ಹುತಾತ್ಮ ಹೋರಾಟಗಾರರ ಸ್ಮರಣೆ ದೇಶಕ್ಕಾಗಿ ತ್ಯಾಗ-ಬಲಿದಾನಕ್ಕೆ ಸದಾ ಸಿದ್ಧರಿರುವಂತೆ ಯುವಕರಿಗೆ ಕರೆ

ಲೋಕದರ್ಶನ ವರದಿ

ವಿಜಯಪುರ 31:ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರು ವೀರವನಿತೆಯರಂತೆ ದೇಶಕ್ಕಾಗಿ ಈಗಿನ ಯುವ ಪೀಳಿಗೆ ತ್ಯಾಗ ಬಲಿದಾನಕ್ಕೆ ಸಿದ್ದರಿರಬೇಕು ಎಂದು ಜಿಲ್ಲಾದಿಕಾರಿ ಎಸ್,ಬಿ. ಶೆಟ್ಟೆಣ್ಣವರ ಹೇಳಿದರು

     ನಗರದ ಹುತಾತ್ಮರ (ಮೀನಾಕ್ಷಿ) ವೃತ್ತದಲ್ಲಿಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ,  ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮಹಾನಗರ ಪಾಲಿಕೆ, ಭಾರತ ಸೇವಾದಳ ಹಾಗೂ ನೆಹರು ಯುವ ಕೇಂದ್ರ ಇವರುಗಳ ಸಹಾಯೋಗದಲ್ಲಿ ಹಮ್ಮಿಕೊಂಡಿದ್ದ ಹುತಾತ್ಮರ ಸ್ಮರಣೆಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಅರ್ಪಣೆ ಮಾಡಿ ಅವರು ಮಾತನಾಡಿದರು 

ಗಾಂಧೀಜಿಯವರು ತಮ್ಮ ಜೀವನವನ್ನೆ ಪಣಕ್ಕಿಟ್ಟು ಸ್ವತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಗಾಂಧೀಜಿಯವರ ಈ ಮಹಾನ್ ತ್ಯಾಗ ಅವಿಸ್ಮರಣಿಯವಾದುದು. ಅವರಷ್ಟೆ ಅಲ್ಲದೆ ಮಹಾನ್ ನಾಯಕರು, ವೀರಯೋದರು, ವೀರವನಿತೆಯರು ಈ ದೇಶದ ಉಳುವಿಗಾಗಿ ಶ್ರಮಿಸಿದ್ದಾರೆ. ಅವರಂತೆ ಈಗಿನ ಯುವ ಪೀಳಿಗೆ ತ್ಯಾಗಬಲಿದಾನಕ್ಕೆ ಸಿದ್ದರಿರಬೇಕು ಎಂದು ಹೇಳಿದರು.

     ಪ್ರಪಂಚದಲ್ಲೆ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ದೇಶ ನಮ್ಮದು  ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.  ಮುಂದೊಂದು ದಿನ ನಮ್ಮ ರಾಷ್ಟ್ರವನ್ನು ವಿಶ್ವವೇ ಕೊಂಡಾಡುವ ಸಮಯ ಬರಲಿದೆ ಅದಕ್ಕಾಗಿ ಉತ್ತಮ ರಾಷ್ಟ್ರ ನಿಮರ್ಾಣಕ್ಕೆ ಎಲ್ಲರು ಕೈ ಜೋಡಿಸಬೇಕು ಎಂದು ಯುವ ಸಮುದಾಯಕ್ಕೆ ಕರೆ ನೀಡಿದರು. ಪುಷ್ಪಾರ್ಪಣ ಕಾರ್ಯಕ್ರಮ ಮುಗಿದ ನಂತರ ಗಾಂಧಿವೃತ್ತದವರೆಗೆ  ವಿಧ್ಯಾಥರ್ಿಗಳು  ಪಥಸಂಚಲನವನ್ನು ಹಮ್ಮಿಕೊಂಡು ಗಾಂಧೀಜಿ ಪ್ರತಿಮೆಗೆ  ಪುಷ್ಪಾರ್ಪಣೆ ಮಾಡಲಾಯಿತು 

ಕಾರ್ಯಕ್ರಮದಲ್ಲಿ ವಿಜಯಪುರ ತಹಶಿಲ್ದಾರ್ ಶ್ರೀಮತಿ ಮೋಹನ್ಕುಮಾರಿ, ಸೋಮಶೇಖರ ರಾಠೋಡ, ನಾಗೇಶ್ ರಾಠೋಡ, ಭಾರತ ಸೇವಾದಳದ ಅದ್ಯಕ್ಷ ಎಸ್.ಪಿ ಬಿರಾದಾರ,  ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಎ.ಬಿ ಲೋಣಿ. ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಡಿ.ದಯಾನಂದ, ಅರ್.ಕೆ ಜಾಗಿರದಾರ, ರಾಜು ಹಿಪ್ಪರಗಿ. ರವಿ ಕುಲಕಣರ್ಿ, ಎನ್.ಎಸ್. ನೋಡಲ್ ಅಧಿಕಾರಿ  ಎಚ್,ಎಂ ಸಜ್ಜಾದೆ,  ಡಿ.ಬಿ.ಹಿರೇಕರೂರ, ಮಲ್ಲಿಕ್ಸಾಬ್ ಸೇರಿದಂತೆ ವಿದ್ಯಾಥರ್ಿಗಳು, ಇತರರು,  ಉಪಸ್ಥಿತರಿದ್ದರು.