ಮಠ ಮಾನ್ಯಗಳು ಸರ್ವರನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ : ವರುಣಗೌಡ್ರ ಪಾಟೀಲ

Math Manyas have to work to unite everyone: Varuna Gowdra Patil

ಮಠ ಮಾನ್ಯಗಳು ಸರ್ವರನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ : ವರುಣಗೌಡ್ರ ಪಾಟೀಲ 

ಶಿಗ್ಗಾವಿ  03 : ಪ್ರಸ್ತುತ ದಿನಗಳಲ್ಲಿ ನಾಡಿನ ಅಬ್ಯುದಯಕ್ಕೆ ಮಠ ಮಾನ್ಯಗಳು ಸರ್ವರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಲ್ಯಾಂಡ್ ಲಾರ್ಡ್‌ ವರುಣಗೌಡ ಪಾಟೀಲ ಹೇಳಿದರು.  ತಾಲೂಕಿನ ಹಿರೇಬೆಂಡಿಗೇರಿಯ ಸದ್ದರ್ಮ ಹಿರೇಮಠದಲ್ಲಿ ಹಮ್ಮಿಕೊಂಡ ಸರ್ವ ಧರ್ಮ ಸಾಮರಸ್ಯ ಸದ್ಭಾವನೆಯ ಮಹಾರತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಠಗಳು ನಮ್ಮ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿವೆ ವಿದ್ಯಾರ್ಥಿಗಳಿಗೆ ಶಿಕ್ಷಣ ಅನ್ನ ದಾಸೋಹ ಹಾಗೂ ಆಶ್ರಯ ನೀಡಿವೆ ಆ ಹಿನ್ನೆಲೆಯಲ್ಲಿ ಇಂದು ಹಿರೇಬೆಂಡಿಗೇರಿ ಗ್ರಾಮದ ಸದ್ದರ್ಮ ಮಠವು ವೇಧಮೂರ್ತಿ ರೇವನಸಿದ್ದಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಅಭಿರುದ್ದಿ ಹೊಂದಲ್ಲಿ ನಾನು ಕೂಡ ನನ್ನ ಕೈಲಾದ ಸೇವೆ ಸೇವೆ ಮಾಡುತ್ತೇನೆ ಎಂದರು. ಜಾನಪದ ಕಲಾವಿದ ಶರೀಫ ಮಾಕಪ್ಪನವರ ಮಾತನಾಡಿ ಸರ್ವ ಧರ್ಮದವರನ್ನು ಒಟ್ಟಿಗೆ ಸೇರಿಸಿ ಒಂದು ರಥ ನಿರ್ಮಿಸಿ ರತೋತ್ಸವ ಕಾರ್ಯಕ್ರಮ ಮಾಡುತ್ತಿರುವದು ಶ್ಲಾಘನೀಯ ಅವರಂತ ಸ್ವಾಮೀಜಿಗಳನ್ನು ಪಡೆದ ಹಿರೇಬೆಂಡಿಗೇರಿ ಗ್ರಾಮಸ್ಥರು ಪುಣ್ಯವಂತರು ಎಂದರು.  ದಿವ್ಯ ಸಾನಿಧ್ಯ ವಹಿಸಿದ್ದ ಮಠದ ಪೂಜ್ಯರಾದ ರೇವಣಸಿದ್ಧಯ್ಯ ಅವರು ಆಶೀರ್ವಚನ ನೀಡಿ ನಮ್ಮದು ಬಡವರ ಮಠ ಸರ್ವ ಧರ್ಮದವರನ್ನು ಒಗ್ಗೂಡಿಸಿ ಎಲ್ಲರು ಒಗ್ಗಟ್ಟಿನಿಂದ ಇರಬೇಕು ಎನ್ನುವ ಸಂದೇಶ ಸಾರುವುದು ಮಠದ ಉದ್ದೇಶ ಆ ಹಿನ್ನೆಲೆಯಲ್ಲಿ ನಾವು ಒಂದು ರಥವನ್ನು ತಯಾರಿಸಿ ಎಲ್ಲರನ್ನು ಸೇರಿಸಿಕೊಂಡು ರತೋತ್ಸವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಂಚಮಸಾಲಿ ಯುವ ಘಟಕದ ಹಾವೇರಿ ಜಿಲ್ಲಾ ಅಧ್ಯಕ್ಷ ನಾಗರಾಜ ಕ್ಯಾಬಳ್ಳಿ ಯುವ ರೈತ ಮುಖಂಡ ವಿನಯ ಹೊನ್ನಣ್ಣವರ ಹಾಗೂ ನಾಗರಾಜ ಪಟ್ಟಣಶೆಟ್ಟಿ ಮಾತನಾಡಿದರು.ಈ ಸಂಧರ್ಭದಲ್ಲಿ ಮಠದ ಪದಾಧಿಕಾರಿಗಳು ಹಾಗೂ ಗ್ರಾಮದ ಸದ್ಭಕ್ತರು ಹಾಜರಿದ್ದರು.