ಮತದಾರರ ಯಾದಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಮೇಘಣ್ಣವರ ಖುದ್ದು ಪರಿಶೀಲನೆ


ಬೈಲಹೊಂಗಲ 16: ತಾಲೂಕಿನ ಸಾಣಿಕೊಪ್ಪ, ಚಿವಟಗುಂಡಿ, ಬೈಲವಾಡ ಗ್ರಾಮಗಳಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಭೇಟಿ ನೀಡಿ, ಮತದಾರರ ಯಾದಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಮತಗಟ್ಟೆ ಮಟ್ಟದ ಅಧಿಕಾರಿಗಳು ಮಾಡುತ್ತಿರುವ ಕಾರ್ಯ ವೈಖರಿಯನ್ನು ಸ್ವತಃ ಖುದ್ದಾಗಿ ಗುರುವಾರ ಪರಿಶೀಲಿಸಿದರು. 

         ತಾಲೂಕಿನ ಸಾಣಿಕೊಪ್ಪ, ಚಿವಟಗುಂಡಿ, ಬೈಲವಾಡ ಗ್ರಾಮಗಳಲ್ಲಿರುವ ಹರಿಜನ್ ಕೇರಿಗಳಿಗೆ, ಅಲ್ಪ ಸಂಖ್ಯಾತರ ಮನೆಗಳಿಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ಮತದಾರರ ಯಾದಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ನಮೂನೆ 6, 7, 8, 8ಎ ಗಳಲ್ಲಿ ಅರ್ಹ ಮತದಾರರಿಂದ ಅಜರ್ಿ ಪಡೆದು ಭಾರತ ಚುನಾವಣಾ ಆಯೋಗದ ನಿಯಮಾನುಸಾರ ನಿಗದಿತ ಅವಧಿಯಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಶಿಸ್ತುಬದ್ಧವಾಗಿ, ಸುವ್ಯವಸ್ಥಿತವಾಗಿ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು. 

      ಅರ್ಹರು ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ವಗರ್ಾವಣೆ ಹಾಗೂ ಮರಣ ಹೊಂದಿದವರ ಹೆಸರು ತೆಗೆದು ಹಾಕುವುದು ಸೇರಿದಂತೆ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕೆಲಸ ಕಾಳಜಿಯಿಂದ ಮಾಡಬೇಕೆಂದರು. 

   ಮತದಾರರ ಸಂಕ್ಷೀಪ್ತ ಪರಿಷ್ಕರಣೆ ಕಾರ್ಯ ಪ್ರತಿವರ್ಷ ಮಾಡಲಾಗುತ್ತಿದ್ದು, ಯಾರು 18 ವರ್ಷ ಆಗುತ್ತಾರೋ ಅವರಿಗೆ ಮತದಾರ ಗುರುತಿನ ಚೀಟಿ ವಿತರಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು. ಇದೇ ವೇಳೆ ಬೈಲಹೊಂಗಲ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ, ಈಗಾಗಲೇ ಸ್ವೀಕರಿಸಿದ ಅಜರ್ಿಗಳನ್ನು ಪರಿಶೀಲಿಸಿದರು. 

      ಪ್ರಾದೇಶಿಕ ಆಯುಕ್ತರ ಆಪ್ತ ಸಹಾಯಕ ಪ್ರಸನ್ನಕುಮಾರ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲ್ದಾರ ಪ್ರಕಾಶ ಗಾಯಕವಾಡ, ಕಂದಾಯ ನಿರೀಕ್ಷಕ ಐ.ಕೆ.ಕುಂದುನಾಯ್ಕ, ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮೀ ಕೂಗುನವರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಮತಗಟ್ಟೆ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ಫೊಟೊ ಕ್ಯಾಪ್ಸನ:ಎಚ್15-ಬಿಎಲ್ಎಚ್5 

ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತದಾರರ ಯಾದಿಗಳ ವಿಶೇಷ ಸಂಕ್ಷೀಪ್ತ ಪರಿಷ್ಕರಣೆ ಕುರಿತು ಮತಗಟ್ಟೆ ಮಟ್ಟದ ಅಧಿಕಾರಿಗಳು ಮಾಡುತ್ತಿರುವ ಕಾರ್ಯ ವೈಖರಿಯನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಗುರುವಾರ ಪರಿಶೀಲಿಸಿದರು.