ಲೋಕದರ್ಶನ ವರದಿ
ಕೊಪ್ಪಳ 24: ಮುಸ್ಲಿಂ ಎಂಪ್ಲಾಯಿಸ್ ಮತ್ತು ಕಲ್ಚರಲ್ ಅಸೋಸಿಯೆಷನ್ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಎಂ. ಬುಡನ್ಖಾನ್ ಅವರು ಹಿರಿಯ ನ್ಯಾಯವಾದಿ ಪೀರಾಹುಸೇನ್ ಹೊಸಳ್ಳಿಯವರ ನಿವಾಸಕ್ಕೆ ಭೇಟಿ ನೀಡಿ ಕನರ್ಾಟಕ ರಾಜ್ಯ ಮುಸ್ಲಿಂ ಸರಕಾರಿ ನೌಕರರ ಸಂಘಟನೆ ಕುರಿತು ಚಚರ್ಿಸಿದರು.
ಮುಸ್ಲಿಂ ಎಂಪ್ಲಾಯಿಸ್ ಮತ್ತು ಕಲ್ಚರಲ್ ಅಸೋಸಿಯೆಷನ್ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಎಂ. ಬುಡನ್ಖಾನ್ ಅವರು ಕುಷ್ಟಗಿ ನಗರದಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಎಂಪ್ಲಾಯಿಸ್ ಮತ್ತು ಕಲ್ಚರಲ್ ಅಸೋಸಿಯೆಷನ್ ವತಿಯಿಂದ ಮುಸ್ಲಿಂ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಕೊಪ್ಪಳದ ನ್ಯಾಯವಾದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಲ್ಪಸಂಖ್ಯಾತರ ಮೋಚರ್ಾದ ಖಾಯಂ ಆಹ್ವಾನಿತ ಸದಸ್ಯ ಪೀರಾಹುಸೇನ್ ಹೊಸಳ್ಳಿಯವರ ನಿವಾಸಕ್ಕೆ ಭೇಟಿ ನೀಡಿದ್ದರು.
ನಂತರ ಮಾತನಾಡಿ ರಾಜ್ಯದಲ್ಲಿ ಮುಸ್ಲಿಂ ನೌಕರರ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಹಾಗೂ ಅಲ್ಪ ಸಂಖ್ಯಾತರ ಶೈಕ್ಷಣಿಕದ ಬಗ್ಗೆ ರಾಜ್ಯ ಸರಕಾರದಿಂದ ಹಾಗೂ ಕೇಂದ್ರ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಹಾಗೂ ಸಂಘಟನೆಯನ್ನು ಕೊಪ್ಪಳದಿಂದಲೇ ಹಿರಿಯ ನ್ಯಾಯವಾದಿ ಪೀರಾಹುಸೇನ್ ಹೊಸಳ್ಳಿಯವರು ಸಂಘಟನೆ ಬಗ್ಗೆ ಸಾಕಷ್ಟು ಶ್ರಮಿಸಿ ಸಂಘಟನೆಯ ಬೀಜ ಬಿತ್ತಿದವರು ಇಂದು ರಾಷ್ಟ್ರ ಮಟ್ಟದಲ್ಲಿ ಸಂಘಟನೆ ಬಲಿಷ್ಠಗೊಂಡಿರುವುದು ಸಂತಸ ತಂದಿದೆ ಜಿಲ್ಲೆಯಲ್ಲಿ ಸರಕಾರಿ ಮುಸ್ಲಿಂ ನೌಕರರ ಸಂಘಟನೆ ಮಾಡಲು ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಕೆ-ಮೆಕ್ಕಾ ಸಂಘಟನಾ ಕಾರ್ಯದಶರ್ಿ ನಬಿಸಾಬ ನರಗುಂದ, ರಾಜ್ಯ ಸಹ ಸಂಘಟನಾ ಕಾರ್ಯದಶರ್ಿ ಡಾ.ಹಸನ್ಸಾಬ ನಿಂಗಾಪೂರ, ಹಿರಿಯ ಸಾಹಿತಿ ಹಾಗೂ ಬುಡನ್ಖಾನ್ ಅವರ ಬಾಲ್ಯ ಸ್ನೇಹಿತ ಸಿ.ವಿ.ಜಡಿಯವರ್, ಹಿರಿಯ ಪತ್ರಕರ್ತ ಎಂ. ಸಾದಿಕ್ಅಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.