ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ ಸಂಘದ ಸದಸ್ಯರಲ್ಲಿ ಹರ್ಷ
ಕೊಪ್ಪಳ 05 ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕದಿಂದ ಕೊಡುಮಾಡುವ, ದತ್ತಿನಿಧಿ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆ ನಾಲ್ಕು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿದೆ. ಜಿಲ್ಲೆಯ ಹಿರಿಯ ಪತ್ರಕರ್ತ ಅಲ್ಲಾವುದ್ದೀನ್ ಯಮ್ಮಿ, ಗಂಗಾವತಿಯ ವೀರಾಪೂರ ಕೃಷ್ಣ, ಕೊಪ್ಪಳದ ಎನ್.ಎಂ ದೊಡ್ಡಮನಿ ಹಾಗೂ ಶಿವರಾಜ ನುಗಡೋಣಿ ಸೇರಿದಂತೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಆಯ್ಕೆಯ ಆದೇಶ ಪ್ರತಿ ಹೊರಡಿಸುವ ಮೂಲಕ ಅಭಿನಂದಿಸಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಎಲ್ಲರಿಗೂ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ, ರಾಜ್ಯ ಸಮಿತಿ ಸದಸ್ಯ ಸಾದಿಕ ಅಲಿ, ವಿಶೇಷ ಆವ್ಹಾನಿತ ರಾಜ್ಯಸಮಿತಿ ಸದಸ್ಯ ಹೆಚ್.ಎಸ್ ಹರೀಶ, ಜಿ.ಎಸ್ ಗೋನಾಳ, ಸಂಘದ ಗೌರವಾಧ್ಯಕ್ಷ ಬಸವರಾಜ ಗುಡ್ಲಾನೂರ, ಪ್ರಧಾನ ಕಾರ್ಯದರ್ಶಿ ವೈ. ನಾಗರಾಜ, ಖಜಾಂಚಿ ರಾಜು ಬಿ.ಆರ್, ಉಪಾಧ್ಯಕ್ಷ ರುದ್ರಗೌಡ ಪಾಟೀಲ, ಕಾರ್ಯದರ್ಶಿ ಈರಣ್ಣ ಕಳ್ಳಿಮನಿ ಹಾಗೂ ಸಂಘದ ಎಲ್ಲಾ ಸರ್ವ ಸದಸ್ಯರು ಹಿರಿಯರು ಅಭಿನಂದಿಸಿದ್ದಾರೆ.