ಕೊಪ್ಪಳ 18: ಬಾಲ್ಯ ವಿವಾಹ ತಡೆಗಟ್ಟಲು ಗ್ರಾಮ ಪಂಚಾಯತ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಕೊಪ್ಪಳ ತಹಶೀಲ್ದಾರ ಜಿ.ಬಿ. ಮಜ್ಜಿಗೆ ಅವರು ಗ್ರಾ.ಪಂ. ಪಿಡಿಓಗಳಿಗೆ ಸೂಚನೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ ಮತ್ತು ರೀಡ್ಸ್ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಕುರಿತು ತಹಶೀಲ್ದಾರ ಕಾಯರ್ಾಲಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ಕೊಪ್ಪಳ ತಾಲೂಕ ಮಟ್ಟದ ಮಕ್ಕಳ ಹಕ್ಕುಗಳ ರಕ್ಷಣಾ ಸಮತಿ ಹಾಗೂ ಸಮನ್ವಯ ಮತ್ತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಯನ್ನು ಈಗಾಗಲೇ ರಚನೆಯಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಬಾಲ್ಯ ವಿವಾಹ ಕುರಿತು ಇಲಾಖೆ ಮತ್ತು ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಬಾಲ್ಯ ವಿವಾಹ ತಡೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಬಾಲ್ಯ ವಿವಾಹ ಪ್ರಕರಣಗಳು ಕಡಿಮೆ ಆಗುತ್ತಾ ಬರುತ್ತಿವೆ ಅಂದ ಮಾತ್ರಕ್ಕೆ ನಾವು ನೀವು ಎಲ್ಲರೂ ಸುಮ್ಮನೆ ಕುಳಿತರೆ ಪುನಃ ಬಾಲ್ಯವಿವಾಹದಂತಹ ಪ್ರಕರಣಗಳು ಪುನಃ ಮರುಕಳಿಸುವ ಸಾಧ್ಯತೆಗಳು ಹೆಚ್ಚು. ಕಾರಣ ಎಲ್ಲರೂ ಪ್ರತಿಯೊಂದು ಇಲಾಖೆ ಸಹಕಾರ ಮತ್ತು ಒಗ್ಗಟ್ಟಿನಿಂದ ಮಕ್ಕಳ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು. ಸಾಮೂಹಿಕ ವಿವಾಹ ಆಯೋಜಕರು ನೊಂದಾವಣೆಯನ್ನು ಕಡ್ಡಾಯವಾಗಿ ನೊಂದಣಿ ಮಾಡಿಸಬೇಕು. ಗ್ರಾಮ ಲೆಕ್ಕಿಗರು ಮಕ್ಕಳ ಸಂರಕ್ಷಣೆಯ ಪಾತ್ರ ಮತ್ತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮೂಡಿಸಬೇಕು. ಇತ್ತೀಚಿಗೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಐತಿಹಾಸಿಕ ದೇವಸ್ಥಾನ, ಪಾಕರ್್ಗಳಲ್ಲಿ ಮಕ್ಕಳು ಮತ್ತು ಮಕ್ಕಳೊಂದಿಗೆ ತಾಯಂದಿರು ಭಿಕ್ಷಾಟನೆ ಮಾಡುವುದು ಕೊಪ್ಪಳ ತಾಲೂಕದಲ್ಲಿ ಕಂಡು ಬರುತ್ತಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಮೇಲುಸ್ತುವಾರಿಯನ್ನು ತೆಗೆದುಕೊಂಡು ವಿವಿಧ ಇಲಾಖೆಗಳ ಸಹಕಾರದೊಂದಿಗೆ ದಾಳಿ ಮಾಡಿ ಪುನರ್ವಸತಿಗೊಳಿಸಬೇಕು. ಮಕ್ಕಳ ಸಹಾಯವಾಣಿ 1098 ವ್ಯಾಪಕ ಪ್ರಚಾರಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬಾಲ, ಬಾಲಕಿಯರ ವಸತಿ ನಿಲಯಗಳ ಮುಂದೆ ಮಕ್ಕಳ ಸಹಾಯವಾಣಿ-1098 ಲೋಗೊ ಮತ್ತು ಬರಹಗಳನ್ನು ಲಭ್ಯವಿರುವ ಅನುದಾನವನ್ನು ಬಳಕೆ ಮಾಡಿಕೊಂಡು ಚಿತ್ರೀಕರಿಸಬೇಕು ಎಂದು ಕೊಪ್ಪಳ ತಹಶೀಲ್ದಾರ ಜಿ.ಬಿ. ಮಜ್ಜಿಗೆ ಅವರು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ತಾಲೂಕು ಮಟ್ಟದ ಸಮನ್ವಯ ಸಮಿತಿಯ ಕಾರ್ಯದಶರ್ಿ ಸಿಂಧು ಅಂಗಡಿ ಮಾತನಾಡಿ, ಈಗಾಗಲೇ ಮಕ್ಕಳ ರಕ್ಷಣಾ ಸಮಿತಿ ರಚನೆಯಾಗಿದ್ದು, ಚಟುವಟಿಕೆಯಲ್ಲಿ ನಿಧಾನಗತಿಯಲ್ಲಿದೆ. ತೀವ್ರ ಗತಿಯಲ್ಲಿ ಸಮಿತಿಯ ಪುನರ್ ಸಭೆಗಳನ್ನು ಕರೆಯುವದರ ಮೂಲಕ ಮಕ್ಕಳ ಸಂರಕ್ಷಣೆ ಕುರಿತು ಚಚರ್ಿಯನ್ನು ಬಲಪಡಿಸಿ ಕಾರ್ಯನ್ಮುಖರನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ತಾಲೂಕ ಪಂಚಾಯತ ಸ.ನಿ. ಹನುಮಂತಪ್ಪ, ಪಿ.ಎಸ್.ಐ ಪಕೀರಮ್ಮ, ನಗರ ಠಾಣೆ.ಯ ಎ.ಎಸ್.ಐ. ಶರಣಪ್ಪ ಅಂಗಡಿ, ನಗರ ಸಭೆ ಕಂದಾಯ ನಿರೀಕ್ಷಕ ರಾಘವೇಂದ್ರ, ಹಿರಿಯ ನೊಂದಣಿ ಅಧಿಕಾರಿ ಶ್ರೀಶೈಲ, ಹಿರಿಯ ಆರೋಗ್ಯ ಸಹಾಯಕ ಎಸ್.ಬಿ. ಚಿಕ್ಕನರಗುಂದ, ಕಾಮರ್ಿಕ ನಿರೀಕ್ಷಕ ಹೊನ್ನಪ್ಪ, ಸಮಾಜ ಕಲ್ಯಾಣ ಇಲಾಖೆಯ ವಿಜಯ ಕುಮಾರ, ಬಿ.ಆರ್.ಪಿ. ಶರಣಪ್ಪ ರಡ್ಡೇರ, ಮೇಲ್ವೆಚಾರಕೀ ಮಂದಾಕಿನಿ, ರೀಡ್ಸ್ ಸಂಸ್ಥೆ ಬಳ್ಳಾರಿ ನಿದರ್ೇಶಕ ತಿಪ್ಪೇಶಪ್ಪ, ಯೋಜನಾ ವ್ಯವಸ್ಥಾಪಕ ಯಮನೂರಪ್ಪ ನಾಯಕ್, ಮಕ್ಕಳ ಸಹಾಯವಾಣಿ-1098 ಸಂಯೋಜಕ ಶರಣಪ್ಪ ಸಿಂಗನಾಳ, ರೀಡ್ಸ್ ಸಂಸ್ಥೆ ಕೊಪ್ಪಳ ಜಿಲ್ಲಾ ಸಂಘಟಕ ಚಂದನ್ ಉಪಸ್ಥಿತರಿದ್ದರು.