ಜನರು ಸುಖ, ಶಾಂತಿ. ನೆಮ್ಮದಿಯಿಂದ ಬದುಕುವಂತಾಗಲಿ: ಬಸವರಾಜ ಬೊಮ್ಮಾಯಿ

May the people live in happiness, peace and tranquility: Basavaraja Bommai

ಜನರು ಸುಖ, ಶಾಂತಿ. ನೆಮ್ಮದಿಯಿಂದ ಬದುಕುವಂತಾಗಲಿ: ಬಸವರಾಜ ಬೊಮ್ಮಾಯಿ   

 ಶಿಗ್ಗಾವಿ 08: ಜನರು ಅತ್ಯಂತ ಸುಖ, ಶಾಂತಿ, ನೆಮ್ಮದಿಯಿಂದ ಬದುಕುವಂತಾಗಲಿ, ಇಲ್ಲಿನ ಜನರು ಎಷ್ಟು ನೆಮ್ಮದಿಯಿಂದ ಬದುಕಿದ್ದಾರೆ ಎಂದು ಇಡೀ ಜಗತ್ತಿನ ಜನರೂ ಬಂದು ನೋಡುವಂತಾಗಲಿಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.   ಪಟ್ಟಣದ ಶ್ರೀ ವಿರಕ್ತ ಮಠದಲ್ಲಿ ನಡೆದ 32ನೇ ಶರಣ ಸಂಸ್ಕೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿರಕ್ತಮಠ ತನ್ನದೇ ಆದ ಇತಿಹಾಸ, ಪರಂಪರೆ ಪವಾಡಗಳಿಂದ ಬಂದಿರುವ ಮಠ. ಪವಾಡ ಅಂದರೆ ಯಾವುದು ಜನರಿಗೆ ಅಸಾಧ್ಯವಾಗಿರುತ್ತದೆಯೋ ಅದನ್ನು ಸರಳವಾಗಿ ಸಾಧ್ಯ ಮಾಡುವುದೇ ಪವಾಡ. ಸೃಷ್ಟಿಯಲ್ಲಿರುವುದನ್ನು ಗುರುತು ಮಾಡುವುದು. ಸೃಷ್ಟಿಯಲ್ಲಿ ಅದ್ಭುತವಾದ ಶಕ್ತಿ ಇದೆ.  

ಆದರೆ, ಅದನ್ನು ಎಲ್ಲರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದರೆ, ಅದನ್ನು ಗುರುಗಳ ಮೂಲಕ ನೋಡಲು ಸಾಧ್ಯ. ಹುಟ್ಟಿನಿಂದ ಯಾರೂ ಜ್ಞಾನಿಗಳಲ್ಲ. ಎಲ್ಲವನ್ನೂ ಅನುಭವದಿಂದ ಕಲಿತುಕೊಳ್ಳಬೇಕು. ತಾಯಿಯೇ ಮೊದಲ ಗುರು, ಸಂಸ್ಕಾರ ಕೊಟ್ಟ ಸ್ವಾಮೀಜಿ ಎರಡನೇ ಗುರು. ಪಾಠ ಹೇಳಿದು ಗುರುಗಳು ಎಲ್ಲಕ್ಕಿಂತ ಅರಿವೇ ಗುರು. ಮನುಷ್ಯನಿಗೆ ಜ್ಞಾನದಿಂದ ಅಕ್ಷರ ಜ್ಞಾನ, ಅದರಿಂದ ಸಾಹಿತ್ಯ ಜ್ಞಾಪಾಲ್ಗೊಂಡಂದ ವಿಜ್ಞಾನ, ತಂತ್ರಜ್ಞಾನ, ಈಗ ಕೃತಕ ಬುದ್ದಿಮತ್ತೆ ಅಂತ ಬಂದಿದೆ. ಯಾವುದು ಸಹಜವಾಗಿ ಇಲ್ಲವೋ ಅದು ಕೃತಕ. ಹೀಗೆ ಎಲ್ಲ ಅನುಭವದ ನಂತರ ಅರಿವೆ ಗುರು. ಈ ಸ್ಥಿತಿಗೆ ಬರಬೇಕೆಂದರೆ ಮನುಷ್ಯ ಬಹಳಷ್ಟು ಜಾಗೃತರಾಗಿರಬೇಕು. ಜೀವನದಲ್ಲಿ ನಡೆಯುವ ಪ್ರತಿಯೊಂದು ಸಣ್ಣ ಘಟನೆಯೂ ಕೂಡ ನಮಗೆ ಪಾಠವನ್ನು ಕಲಿಸುತ್ತದೆ. ಅದು ಅನುಭವ. ಅನುಭವದಿಂದ ಅನುಭಾವ ಎನ್ನುತ್ತಾರೆ. ಅಂತಹ ಒಂದು ವಿಚಾರ ಇಲ್ಲಿ ಚರ್ಚೆ ಯಾಗುತ್ತಿದೆ ಎಂದರು. ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಬದುಕು ನಮ್ಮ ಕೈಯಲ್ಲಿ ಇದೆ. ನಮ್ಮ ಬಳಿ ಯಾವುದಿಲ್ಲವೋ ಅದರ ಬಗ್ಗೆ ನಾವು ಹೆಚ್ಚು ಚಿಂತನೆ ಮಾಡುತ್ತೇವೆ. ನಮ್ಮ ಬಳಿ ಏನಿದೆ ಅದನ್ನು ಹೇಗೆ ಸಬ್ಬಳಕೆ ಮಾಡಬೇಕು ಎನ್ನುವುದು ಮುಖ್ಯ ಇಂತಹ ಚಿಂತನೆಗಳೇ ಈ ಮಠದ ಶ್ರೀಮಂತಿಕೆ. ಮಠದ ಶ್ರೀಮಂತಿಕೆ ಮಠದ ಆಸ್ತಿಯ ಮೇಲಲ್ಲ. ಮಠಕ್ಕೆ ಬಂದಾಗ ಶಾಂತಿ ಸಿಕ್ಕಾಗ ಶ್ರೀಮಠ ಶ್ರೀಮಂತವಾಗಿದೆ ಎಂದು ಅರ್ಥ. ಹಿರಿಯ ಗುರುಗಳ ತಪಸ್ಸಿನ ಫಲ ಇಲ್ಲಿ ಶಾಂತವಾತಾವರಣ ಇದೆ. ಹಿಂದಿನ ವಾತಾವರಣವನ್ನು ಸಂಗನಬಸವ ಮಹಾಸ್ವಾಮಿಗಳು ಉಳಿಸಿಕೊಂಡು ಬಂದಿದ್ದಾರೆ. ಸಂಗನಬಸವನ ಸ್ವಾಮೀಜಿಗಳು ನೀರಿನಂತೆ ಎಲ್ಲರೊಳಗೂ ಬೆರೆಯುತ್ತಾರೆ ಎಂದರು.  

  ಈ ಮಠದಲ್ಲಿ ಭಕ್ತ ಮತ್ತು ಗುರುವಿನ ನಡುವೆ ಅಂತರವಿಲ್ಲ. ಹೀಗಾಗಿ ಗುರುಗಳಿಗೆ ಎಲ್ಲರ ಸುಖ ದುಖವೂ ಗೊತ್ತಿದೆ. ಸಂಕಷ್ಟ ಕಾಲದಲ್ಲಿ ಯಾರಿಗೆ ಯಾವ ರೀತಿ ಆಶೀರ್ವಾದ ಮಾಡುವುದು ಅವರಿಗೆ ಗೊತ್ತಿದೆ. ಅವರಿಗೆ ಕೊಡುವ ವಿದ್ಯೆ ಗೊತ್ತಿದೆ. ಆದರೆ, ಅದನ್ನು ತೆಗೆದುಕೊಳ್ಳುವುದು ನಮಗೆ ಗೊತ್ತಿರಬೇಕು. ಅದಕ್ಕೆ ಪ್ರಾಮಾಣಿಕತೆ ಭಕ್ತಿ ಬೇಕು. ಭಕ್ತಿ ಎಂದರೆ ಉತ್ಪಷ್ಟವಾದ ಪ್ರೀತಿಯೇ ಭಕ್ತಿ, ಅದು ಕರಾರು ರಹಿತ ಪ್ರೀತಿ, ದೇವರ ಜಗುಲಿಯ ಮುಂದೆ ಐದು ನಿಮಿಷ ಶಾಂತವಾಗಿ ಕುಳಿತರೆ ಎಷ್ಟು ನೆಮ್ಮದಿ ಸಿಗುತ್ತದೆ ನೋಡಿ. ಗುರುವಿನಲ್ಲಿ ಕರಗಬೇಕು. ಕರಗಿ ಲೀನವಾಗಬೇಕು. ಆಗ ಆಶೀರ್ವಾದ ಸಿಗುತ್ತದೆ. ಅಂತಹ ಆಶೀರ್ವಾದ ನನಗೆ ಸಿಕ್ಕಿದೆ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ವಿರಕ್ತ ಮಠದ ಸಂಗನಬಸವ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.   ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಮಹಾರಾಜರು, ಶರಣ ಸಂಸ್ಕೃತಿ ಉತ್ಸವದ ಮಲ್ಲಿಕಾರ್ಜುನ ರೆಡ್ಡರ ಹಾಗೂ ಆರ್ಗ್ಯಾನಿಕ್ ಅರಮನೆಯ ಸಿದ್ದು ಶಿರಸಂಗಿ ಪಾಲ್ಗೊಂಡಿದ್ದರು.