ಲೋಕದರ್ಶನ ವರದಿ
ಮುಧೋಳ 17: ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ಮುಧೋಳ-ಕುಳಲಿ ರಸ್ತೆಯಲ್ಲಿರುವ ಡಿಸ್ಟಲರಿ ಸಂಸ್ಕರಣಾ ಘಟಕದ ಈಟಿಪಿ ವಿಭಾಗದಲ್ಲಿ ಭಾನುವಾರ ಸ್ಪೋಟ ಸಂಭವಿಸಿದ ಘಟನಾ ಸ್ಥಳಕ್ಕೆ ಕಾಮರ್ಿಕ ಸಚಿವ ವೆಂಕಟರಮಣಪ್ಪ ಹಾಗೂ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಸೋಮವಾರ ಮಧ್ಯಾನ್ಹ12.00 ಗಂಟೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಸ್ಪೋಟಕ್ಕೆ ಕಾರಣವೇನು?ಎಂಬುದರ ಬಗ್ಗೆ ಕಾಖರ್ಾನೆಯ ಡಿಸ್ಟಲರಿ ವಿಭಾಗದ ಅಧಿಕಾರಿಯಿಂದ ಮಾಹಿತಿ ಪಡೆದ ಬಳಿಕ ಕಾಮರ್ಿಕ ಇಲಾಖೆಯ ಸಚಿವ ವೆಂಕಟರಮಣಪ್ಪನವರು ಸುದ್ದಿಗಾರರೊಂದಿಗೆ ಮಾತನಾಡಿ, ಸ್ಪೋಟ ಸಂದರ್ಭದಲ್ಲಿ ಮೃತರಾದ ನಾಲ್ವರ ಕುಟುಂಬ ಗಳಿಗೆ ಕಾಮರ್ಿಕ ಇಲಾಖೆಯ ವಿಮಾ ವಿಭಾಗದ ವತಿಯಿಂದ ರೂ.8 ಲಕ್ಷ ಹಾಗೂ ರೂ.2.5ಲಕ್ಷ ಒಟ್ಟು ರೂ.10.5 ಲಕ್ಷ ಪರಿಹಾರ ನೀಡುವದಾಗಿ ತಿಳಿಸಿದ ಅವರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಘಟನೆಯ ವಿವರಣೆಯನ್ನು ಪಡೆದ ನಂತರ ಕಾಖರ್ಾನೆಯ ಮಾಲೀಕರೊಂದಿಗೆ ಮಾತನಾಡಿ, ಮೃತರ ಕುಟುಂಬಗಳಿಗೆ ಇನ್ನೂ ಹೆಚ್ಚಿಗೆ ಪರಿಹಾರ ದೊರಕಿಸಿ ಕೊಡಲು ಪ್ರಯತ್ನಿಸುವದಾಗಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ, ರೈತ ಸಂಘದ ಮುಖಂಡ ಮುತ್ತಪ್ಪ ಕೋಮಾರ ಅವರು ಸಂಕಷ್ಟದಲ್ಲಿರುವ ಮೃತರ ಕುಟುಂಬ ಗಳಿಗೆ ಇನ್ನೂ ಹೆಚ್ಚಿನ ಪರಿಹಾರ ನೀಡುವಂತೆ ಸಚಿವರನ್ನು ಒತ್ತಾಯಿಸಿದರು. ಗುಲಬಗರ್ಾ ಜಿಲ್ಲೆಯ ಕಾಖರ್ಾನೆಯೊಂದರಲ್ಲಿ ಸ್ಪೋಟ ಗೊಂಡು ಮರಣ ಹೊಂದಿದ ಮೃತರ ಕುಟುಂಬಕ್ಕೆ ಅಲ್ಲಿಯ ಕಾಖರ್ಾನೆಯವರು ರೂ.25 ಲಕ್ಷ ಪರಿಹಾರ ನೀಡಿದ್ದಾರೆ. ಅದೇ ಮಾದರಿ ಯಲ್ಲಿ ಈ ದುರಂತದಲ್ಲಿ ಮಡಿದ ಸಂಕಷ್ಟದಲ್ಲಿರುವ ಮೃತರ ಕುಟುಂಬಕ್ಕೂ ರೂ.25ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದರು.
ಸ್ಪೊಟಗೊಂಡ ಕಾಖರ್ಾನೆಯ ತೆರವುಗೊಳಿಸುವ ಕಾಯರ್ಾಚರಣೆ ಮುಕ್ತಾಯದ ಹಂತ ತಲುಪಿದೆ. ತೆರವು ಕಾಯರ್ಾಚರಣೆ ಸಂದರ್ಭ ದಲ್ಲಿ ನುಜ್ಜು ಗುಜ್ಜಾದ ಕೇವಲ ನಾಲ್ಕು ದ್ವಿಚಕ್ರ ವಾಹನಗಳು ದೊರಕಿವೆ.
ಬೀಳಗಿ ಕ್ಷೇತ್ರದ ಶಾಸಕ ಹಾಗೂ ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ಅಧ್ಯಕ್ಷ ಮುರುಗೇಶ ನಿರಾಣಿ ಹಾಗೂ ನಿರಾಣಿ ಶುಗರ್ಸ ಕಾರ್ಯನಿವರ್ಾಹಕ ನಿದರ್ೇಶಕ ಸಂಗಮೇಶ ನಿರಾಣಿ ಅವರು ಸಚಿವರಿಗೆ ಸ್ಪೋಟಕ ಆದ ಘಟನೆ ಬಗ್ಗೆ ಸಮಗ್ರ ವಿವರಣೆ ನೀಡಿದರು.
ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಘಟನೆಗೆ ಸಂಬಂಧಿಸಿ ಮಾಹಿತಿ ಪಡೆದರು. ಆದರೆ ಯಾವುದೇ ಪ್ರತಿಕ್ರೀಯೆ ನೀಡಲಿಲ್ಲ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ[ಸಿಒ] ಗಂಗೂಬಾಯಿ ಮಾನಕರ ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಹಾಗೂ
ಕಾಮರ್ಿಕ,ಅಗ್ನಿಶಾಮಕ, ಅಬಕಾರಿ,ಆರೋಗ್ಯ ಹಾಗೂ ಇನ್ನಿತರ ಇಲಾಖೆಗಳ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.