ಹಿರೇಬಾಗೇವಾಡಿ ಸರಕಾರಿ ಪ್ರೌಢ ಶಾಲೆಗೆ ಡಿಡಿಪಿಐ ಭೇಟಿ: ಪರಿಶೀಲನೆ

ಲೋಕದರ್ಶನ ವರದಿ

ಬೆಳಗಾವಿ,17 : ತಾಲೂಕಿನ ಹಿರೇಬಾಗೇವಾಡಿ ಸರಕಾರಿ ಪ್ರೌಢ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಎ.ಬಿ.ಪುಂಡಲಿಕ ಬೇಟಿ ನೀಡಿ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಶಾಲಾ ದಾಖಲಾತಿಗಳ ಪರೀಶಿಲನೆ ನಡೆಸಿದರು.   

ವಿದ್ಯಾಥರ್ಿಗಳ ದಾಖಲಾತಿ ಕೊರತೆ, ಕುಡಿಯುವ ನೀರು, ಶೌಚಾಲಯಗಳ ಕೊರತೆ, ವಿದ್ಯಾಥರ್ಿ ವೇತನ ಸೌಲಭ್ಯ ಪಡೆಯುವಲ್ಲಿನ ವೈಪಲ್ಯತೆ, ವಿದ್ಯಾಥರ್ಿಗಳ ಪಾಲಕರ ಜೊತೆ ಅಸಭ್ಯ ವರ್ತನೆ, ವಿಶೇಷಚೇತನ ವಿದ್ಯಾಥರ್ಿಗೆ ಪರೀಕ್ಷೆಯಲ್ಲಿ ಬರೆಯಲು ನಿರಾಕರಣೆ ಶಾಲಾ ಅನುದಾನದ ಸಮರ್ಪಕ ಬಳಕೆಯಲ್ಲಿ ವೈಪಲ್ಯತೆಯು ಸೇರಿದಂತೆ ಹಲವಾರು ದೂರುಗಳು ವಿದ್ಯಾಥರ್ಿಗಳ ಪಾಲಕರಿಂದ ಕೇಳಿ ಬಂದ ಹಿನ್ನಲೆಯಲ್ಲಿ ಈ ಬಗ್ಗೆ ಶಿಕ್ಷಣಾಧಿಕಾರಿಗಳು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಉತ್ತರ ಕನರ್ಾಟಕ ಜನ ಸಂಗ್ರಾಮ ಪರಿಷತ್ತ ಒತ್ತಾಯಿಸಿತ್ತು. 

ಈ ಹಿನ್ನಲೆಯಲ್ಲಿ  ಡಿ.ಡಿ.ಪಿ.ಐ ಎ.ಬಿ.ಪುಂಡಲಿಕ  ಶಾಲೆಗೆ ಬೇಟಿ ನೀಡಿ ಪರೀಶಿಲನೆ ನಡೆಸಿ ಶಿಕ್ಷಕರು ಹಾಗೂ ಪರಿಷತ್ತಿನ  ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಚಚರ್ಿಸಿದರು.   ಉ.ಕ.ಜನ ಸಂಗ್ರಾಮ ಪರಿಷತ್ತಿನ ಪ್ರಧಾನ ಕಾರ್ಯದಶರ್ಿ ಮಂಜುನಾಥ ವಸ್ತ್ರದ ಮಾತನಾಡಿ ಇಲ್ಲಿನ ಪ್ರೌಢ ಶಾಲೆಯಲ್ಲಿನ ಅವ್ಯವಸ್ಥೆಯ ಕುರಿತಂತೆ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಹಿಂದೆ ದೂರು ದಾಖಲಿಸಿ ಅಗತ್ಯ ಕ್ರಮಕ್ಕಾಗಿ ಒತ್ತಾಯಿಸಿದ್ದರು. ಆದರೆ ಆಗ ಕಾಟಾಚಾರಕ್ಕ ಎಂಬಂತೆ ಪರೀಶೀಲನೆ ನಡೆಸಿ ಹೋದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಪಲರಾಗಿದ್ದಾರೆ ಎಂಬ ಆರೋಪಗಳು ಗ್ರಾಮಸ್ಥರಿಂದ ಕೇಳಿಬಂದಿದ್ದವು. ಈ ಹಿನ್ನಲೆೆಯಲ್ಲಿ ಡಿ.ಡಿ.ಪಿ.ಐ ಅವರಿಗೆ ಮೇಲ್ಮನವಿ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ. ಈಗ ತಾವೂ ಸಹ ಕಾಟಾಚಾರಕ್ಕೆ ಎಂಬಂತೆ ವಿಚಾರಣೆ ನಡೆಸುವ ಬದಲಾಗಿ ಎಲ್ಲ ಗೊಂದಲಗಳಿಗೆ ತಿಲಾಂಜಲಿ ನೀಡಿ ಸರಕಾರಿ ಪ್ರೌಢ ಶಾಲೆಯನ್ನು ಜನ ಸ್ನೇಹಿಯಾಗಿ ಪರಿವರ್ತಸಬೇಕೆಂದು ಆಗ್ರಹಿಸಿದರು.   

ಸಂಗ್ರಾಮ ಪರಿಷತ್ತಿನ ಅಧ್ಯಕ್ಷ ಪಿ.ಎಂ.ಪಾಟೀಲ ಮಾತನಾಡಿ ಇಲಾಖೆಯ ನಿಯಮಾವಳಿಗಳನ್ನು ಮೀರಿ ಎಲ್ಲೆಂದರಲ್ಲಿ ಖಾಸಗಿ ಕಾನ್ವೇಂಟ ಶಾಲೆಗಳಗೆ ಅನುಮತಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳೆ ನೀಡುತ್ತಿದ್ದಾರೆ. ಹಾಗಾಗಿ ಇದು ಅಂಗನವಾಡಿ ಕೇಂದ್ರದಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಕ್ಕಳ  ದಾಖಲಾತಿ ಕಡಿಮೆಯಾಗಲು ಮುಖ್ಯ ಕಾರಣವಾಗುತ್ತಿದೆ ಎಂದು  ಶಿಕ್ಷಣಾಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು. 

ಸಭೆಯಲ್ಲಿ ನಡೆದ ವಿಷಯಗಳ ಬಗ್ಗೆ ಕೂಲಕುಷವಾಗಿ ಚಚರ್ೆ ನಡೆಸಿ ಮಾತನಾಡಿದ  ಡಿ.ಡಿ.ಪಿ.ಐ ಎ.ಬಿ.ಪುಂಡಲಿಕ ಸಾರ್ವಜನಿಕರ ದೂರುಗಳು  ಹಾಗೂ ಶೈಕ್ಷಣಿಕ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ತಾವು ನೀಡಿದ ಎಲ್ಲ ಸಲಹೆ ಸೂಚನೆಗಳನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿಲಾಗುವುದು ಎಂದರು. 

ಸರಕಾರಿ ಪ್ರೌಢ ಶಾಲೆಯ ಈ ಹಿಂದಿನ ಪ್ರಭಾರಿ ಮುಖ್ಯ ಶಿಕ್ಷಕರಾಗಿದ್ದ ತಾರಾಪೂರ ಅವರ ಕಾರ್ಯವೈಖರಿಯ ಬಗ್ಗೆ ಬಂದ ದೂರುಗಳನ್ನು ಪರೀಶಿಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವುಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.