ಧಾರವಾಡ 15: ಮುಷಾಯಿರಾದಲ್ಲಿ ಬಹಳ ಆಳವಾದ ಅಧ್ಯಯನ, ಕುರಾನದ ಸಂಪೂರ್ಣ ಮಾಹಿತಿ ತಿಳಿದುಕೊಂಡು, ಅಥರ್ೈಸಿಕೊಂಡು ನುಡಿಯಬೇಕು. ಏಕೆಂದರೆ ಪ್ರವಾದಿ ಹಜರತ್ ಮಹ್ಮದ್ ಸಲ್ಲ ಲ್ಲಾಹೂ-ಅಲೈ-ವ-ಸಲಂ ಅವರ ಜೀವನದ ಬಗ್ಗೆ, ಅವರು ಜನರಿಗೆ ತೋರಿದ ಪವಾಡಗಳ ಬಗ್ಗೆ ಮುಷಾಯಿರಾದಲ್ಲಿ ನುಡಿಯಲಾಗುತ್ತದೆ ಎಂದು ಕನರ್ಾಟಕ ಉದರ್ು ಅಕ್ಯಾಡೆಮಿಯ ಅಧ್ಯಕ್ಷ ಡಾ. ಸಯೀದ್ ಖಾದರ ನಿಜಾಮ್ ಸರಗಿರೊ ಹೇಳಿದರು.
ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಈದ್ ಎ ಮಿಲಾದುನ್ನಬಿ ಪ್ರಯುಕ್ತ ಮೆಹಫಿಲೆ ನಾಥಿಯಾ ಮುಷಾಯಿರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಬಸ್ಥಾನದಲ್ಲಿ ಶರೀಫ ಉದ್ದೀನ್ ಎಂಬ ದೇವರ ಭಕ್ತನಿಗೆ ಒಂದು ದಿನ ಕನಸಿನಲ್ಲಿ ದೇವರ ಎದುರು ನಾಥಿಯಾ ಮುಷಾಯಿರಾ ತಾನು ಮಾಡುತ್ತಿದ್ದು, ಸ್ವತಃ ದೇವರೆ ತನ್ನ ಸ್ಥಾನವನ್ನು ಬಿಟ್ಟು ಅವನ ಮುಂದೆ ಕುಳಿತು ಆಲಿಸುತ್ತಿರುವ ಕನಸನ್ನು ಕಂಡನು. ಅವನ ನಾಥಿಯಾ ಮುಷಾಯಿರಾ ಎಷ್ಟೊಂದು ಪ್ರಭಾವಿಯಾಗಿತ್ತೆಂದರೆ ದೇವರು ತನ್ನ ಮೈಮೇಲೆ ಇದ್ದ ಶಾಲ್ನ್ನು (ಹೊದಿಕೆಯನ್ನು) ಅವರ ಮೈಮೇಲೆ ಹಾಕಿದಂತೆ ಭಾಸವಾಯಿತು. ಅಷ್ಟರಲ್ಲಿ ಕನಸಿನಿಂದ ಎಚ್ಚರಗೊಂಡು ಶರೀಫ ಉದ್ದಿನ್ ತನ್ನ ತಲೆ ದಿಂಬಿನ ಹತ್ತಿರ ಆ ಶಾಲ್ ಇದ್ದದ್ದು ಕಂಡು ಆಶ್ಚರ್ಯ ಚಕಿತಗೊಂಡ. ಈ ವಿಷಯವನ್ನು ಅವರು ಯಾರಿಗೂ ತಿಳಿಸಲಿಲ್ಲ. ಮರುದಿನ ಅವರ ಗೆಳೆಯ ದೇವರು ನಿನಗೆ ಮುಷಾಯಿರಾ ಕಾರ್ಯಕ್ರಮದಲ್ಲಿ ಶಾಲು ನೀಡಿದ್ದು ನಾನು ಕಂಡಿದ್ದೇನೆ. ಆ ದೇವರನ್ನು ಸ್ತುತಿಸಿದನ್ನು ಇನ್ನೊಂದು ಸಾರಿ ನನಗೆ ಹೇಳು ಎಂದಾಗ ಅವರಿಗೆ ಆಶ್ಚರ್ಯವಾಯಿತು. ಅಂದಿನಿಂದ ಈ ನಾಥಿಯಾ ಮುಷಾಯಿರಾ ಪ್ರಾರಂಭವಾಯಿತು ಎಂದರು.
ರಾತ್ ಆಕೆ ಚೆಹರಾ ಧೋತಿ ಹೈ ಮದಿನೇಮೆ
ಶಬನಮ್ ಭೀ ವಜುಕರಕೆ ಗಿರತಿ ಹೈ ಮದಿನೇಮೆ
ಗುಸ್ತಾಕಿ ನ ಹೋ ಮದಿನೇಮೆ ಎ ಸೋಚಕರ ಹರಡಾಲಿ ಹಿಲತಿ ಹೈ ಮದಿನೇಮೆ
ಹೈದ್ರಾಬಾದನಿಂದ ಆಗಾ ಸರೊಷ, ಅಮರಾವತಿಯ ಡಾ. ಖಾಲಿದ ನಯಾರ್, ಮಾಲೇಗಾಂವ್ ಸೊಹಿಲ್ ಆಜಾದ್, ಮುಂಬೈನ ಸಾಕೀಬ ಮಿಲನರಿ, ಶಾಹನೂರ ಖಾಲಿದ ರೋಷನ್, ಶಿವಮೊಗ್ಗ ಫಾರೂಕ್ ಶಾಮ್ಸ, ಬೆಳಗಾವಿಯ ಅಹಮದ್ಪಾಶಾ ಸಾಗರ, ಶರಿಫ ಅಹ್ಮದ, ಹುಬ್ಬಳ್ಳಿಯ ಸೊಹಿಲ್ ನಿಜಾಮ್, ಮೈಸೂರಿನ ಡಾ. ಮೆಹಜಬೀನ ನಿಜಾಂ ಗಜಲ್, ಉದರ್ು ಅಕ್ಯಾಡೆಮಿಯ ಸದಸ್ಯ ಸೊಹಿಲ್ ನಿಜಾಮ ಬುರಬುರಿ, ಧಾರವಾಡದ ಮೆಹರ್ ಅಫರೊಜ, ಧಾರವಾಡದ ಶೇಖಸನಾ, ಸನಾಉಲ್ಲಾ ಸನಾ, ಅಬ್ದುಲ್ ರಶೀದ್ ಷಾದ ಮುಂತಾದ ಕವಿ ಹಾಗೂ ಕವಿಯತ್ರಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುರಾನ್ ಪಠಣ ನಜೀರ ಅಹ್ಮದ ಬಳಬಟ್ಟಿ ಮಾಡಿದರು. ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ್, ಕಾರ್ಯದಶರ್ಿ ನಜೀರ ಹುಸೇನ್ ಮನಿಯಾರ್, ಉಪಾಧ್ಯಕ್ಷ ಅಲ್ ಹಜ್ ಅಬ್ದುಲ್ ಅಜೀಜ ದಾಸನಕೊಪ್ಪ, ಜಂಟಿ ಕಾರ್ಯದಶರ್ಿ ರಫೀಕ ಅಹ್ಮದ್ ಶಿರಹಟ್ಟಿ ಉಪಸ್ಥಿತರಿದ್ದರು.
ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಹ್ಮದ್ ಗೌಸ ಮಕಾನದಾರ ಕಾರ್ಯಕ್ರಮ ನಿರೂಪಣೆ ಅಬ್ದುಲ್ ರಶಿದ ಸಾದ, ವಂದನಾರ್ಪಣೆ ಎಸ್.ಎಸ್.ಸೈಯ್ಯದ್ ಮಾಡಿದರು. ಆಡಳಿತ ಮಂಡಳಿಯ ಸದಸ್ಯರು, ಕಛೇರಿಯ ಸಿಬ್ಬಂದಿ ಹಾಗೂ ಸಮಾಜ ಬಾಂಧವರು ಮುಂತಾದವರು ಪಾಲ್ಗೊಂಡಿದ್ದರು.