ಧಾರವಾಡ 23: ಕ್ರೀಡಾ ಚಟುವಟಿಕೆಯಿಂದ ಏಕಾಗ್ರತೆ ತಾಳ್ಮೆ ಮಾನಸಿಕ ನೆಮ್ಮದಿ ದೊರೆಯುತ್ತದೆ ತಂತ್ರಜ್ಞಾನದ ಯುಗದಲ್ಲಿ ದೇಶಿ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಅವುಗಳಿಂದಾಗುವ ದೈಹಿಕ ಶ್ರಮ ವಿದ್ಯಾಥರ್ಿಗಳಿಗೆ ಮಾನಸಿಕ ನೆಮ್ಮದಿ ನೀಡುತ್ತದೆ ಎಂದು ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಬಿ.ಸಿ ಸತೀಶ್ ಹೇಳಿದರು.
ಅವರು ಸಾಲಿಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಗಾಳಿಪಟ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನೈತಿಕ ಮೌಲ್ಯಗಳಿಂದ ಪಡೆದ ಶಿಕ್ಷಣ ಸೂತ್ರ ಹೊಂದಿದ ಗಾಳಿಪಟದಂತೆ. ಇಲ್ಲವಾದಲ್ಲಿ ಸೂತ್ರವಿಲ್ಲದ ಗಾಳಿಪಟದಂತೆ ಜೀವನ ಅತಂತ್ರವಾಗುತ್ತದೆ ಎಂದರು.
ವಿದ್ಯಾಥರ್ಿಗಳಿಗೆ ಶಿಕ್ಷಕರು ಸೂತ್ರವಿದ್ದಂತೆ. ಅವರ ಮಾಗದರ್ಶನದಲ್ಲಿ ಪಡೆಯುವ ಶಿಕ್ಷಣ ಗಾಳಿಪಟದಂತೆ ಆಕಾಶದೆತ್ತರಕ್ಕೆ ನಮ್ಮನ್ನು ಕೊಂಡೊಯ್ಯಬಲ್ಲದು ಎಂದು ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿಯವರು ಹೇಳಿದರು.
ಪಠ್ಯದಷ್ಟೆ ಪಠ್ಯೇತರ ಚಟುವಟಿಕೆ ಪ್ರೋತ್ಸಾಹವನ್ನು ನಮ್ಮ ಸಂಸ್ಥೆ ನೀಡುತ್ತಾ ಬಂದಿದೆ. ಮೈದಾನದಲ್ಲಿ ಆಡುವ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕೆ ಹೊರತು ನಾಲ್ಕು ಗೋಡೆಗಳ ಮಧ್ಯೆ ಮೊಬೈಲ್ನಲ್ಲಿ ಆಡುವ ಆಟಗಳನ್ನಲ್ಲ ಎಂದು ಸಾಲಿಮಠ ಆಂಗ್ಲ ಮಾದ್ಯಮ ಶಾಲೆಯ ಸಂಸ್ಥಾಪಕ ಸಿದ್ದೇಶ್ವರ ಸಾಲಿಮಠರವರು ಹೇಳಿದರು.
ವೇದಿಕೆಯ ಮೇಲೆ ಮಹಾವೀರ ಉಪಾಧೆ್ಯೆ, ಪ್ರಸನ್ನ ಮಿಶ್ರಿಕೋಟಿ ಉಪಸ್ಥಿತರಿದ್ದರು. ಡಿ.ವ್ಹಿ ಕುಲಕಣರ್ಿ ಸ್ವಾಗತಿಸಿದರು. ಪ್ರಾಚಾರ್ಯ ಮಂಜುನಾಥ ಯಾವಗಲ್ ವಂದಿಸಿದರು. ಮಂಜುನಾಥ ದಾಸನಕೊಪ್ಪ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸುಮಾರು 200 ವಿದ್ಯಾಥರ್ಿಗಳು ಈ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದರು. ಪ್ರಸನ್ನ ಮಿಶ್ರಿಕೋಟಿಯವರ ಬೂಕ್ರ್ಯಾಂಗ್ ಎಸೆತ ಪ್ರಮುಖ ಆಕರ್ಷಣೆ ಆಗಿತ್ತು.