ಸುಮಧುರ ಭಾವಗೀತ ಸಂಜೆ

ಧಾರವಾಡ೧೬: ನಗರದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಜರುಗಿದ ಮಾಸಿಕ ಭಾವಗೀತ ಸಂಜೆ ಕಾರ್ಯಕ್ರಮವು ವೈವಿಧ್ಯಮಯ ಗೀತೆಗಳ ಸುಮಧುರ ಪ್ರಸ್ತುತಿಯೊಂದಿಗೆ ಯಶಸ್ವಿಯಾಗಿ ಜರುಗಿತು.  

ಆರಂಭದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಸ್ವಾಗತ ಕೋರಿ, ಸಾಹಿತ್ಯದಲ್ಲಿ, ರಂಗಭೂಮಿಯಲ್ಲಿ ಅಪಾರ ಸೇವೆಗೈದು ನಮ್ಮನ್ನಗಲಿದ ಮಹನೀಯರಾದ ರಂಗಭೂಮಿ ದಿಗ್ಗಜ ಮಾಸ್ಟರ್ ಹಿರಣ್ಯಯ್ಯ, ವಿಜ್ಞಾನ ಬರಹಗಾರ, ಲೇಖಕ, ಚಿಂತಕ ಹ.ಶಿ.ಭೈರನಟ್ಟಿ, ರಂಭೂಮಿ ನಟ, ನಿದರ್ೆಶಕ, ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಅನಿಲ ದೇಸಾಯಿ, ಹಿರಿಯ ಸಾಹಿತಿ  ನಿರಂಜನ ವಾಲಿಶೆಟ್ಟರ ಹಾಗೂ ಸಂಘಟಿಕ ಮನೋಜ ಹಾನಗಲ್ ಅವರಿಗೆ ಒಂದು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.

  ನಂತರದಲ್ಲಿ ಧಾರವಾಡದ ಗಾಯಕಿ ದೀಪಾ ಹಾವನೂರ ಅವರು ಅಂಬಿಕಾತನಯದತ್ತರ ರಚನೆಗಳಾದ 'ಜೈ ಭೂಮಾತೆ ಜೈ ಭಾರತ ಮಾತೆ', 'ನನ್ನ ಕೈ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ, ' ಮುಂತಾದ ಜನಪ್ರೀಯ ಗೀತೆಗಳನ್ನು ಮತ್ತು ಕುವೆಂಪು ಅವರ 'ಪಡುವಣ ಬಾನಿನ ನೀಲಿನ ಹಣೆಯಲಿ', ಎಂ.ಡಿ.ಗೋಗೇರಿಯವರ 'ಜೀವನ ವೆಂಬುದು ಮುಳ್ಳಿನ ಹಾಸಿಗೆ', ಡಾ.ಬುದ್ಧಣ್ಣ ಹಿಂಗಮೀರೆ ಅವರ 'ಅರಳಿಸೆನ್ನ ಅಂತರಂಗ ಕಮಲದಂತೆ ನಿರ್ಮಲಾ', ಪ್ರೊ.ಕೆ.ಎಸ್.ನಿಸಾರಅಹಮ್ಮದ ಅವರ 'ಸಗ್ಗದ ಸಿರಿ ಬಂತು ನಮ್ಮೂರಿಗೆ' ಹಾಗೂ ಆನಂದ ಕಂದರ 'ಎನಿತು ಇನಿತು ಈ ಕನ್ನಡ ನುಡಿ' ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳ ಮನರಂಜಿಸಿದರು.  

ತಬಲಾದಲ್ಲಿ ಅನಿಲ ಮೇತ್ರಿ ಹಾಗೂ ಹಾಮರ್ೊನಿಯಂದಲ್ಲಿ ಪರಶುರಾಮ ಕಟ್ಟಿಸಂಗಾವಿ ಉತ್ತಮ ಸಾಥ್ ನೀಡಿದರು.  ಪ್ರಕಾಶ ಬಾಳಿಕಾಯಿ ನಿರೂಪಿಸಿ ವಂದಿಸಿದರು.  

ಗಣ್ಯರಾದ ಪ್ರೊ.ಎ.ಜಿ.ಸಬರದ, ಬಿ.ಎಲ್.ಪಾಟೀಲ, ಜಿ.ಜಿ.ಭರಭರಿ, ಡಾ.ಜಿ.ಕೆ.ಹಿರೇಮಠ, ಎಸ್.ಎಸ್.ಬಂಗಾರಿಮಠ, ಎಮ್.ಎಮ್.ಮಾನೆ, ರಮೇಶ ಕಲಘಟಗಿ, ಸುಧೀಂದ್ರ ಗುಂಜಿಕರ, ಡಿ.ಕೆ.ಹಾವನೂರ, ಗೋಪಾಲ ಅಟವಲೆ, ಪ್ರಭಾವತಿ ಕಾನಗೊ, ರಮಾ ಗಂಭೀರ, ಚಂದ್ರಿಕಾ ನಾಡಿಗೇರ ಸುಮನ ರಾಮದಾಸ್ ಮುಂತಾದವರು ಉಪಸ್ಥಿತರಿದ್ದರು