ಗದಗ 18: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಸಮನ್ವಯ ಸಮಿತಿ ಸಭೆಯು ದಿ. 17 ರಂದು ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜಿ.ಪಂ. ಮುಖ್ಯಕಾರ್ಯನಿವರ್ಾಹಕ ಅಧಿಕಾರಿ (ಪ್ರಭಾರ) ಎಸ್.ಸಿ. ಮಹೇಶ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಎಸ್.ಎಮ್. ಹೊನಕೇರಿಯವರು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆಯನ್ನು ಅಗಸ್ಟ 10 ರಂದು ಆಚರಿಸಲಾಗುತ್ತಿದ್ದು ಜಿಲ್ಲೆಯಲ್ಲಿನ 1 ರಿಂದ 19 ವರ್ಷದ ಒಟ್ಟು 3,18,873 ಮಕ್ಕಳಿಗೆ ಅಲ್ಬೆಂಡಜಾಲ್ ಮಾತ್ರೆಯನ್ನು ವಿತರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಈ ಕುರಿತು ಅಂಗನವಾಡಿ, ಆಶಾ ಕಾರ್ಯಕತರ್ೆಯರಿಗೆ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಅಗಸ್ಟ 10 ರಂದು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಿ ಶಾಲೆ ಮತ್ತು ಅಂಗನವಾಡಿ ಕೇಂದಗಳಲ್ಲಿ ಅಲ್ಬಂಡೆಜಾಲ್ ಮಾತ್ರೆಯನ್ನು ವಿತರಿಸಲಾಗುವುದು. ಸದರಿ ಸಮಯದಲ್ಲಿ ಬಿಟ್ಟು ಹೋದ ಮಕ್ಕಳಿಗೆ ಅಗಸ್ಟ 17 ರಂದು (ಮಾಪ್ ಅಪ್ ಡೇ ಯಂದು ) ವಿತರಿಸಲಾಗುವುದು. ಎಂದು ಡಾ.ಎಸ್.ಎಮ್. ಹೊನಕೇರಿ ತಿಳಿಸಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಾರಾಟಕ್ಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶ್ರೀಮತಿ ಅಕ್ಕಮಹಾದೇವಿ, ಪಧವಿ ಪೂರ್ವ ಶಿಕ್ಷಣ ಇಲಾಖೆಯ ಈಶ್ವರ ಹುಲ್ಲೂರ, ತಾಲೂಕಾ ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಕನರ್ಾಟಕ ರಾಜ್ಯ ಮಾಧ್ಯಮಿಕ ನೌಕರರ ಸಂಘದ ಸಂಚಾಲಕರಾದ ಎಸ್ ಎಮ್ ಕೊಟಗಿ, ಸ್ವಚ್ಛ ಭಾರತ ಅಭಿಯಾನದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ಎವಿಡೆನ್ಸ ಆ್ಯಕ್ಷನ್ ಸಿಬ್ಬಂದಿ, ಆರ್.ಬಿ.ಎಸ್.ಕೆ ತಂಡದ ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಡಾ. ಎಸ್.ಎಮ್. ಹೊನಕೇರಿ ಅವರು ಸರ್ವರನ್ನು ಸ್ವಾಗತಿಸಿ ವಂದಿಸಿದರು.