ಲೋಕದರ್ಶನ ವರದಿ
ವಿಜಯಪುರ 17: ಮೌಲಾನಾ ಅಬುಲ್ ಕಲಾಂ ಆಜಾದರವರು ದೇಶದ ಶೈಕ್ಷಣಿಕ ಪ್ರಗತಿಗಾಗಿ ಮತ್ತು ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಮಂತ್ರಿಗಳಾಗಿ ಪ್ರಾಥಮಿಕ ಮತ್ತು ಮಹಿಳಾ ಶಿಕ್ಷಣಕ್ಕೆ ಯಾವುದೇ ನಿದರ್ಿಷ್ಟ ಜಾತಿ ಧರ್ಮಕ್ಕೆ ತಮ್ಮ ಸೇವೆಯನ್ನು ಮೀಸಲಾಗಿರಿಸದೇ ಶ್ರಮಿಸಿದ್ದಾರೆ ಎಂದು ಮಹಿಳಾ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಮತ್ತು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ರಫಿ ಬಂಡಾರಿ 16 ರಂದು ಅಭಿಪ್ರಾಯಪಟ್ಟರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ 'ಮೌಲಾನಾ ಅಬುಲ್ ಕಲಾಂ ಆಜಾದ ಅಧ್ಯಯನ ಕೇಂದ್ರದ ವತಿಯಿಂದ ಮೌಲಾನಾ ಅಬುಲ್ ಕಲಾಂ ಆಜಾದ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.ದೇಶದ ಪ್ರತಿಯೊಬ್ಬರು ಸಹ ಶಿಕ್ಷಣ ಪಡೆಯುವಲ್ಲಿ ಒಗ್ಗಟ್ಟಾಗಿದ್ದರೆ ಮಾತ್ರ ರಾಷ್ಟ್ರೀಯ ಐಕ್ಯತೆ ಸಾಧಿಸಲು ಸಾಧ್ಯ ಎಂಬುದನ್ನು ಆಜಾದ ಅವರು ಹೇಳಿದ್ದನ್ನು ಅವರು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷ್ಯತೆ ವಹಿಸಿದ್ದ ಮಹಿಳಾ ವಿವಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎ.ಖಾಜಿ ಮಾತನಾಡಿ, ದೇಶದಲ್ಲಿ ಎಲ್ಲಾ ಧಮರ್ೀಯರು ಒಗ್ಗಟ್ಟಿನಿಂದ ಶಿಕ್ಷಣ ಪಡೆಯುವುದಕ್ಕೆ ಪ್ರಮುಖ ಕಾರಣ ಮೌಲಾನಾ ಅಬುಲ್ ಕಲಾಂ ಆಜಾದ ಎಂದು ವಿದ್ಯಾಥರ್ಿನಿಯರಿಗೆ ತಿಳಿಸಿದರು. ಅನ್ಯರಾಷ್ಟ್ರಗಳಲ್ಲಿ ಈ ರೀತಿಯ ಆತ್ಮೀಯ ಬಾಂಧವ್ಯದಿಂದ ಶಿಕ್ಷಣ ಪಡೆಯಲಿಕ್ಕೆ ಅಸಾಧ್ಯ. ಅಲ್ಲದೇ ನಮ್ಮ ದೇಶವು ಎಲ್ಲಾ ಧರ್ಮದವರಿಗೆ ಸುರಕ್ಷಿತವಾದ ಮತ್ತು ಆತ್ಮೀಯತೆಯಿಂದ ಕೂಡಿದ ಪ್ರದೇಶ ಎಂದು ಪ್ರಶಂಸಿಸಿದರು. ಮೌಲಾನಾ ಅಬುಲ್ ಕಲಾಂ ಆಜಾದ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಅಶೋಕಕುಮಾರ ಸುರಪುರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಗೀತ ವಿಭಾಗದ ವಿದ್ಯಾಥರ್ಿನಿಯರು ಮಹಿಳಾ ಗೀತೆ ಹಾಡಿದರು. ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಭಾಷಣ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು. ಡಾ.ವಿಷ್ಣು ಶಿಂಧೆ ನಿರೂಪಿಸಿ, ವಂದಿಸಿದರು.