ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲಾ: ಚೈತ್ರಾ ಗೌಡ

ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲಾ: ಚೈತ್ರಾ ಗೌಡ

ಮುಂಡಗೋಡ: ಕಾಂಗ್ರೇಸ್ ಪಕ್ಷಕ್ಕೆ ಸಪೋರ್ಟ ಮಾಡುವುದಾಗಲಿ ಅಥವಾ ನಾವು ಚುನಾವಣೆಯಿಂದ ಹಿಂದೆ ಸರಿಯುವುದಾಗಲಿ ಯಾವುದೆ ಮಾತಿಲ್ಲಾ ಚುನಾವಣಿ ಮುಗಿಯುವವರೆಗೆ ಕಣದಲ್ಲಿದ್ದು ಜೆಡಿಎಸ್ ಕಾರ್ಯಕರ್ತರ ಸಂಘಟನೆ ಮಾಡಿ ಮತಗಳನ್ನು ಪಡೆಯುವ ಪ್ರಯತ್ನ ಮಾಡುತ್ತೆನೆ ಎಂದು ಯಲ್ಲಾಪೂರ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯಥರ್ಿ ಚೈತ್ರಾ ಗೌಡ ಹೇಳಿದರು.

ಅವರು ಪಟ್ಟಣದ ಮಾರಿಕಾಂಭಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಇದೆ ಪಕ್ಷದ ಮುಖಂಡರು ಎಲ್ಲರು ಬೆಂಬಲವನ್ನು ಕೊಡುತ್ತಿದ್ದಾರೆ. ಇಂದು ನಾಮಪತ್ರ ಹಿಂದೆ ತೆಗೆದುಕೊಳ್ಳುವುದು ಕೊನೆಯ ದಿನ ಅದೇಲ್ಲ ಮುಗಿದ ಬಳಿಕ ನಾಳೆಯಿಂದ ಪ್ರಚಾರಕ್ಕೆ ಚಾಲನೆ ನೀಡಲಿದ್ದೆವೆ.

ಅಬ್ಬರದ ಪ್ರಚಾರಕ್ಕೆ ನಾವು ಮುಂದಾಗುವುದಿಲ್ಲಾಅದರ ಬದಲಾಗಿ ಹೋಬಳಿ ಹಾಗೂ ಪಂಚಾಯತ ಮಟ್ಟದಲ್ಲಿ ಪ್ರಚಾರಕಾರ್ಯ ನಡೆಸಲಾಗುವುದು.

ಹೇಚ್ಚಿಗೆ  ವಾಹನಗಳನ್ನು ಬಳಸಿ ಮಾಲಿನ್ಯ ಮಾಡುವ ಬದಲುಕಡಿಮೆ ವಾಹನಗಳನ್ನು ಬಳಸಿ ಸಾರ್ವಜನಿಕರಿಗೆ ತೊಂದರೆ ಕೊಡದ ಹಾಗೆ ಗ್ರಾಮಾಂತರ ಹಾಗೂ ಪಟ್ಟಣಗಳಲ್ಲಿ ತೆರಳಿ ಸ್ಥಳಿಯ ಮುಖಂಡರೊಂದಿಗೆ ಪ್ರಚಾರ ಮಾಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಮಾಜಿ ಮುಖ್ಯ ಮಂತ್ರಿಕುಮಾರ ಸ್ವಾಮಿ. ಪ್ರಜ್ವಲ ರೇವಣ್ಣಾ, ಜೆಡಿಎಸ್ ಎಂ ಎಲ್ ಸಿ ರಮೇಶ ಬಾಬು ಅವರೆಲ್ಲ ಬಂದು ಪ್ರಚಾರ ಸಬೆ ನಡೆಸಲಿದ್ದಾರೆ ಎಂದರು.