ಲೋಕದರ್ಶನ ವರದಿ
ಬೆಳಗಾವಿ:19 ಕಥಾ ಮಾಧ್ಯಮದ ಬೆಳವಣಿಗೆಗೆ ಮಹಿಳಾ ಸಾಹಿತಿಗಳ ವೈಶಿಷ್ಟ್ಯ ಕೊಡುಗೆ ಜೊತೆಗೆ ಮಹಿಳೆಯೆ ಕಥೆಯ ಹೀರೋ ಆಗಿರುವುದಲ್ಲದೆ, ಆಕೆ ರಚಿಸುವ ಸಾಹಿತ್ಯ ವಿಭಿನ್ನ ದೃಷ್ಟಕೋನಗಳಿಂದ ರಚಿಸಲ್ಪಟ್ಟಿದೆ ಎಂದು ಕನರ್ಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಕವಿತಾ ಕುಸುಗಲ್ಲ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ 18 ರಂದು ಜಿಲ್ಲಾ ಲೇಖಕಿಯರ ಸಂಘದಿಂದ ಆಯೋಜಿಸಲಾಗಿದ್ದ ದಿ.ಎಚ್.ಬಿ.ಕುಲಕಣರ್ಿಯವರ ಸ್ಮರಣಾರ್ಥವಾಗಿ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಾಶ್ವೇತಾ ದೇವಿಯವರ "ಸ್ತನ ದಾನ'' ತ್ರಿವೇಣಿ ಯವರ "ಬೆಡ್ ನಂಬರ್ ಏಳು", ವೈದೇಹಿಯವರ "ಅಮ್ಮಚ್ಚಿ " ವೀಣಾ ಶಾಂತೇಶ್ವರರವರ ದುಷ್ಯಂತನನ್ನೇ ಧಿಕ್ಕರಿಸುವಂತ ಆಧುನಿಕ ಶಾಕುಂತಲೆಯ ವಿಭಿನ್ನ. ಸ್ವರೂಪದ ಕಥೆಗಳು ಸಾಹಿತ್ಯದಲ್ಲಿ ತಲ್ಲಣವನ್ನೂ ,ಹೊಸ ಆಯಾಮವನ್ನೂ ಸೃಷ್ಟಿಸಿವೆ . ಹೀಗೆ ಮಹಿಳಾ ಸಾಹಿತ್ಯವನ್ನು ಉಚ್ಚಸ್ಥಿತಿಗೆ ತಲುಪಿಸುವ ಜವಾಬ್ದಾರಿಯ ಕುರಿತು ಈಗಿನ ಲೇಖಕಿಯರು ಚಿಂತಿಸುವಂತೆ ಕಿವಿ ಮಾತು ಹೇಳಿದರು.
ದತ್ತಿ ದಾನಿಗಳಾದ ದೀಪಿಕಾ ಚಾಟೆ ಹಾಗು ಸುನಂದ ಮುಳೆಅವರು ಸ್ವರಚಿತ ಎಐಪಿಸಿ ಗೀತೆಗಳ ಧ್ವನಿ ಸುರಳಿ " ಹಮ್ ಏಕ್ ಹೈ " ಗೀತೆಯ ಗಾಯನದೊಂದಿಗೆ ಬಿಡುಗಡೆಯಾಯಿತು.
ಅಧ್ಯಕ್ಷತೆ ವಹಿಸಿದ್ದ ಜ್ಯೋತಿ ಬದಾಮಿಯವರು ಸರ್ವರನ್ನು ಸ್ವಾಗತಿಸಿ, ಲೇಖಕಿಯರ ಸಂಘದ ಸದಸ್ಯೆಯರ ಸಾಹಿತ್ಯಿಕ ಅಭಿವೃದ್ಧಿ ಕುರಿತು ಹಾಗು ದಿ.ಎಚ್.ಬಿ.ಕುಲಕಣರ್ಿಯವರ ಜೀವಿತ ಸಾಧನೆಯ ಬಗ್ಗೆ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ದೀಪಿಕಾ ಚಾಟೆಯವರ ಸ್ವರಚಿತ ಕವನ ಗಾಯನ ನೈನಾ ಗಿರಿ ಗೌಡರ ತಂಡದವರು ಹಾಡಿದರು. ಸುನಂದ ಎಮ್ಮಿಯವರು "ಶರಣ ಉರಿಲಿಂಗ ಪೆದ್ದಿ ಕಾಳವ್ವೆ ನಾಟಕ ರಚಿಸಿ, ನಿದರ್ೇಶಿಸಿ ಭುವನೇಶ್ವರಿ ಉತ್ಸವದ ನಾಟಕ ಸ್ಪಧರ್ೆಯಲ್ಲಿ ಬಹುಮಾನ ಪಡೆಯುವಲ್ಲಿ ಶ್ರಮಿಸಿದ್ದಕ್ಕಾಗಿ ಸನ್ಮಾನಿಸಲಾಯಿತು.
ದೀಪಿಕಾ ಚಾಟೆ ಯವರು ದತ್ತಿ ನಿಧಿಯ ಮಹತ್ವ ಹಾಗೂ ತಮ್ಮ ತಂದೆ ಎಚ್.ಬಿ.ಕುಲಕಣರ್ಿಯವರು ಜಮಖಂಡಿಯಲ್ಲಿ ಸಲ್ಲಿಸಿದ ಸಾಹಿತ್ಯ, ಸಾಮಾಜಿಕ ಸೇವೆಯ ಕುರಿತು ಮಾತನಾಡುತ್ತಾ ತಮ್ಮ ತಂದೆಯವರ ಪ್ರಭಾವದಿಂದಾಗಿಯೇ ತಾವು ಸಾಹಿತಿಯಾಗಿಹೊರಹೊಮ್ಮಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.
ಸದಸ್ಯೆಯರಿಗಾಗಿ "ಚಿತ್ರ ನೋಡಿ ಕಥೆ ಬರೆಯುವ ಸ್ಪಧರ್ೆಯನ್ನುಆಯೋಜಿಸಲಾಗಿತ್ತು. ಅಧಿಕ ಸಂಖ್ಯೆಯಲ್ಲಿ ಲೇಖಕಿಯರು ಭಾಗವಹಿಸಿದ್ದು ವಿಶೇಷವಾಗಿತ್ತು. ವಿಶೇಷ ಅತಿಥಿಗಳಾಗಿ ಕಥೆಗಾಥರ್ಿ ಬೆಂಗಳೂರಿನ ಮಾಧುರಿ ಕರ್ಣಮ್ ಆಗಮಿಸಿದ್ದರು.
ಆಶಾ ಕಡಪಟ್ಟಿ, ಸುಮಾ ಕಿತ್ತೂರ, ಸುನಂದಾ ಮೂಲಿಮನಿ, ನೀಲಗಂಗಾ ಚರಂತಿಮಠ, ನಿರ್ಮಲಾ ಭಟ್ಟಲ, ಶಾಂತಾ ಚೀಲದ, ಪೂಣರ್ಿಮಾ ಶಂಕರ, ಕುಸುಗಲ್ಲ ಮುಂತಾದ ಸಾಹಿತಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮೊದಲಿಗೆ ಡಾ.ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಹಾಗೂ ಕೇಂದ್ರ ಮಂತ್ರಿ ದಿ. ಅನಂತ ಕುಮಾರ,ಸದಸ್ಯೆ ದಿ.ಶಕುಂತಲ ಮೂಲಿಮನಿಯವರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂದಾ ಘಾಗರ್ಿ ನಿರೂಪಿಸಿದರು.ಆಶಾ ಯಮಕನಮಡರ್ಿ ವಂದಿಸಿದರು.
ಪ್ರತಿಯೊಬ್ಬರಿಗೂ ಮನರಂಜನೆ ಅಗತ್ಯ: ಅನಿಲ ಬೆನಕೆ
ಬೆಳಗಾವಿ.ನ.19: ಇಂದಿನ ಆಧುನಿಕ ಮತ್ತು ಒತ್ತಡದ ಜೀವನದಲ್ಲಿ ಮನುಷ್ಯನಿಗೆ ನೆಮ್ಮದಿ ಮತ್ತು ಮನರಂಜನೆ ಅಗತ್ಯವಾಗಿದ್ದು, ಮನರಂಜನೆ ಮೂಲಕ ಶಾರೀರಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಹೇಳಿದರು.
ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ರವಿವಾರ ಸಾಯಂಕಾಲ 7 ಗಂಟೆಗೆ ಸೂರಜ ಅಮ್ಯೂಸಮೆಂಟ ಮತ್ತು ಇವೆಂಟ್ಸ್ ವತಿಯಿಂದ ಆಯೋಜಿಸಲಾದ ಫನ್ ಫೆರ ಮನರಂಜನೆ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಫನ್ ಫೇರ ದಂತಹ ಮನರಂಜನೆ ಮೇಳಗಳು ಬೆಳಗಾವಿ ಆಗಮಿಸುತ್ತಿರುವುದು ಒಳ್ಳೆಯ ಸಂಗತಿಯಾಗಿದೆ. ಕುಟುಂಬದ ಜೊತೆಗೆ ಕೆಲ ಹಾಗೂ ಚಿಕ್ಕ ಮಕ್ಕಳ ನಡುವೆ ಕಾಲ ಕಳೆದು ಅವರೊಂದಿಗೆ ಬೆರೆತು ಆಡವಾಡುವ ಸಂತಸದ ಕ್ಷಣಗಳನ್ನು ಪ್ರತಿಯೊಬ್ಬರು ಅನುಭವಿಸಬೇಕು. ಪ್ರತಿನಿತ್ಯದ ಒತ್ತಡದ ಬದುಕಿನಿಂದ ದೂರವಾಗಿ ಎಲ್ಲರೂ ಮನರಂಜನೆಗಳ ಆಟದಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಹೇಳಿದರು.
ಈ ಫನ್ ಫೇರ ಉದ್ಘಾಟನೆ ಸಂದರ್ಭದಲ್ಲಿ ಆಯೋಜಕರಾದ ಎಸ್.ಕೆ.ಪಾಟೀಲ, ಸೂರಜ ಪಾಟೀಲ, ಮಹ್ಮದ ಕಬೀರ , ಬಿ.ಎಂ.ಹನೀಫ್, ಪ್ರಕಾಶ ಕಾಲಕುಂದ್ರಿಕರ, ವಿಕಾಸ ಕಲಘಟಗಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಈ ಮೇಳದಲ್ಲಿ ಪ್ಯಾರಿಸನ ಐಫೆಲ್ ಟಾವರ, ಜ್ಯಾಯಿಂಟ ವ್ಹಿಲ್, ಬ್ರೆಕ್ ಡಾನ್ಸ, ಕೋಲಂಬಸ, ಡ್ರ್ಯಾಗನ ಟ್ರೇನ್, ವಾಟರ್ ಬೋಟ್, ಬಾನ್ಸಿ,ಹೆಲಿಕ್ಯಾಪ್ಟರ್ ಸೇರಿದಂತೆ ಇನ್ನಿತರ ಆಟೋಪಕರಣಗಳು ಈ ಮೇಳದಲ್ಲಿವೆ. ಅದರಂತೆ ಇಲ್ಲಿ ಗೃಹಪಯೋಗಿ ವಸ್ತುಗಳ ಪ್ರದರ್ಶನ, ಮನೋರಂಜನೆ ಆಟಗಳು , ಆಹಾರ ಮಳಿಗೆಗಳು ಸಹ ಭಾಗವಹಿಸಿವೆ. ಈ ಮೇಳವು ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ ಎಂದು ಆಯೋಜಕ ಎಸ್.ಕೆ.ಪಾಟೀಲ ಅವರು ತಿಳಿಸಿದರು.