ಉ.ಕ.ಜಿಲ್ಲೆಯು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯಾಗಲಿ : ಶಾಸಕ ಸತೀಶ್ ಸೈಲ್
May U.K. district be a drug and cybercrime free district: MLA Satish Sail
ಉ.ಕ.ಜಿಲ್ಲೆಯು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯಾಗಲಿ : ಶಾಸಕ ಸತೀಶ್ ಸೈಲ್
ಕಾರವಾರ 09 : ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದು ಮುಂದಿನ ದಿನದಲ್ಲಿ ಈ ಕಾರ್ಯಕ್ಕೆ ಯಶಸ್ಸು ಖಚಿತವಾಗಿ ದೊರೆಯಲಿದೆ ಎಂದು ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ ಕೆ. ಸೈಲ್ ಹೇಳಿದರು.ಅವರು ಭಾನುವಾರ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಕಾರವಾರ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ 2025ರ ಮ್ಯಾರಾಥಾನ್ 5ಕೆ ಓಟ ಕ್ಕೆ ಚಾಲನೆ ನೀಡಿ ಮಾತನಾಡಿದರು.ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಉತ್ಸಾಹ ದಿಂದ 1000 ಅಧಿಕ ಜನರು ನೋಂದಣಿ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿರುವುದನ್ನು ಕಂಡು ಹರ್ಷ ವ್ಯಕ್ತ ಪಡಿಸಿ ಎಲ್ಲರಿಗೂ ಶುಭ ಕೋರಿದರು.ಜಿಲ್ಲಾಧಿಕಾರಿ ಕೆ. ಲಕ್ಮೀಪ್ರಿಯಾ ಮಾತನಾಡಿ, ಪ್ರತಿಯೊಬ್ಬರು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ದೈಹಿಕವಾಗಿ ಸದೃಢರಾಗಲು ಪ್ರತಿ ದಿನ ಸ್ವಲ್ಪ ಸಮಯವನ್ನು ಮೀಸಲಿಡಿ. ಡ್ರಗ್ಸ್ ಅಥವಾ ಮಾದಕ ವಸ್ತುಗಳನ್ನು ನಿಯಂತ್ರಣ ಮಾಡಲು ಜಿಲ್ಲೆಯಲ್ಲಿ ಎನ್ಕ್ವಾಡ್ ( ನಾರ್ಕಟಿಕ್ ಕ್ರೈಂ ಕೋ- ಆರ್ಡಿನೇಷನ್ ಕಮಿಟಿ) ಇದೆ. ಈ ಕಮಿಟಿಯು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ವಿದ್ಯಾರ್ಥಿಗಳು ಜಾಗೃತರಾಗಿದ್ದು, ಮಾದಕ ವಸ್ತುಗಳ ಸೇವನೆ ಮಾಡದೇ ಉತ್ತಮ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಮಾತನಾಡಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನ ಸೌಧದ ಬಳಿ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಡ್ರಗ್ಸ್ ಪ್ರೀ ಹಾಗೂ ಸೈಬರ್ ಕ್ರೈಂ ಫ್ರೀ ಮುಕ್ತ ಕರ್ನಾಟಕ್ಕಾಗಿ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2 ಆವೃತ್ತಿ ಯ ಮ್ಯಾರಥಾನ್ ನ್ನು ಇಡಿ ರಾಜ್ಯದಲ್ಲೇ ಆಯೋಜನೆ ಮಾಡಲಾಗಿದೆ ಎಂದರು.ಯಾರು ಕೂಡ ಡ್ರಗ್ಸ್ ಗೆ ತುತ್ತಾಗಬಾರದು . ಪೊಲೀಸ್ ಇಲಾಖೆಯಿಂದ ಮಾತ್ರ ಮಾದಕ ವಸ್ತುಗಳ ನಿಯಂತ್ರಣ ಮಾಡಲು ಸಾಧ್ಯವಿಲ್ಲ, ಇದಕ್ಕೆ ಸಾರ್ವಜನಿಕ ಸಹಕಾರ ಅಗತ್ಯವಾಗಿದೆ . ಯಾರಾದರು ಡ್ರಗ್ಸ್ ಸೇವನೆ ಅಥವಾ ಮಾರಾಟ ಮಾಡುವುದು ಕಂಡು ಬಂದಲ್ಲಿ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಎಂದರು.ಮ್ಯಾರಥಾನ್ ಓಟವು ರವೀಂದ್ರ ನಾಥ್ ಕಡಲ ತೀರದಿಂದ ಪ್ರಾರಂಭವಾಗಿ ಬಿಲ್ಟ್ ಸರ್ಕಲ್ , ಸವಿತ,ಮಾಲಾದೇವಿ, ಕಾಜುಭಾಗ್, ಅರ್ಜುನ ಚಿತ್ರ ಮಠರ , ಎಸ್.ಪಿ ಆಪೀಸ್ ಮೂಲಕ ರವೀಂದ್ರ ನಾಥ್ ಟಾಗೋರ್ ಕಡಲ ತೀರದಲ್ಲಿ ತಲುಪಿ ಮುಕ್ತಾಯವಾಯಿತು.ಮ್ಯಾರಥಾನ್ ವಿಜೇತರು:ಪುರುಷ ವಿಭಾಗದಲ್ಲಿ ಕಾರ್ತಿಕ್ ಆರ್ ನಾಯ್ಕ ಪ್ರಥಮ, ಸಂದೀಪ್ ಪೂಜರ್ ದ್ವಿತೀಯ, ಗುರುರಾಜ್ ಹೆಗಡೆ ತೃತೀಯ, ಮಹಿಳಾ ವಿಭಾಗದಲ್ಲಿ ಪೂರ್ವಿ ಪ್ರಥಮ, ಸುಪ್ರಿತಾ ಸಿ .ಚನ್ನಯ್ಯ ದ್ವಿತೀಯ, ಸಾವಿತ್ರಿ ಮೀರಾಶಿ ತೃತೀಯ ಸ್ಥಾನ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಈಶ್ವರ ಕಾಂದೂ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬೋಪಣ್ಣ , ಚಲನಚಿತ್ರ ನಟಿಯರಾದ ಬೃಂದಾ ಆಚಾರ್ಯ, ಅದಿತಿ ಶ್ರೀವಾಸ್ತವ, ಪಟೇರಿಯಾ, ಕದಂಬ ನೌಕ ನೆಲೆಯ ಕಮಾಂಡರ್ ಗುರು, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ್, ಕೈಗಾ ಸೈಟ್ ಮ್ಯಾನೇಜರ್, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಇದ್ದರು....
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 