿವೆ. ಅದರಲ್ಲಿ ಅಂದಾಜು ನಾಲ್ಕು ಸಾವಿರ ಆಟೋಗಳಿಗೆ ಮೀಟರ್ ಜೋಡಣೆ ಮಾಡಲಾಗಿರುತ್ತದೆ ಎಂದರು.
ಕೇಂದ್ರ ಬಸ್ ನಿಲ್ದಾಣದಿಂದ 500 ಮೀಟರ್ ಸುತ್ತಳತೆಯಲ್ಲಿ ಖಾಸಗಿ ಬಸ್/ಟೆಂಪೋಗಳ ನಿಲ್ದಾಣವನ್ನು ತೆರವುಗೊಳಿಸುವಂತೆ ಪೊಲೀಸ್ ಆಯುಕ್ತರಾದ ಡಾ.ಬಿ.ಎಸ್.ಲೋಕೇಶ್ ಕುಮಾರ್ ಸೂಚನೆ ನೀಡಿದರು.
ಆಟೋ ಮೇಲೆ ಪರ್ಮಿಟ್ ನಂಬರ್:
ರಸ್ತೆ ಸುರಕ್ಷತಾ ಅನುದಾನದಲ್ಲಿ ಪ್ರತಿ ಆಟೋರಿಕ್ಷಾದ ಮೇಲೆ ಪಮರ್ಿಟ್ ಸಂಖ್ಯೆ ಮತ್ತಿತರ ವಿವರಗಳನ್ನು ನಮೂದಿಸಲು ಸಭೆಯಲ್ಲಿ ನಿಧರ್ಾರ ಕೈಗೊಳ್ಳಲಾಯಿತು.
ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನೀಡಲಾಗುತ್ತಿರುವ ಪರವಾನಿಗೆ ಸಂಖ್ಯೆ ಹಾಗೂ ಮತ್ತಿತರ ವಿವರಗಳನ್ನು ಪ್ರತಿ ಆಟೋದ ಮೇಲೆ ಬರೆಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಪಮರ್ಿಟ್ ಹೊಂದಿರುವ ಪ್ರಯಾಣಿಕರ ವಾಹನಗಳು ತಮ್ಮ ವ್ಯಾಪ್ತಿಯನ್ನು ಮೀರಿ ಸಂಚರಿಸುವುದನ್ನು ಸುಲಭವಾಗಿ ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ವಲಯಗಳನ್ನು ಗುರುತಿಸಬೇಕು. ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪರವಾನಿಗೆ ನೀಡುವಾಗ ಆಯಾ ವಲಯಗಳನ್ನು ನಮೂದಿಸಿದಾಗ ನಿಯಮ ಉಲ್ಲಂಘಿಸುವರ ಮೇಲೆ ಕ್ರಮಕೈಗೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇ ಶನ ನೀಡಿದರು.
ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಚಿಕ್ಕೋಡಿ ಪ್ರಾದೇಶಿಕ ಅಧಿಕಾರಿ ಭೀಮನಗೌಡ ಪಾಟೀಲ ವಾಯವ್ಯ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ, ಬೈಲಹೊಂಗಲ ಹಾಗೂ ರಾಮದುರ್ಗದ ಸಹಾಯಕ ಪ್ರಾದೇಶಿಕ ಅಧಿಕಾರಿ ಧರ್ಮರಾಜ ಪವಾರ, ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಆರ್.ಆರ್.ಕಲ್ಯಾಣಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ನಗರದಲ್ಲಿ ಹೆಚ್ಚಾಗಿರುವುದರಿಂದ ಆಟೋಗಳ ಸಂಖ್ಯೆ ಆಟೋ ಪಮರ್ಿಟ್ ಬಂದ್ ಮಾಡಲು ಆಟೋ ಚಾಲಕರ ಸಂಘದ ಪದಾಧಿಕಾರಿಗಳ ಮನವಿ ಮಾಡಿಕೊಂಡರು.