ಗಣಿತ ಮೇಳ ಹಾಗೂ ಸಂಕ್ರಾಂತಿ ಸುಗ್ಗಿ
ಧಾರವಾಡ 17:ಗಣಿತ ಕಲಿಕೆಗೆ ಪೂರಕವಾದ ಗಣಿತ ಮೇಳದಲ್ಲಿ ಉಪಕರಣಗಳ ಸಹಾಯದಿಂದ ವಿದ್ಯಾರ್ಥಿಗಳು ಸುಲಭವಾಗಿ ಕ್ರಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ್ ಕೆ ಎಫ್ ಹೇಳಿದರು.
ಗುರುವಾರ ತಡಕೊಡ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ 2024-25 ನೇ. ಸಾಲಿನ ಗಣಿತ ಮೇಳ ಉದ್ದೇಶಿಸಿ ಮಾತನಾಡುತ್ತಾ ಮೇಳಗಳು ವಿದ್ಯಾರ್ಥಿಗಳಿಗೆ ಸಂಕಲನ, ವ್ಯವಕಲನ, ಭಾಗಾಕಾರ ಮತ್ತು ಗುಣಾಕಾರ, ಪೂರ್ಣಾಂಕಗಳ ಪರಿಕಲ್ಪನೆಗಳು, ಚಟುವಟಿಕೆಗಳ ಮೂಲಕ ಭಿನ್ನರಾಶಿಗಳು ಇತ್ಯಾದಿಗಳನ್ನು ಒಳಗೊಂಡಂತೆ ಮೂಲಭೂತ ಕಾರ್ಯಾಚರಣೆಗಳನ್ನು ಅರ್ಥಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ತಡಕೊಡ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಭುವನೇಶ್ವರಿ.ಕೆ ಮಾತನಾಡುತ್ತಾ ವಿದ್ಯಾರ್ಥಿಗಳು ಭಾಷೆ ವಿಷಯದ ಜೊತೆಗೆ ಗಣಿತದ ಕಲಿಕೆಯೂ ಆಸಕ್ತಿ ವಹಿಸಬೇಕಾದರೆ ಇಂತಹ ಮೇಳ ಅವಶ್ಯ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಸ್,ವಿ,ಸಂತಿ ಮಾತನಾಡುತ್ತಾ ನಿತ್ಯವು, ಹಲಗೆ ಮೇಲೆ, ಲೆಕ್ಕಗಳನ್ನು ಬಿಡಿಸುವುದು ಸಹಜ ಅದರೊಂದಿಗೆ ಮೇಳದಲ್ಲಿ ನೈಜ ಗಣಿತ ಕಲಿತರೆ ಅದು ಸರಳವಾಗಿ ಅರ್ಥವಾಗುವುದಲ್ಲದೇ ಅಧಿಕ ಅಂಕ ಗಳಿಕೆಗೂ ಕಾರಣವಾಗುತ್ತದೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆರ್ ಎಂ ಕುರ್ಲಿ ಮಾತನಾಡುತ್ತಾ ಗಣಿತ ಮೇಳದಲ್ಲಿ ವಾಸ್ತವಿಕವಾಗಿ ಅರಿಯಬೇಕು ಎಂಬ ಉದ್ದೇಶದಿಂದ ಏರಿ್ಡಸಲಾಗಿದೆ ಎಂದರು.
ಎಸ್,ಡಿ,ಎಮ್,ಸಿ ಉಪಾಧ್ಯಕ್ಷರಾದ ಶ್ರೀದೇವಿ ಬೆಳವಡಿ ಮಾತನಾಡುತ್ತಾ ಮಕ್ಕಳು ಸಂತಸದಿಂದಲೆ ಪಾಲ್ಗೊಂಡಿದ್ದಾರೆ ಇಲ್ಲಿ ಬಂದು ಅಲ್ಲಿನ ಅನುಭವ ತಿಳಿಸುವ ಮೂಲಕ ವ್ಯವಹಾರದ ಜ್ಞಾನಾರ್ಜನೆ ಬೆಳೆಸುವುದಾಗಿದೆ ಹೇಳಿದರು.
ಅನೇಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಗಣಿತದ ಸೂತ್ರಗಳ, ಪ್ರಮೇಯಗಳ, ಆಕೃತಿಗಳ, ತ್ರಿಭುಜ ಆಕೃತಿ, ಪ್ರಮೇಯ ತ್ರಿಭುಜಗಳು, ಕೋನಗಳು, ಅನುಪಾತ ಕೋನಗಳು, ಜೋಡಿಸಿದ ಘನಾಕೃತಿಗಳು, ವಿವಿಧ ರೀತಿಯ ತಮ್ಮ ತಮ್ಮ ಕಲಾ ಪ್ರತಿಭೆಯಿಂದ ಮಾಡಿದಂತಹ ಗಣಿತ ಮೇಳದ ಕೆಲವರು ಥರ್ಮಲ್ ಕೋಲಗಳಿಂದ ಹಾಗೂ ಪೇಪರ್ಸ್ ಕಟಿಂಗ್ ಗಳ ಮೂಲಕ ಗಣಿತ ಶಾಸ್ತ್ರಜ್ಞರ ಭಾವ ಚಿತ್ರಗಳನ್ನು ಕಲಾತ್ಮಕ ಚಿತ್ರಗಳಲ್ಲಿ ಅಳವಡಿಸುವುದರ ಮೂಲಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಎಲ್ಲರ ಗಮನ ಸೆಳೆದರು. ಹಾಗೆ ಇನ್ನೂ ಕೆಲ ವಿದ್ಯಾರ್ಥಿಗಳು ಬಣ್ಣ ಬಣ್ಣದ ಮೂಲಕ ಗಣಿತ ಸೂತ್ರಗಳು ರಂಗೋಲಿಯ ಮೂಲಕ ಚಿತ್ರಗಳನ್ನು ಬಿಡಿಸುವುದ ರೊಂದಿಗೆ ತಮ್ಮ ಪ್ರತಿಭೆಗಳನ್ನು ತೋರಿಸಿರುವುದನ್ನ ಕಂಡ ಶಾಲಾ ಶಿಕ್ಷಕರು ತುಂಬಾ ಸಂತೋಷ ಪಡುವುದರೊಂದಿಗೆ ಮುಂದಿನ ದಿನ ವಿದ್ಯಾರ್ಥಿಗಳಲ್ಲಿ ಇವರ ಪ್ರತಿಭೆಗಳು ಸಹ ಉನ್ನತವಾಗಿ ಬೆಳೆಯಲಿ ಎಂದು ಗಣಿತ ಶಿಕ್ಷಕಿ ವಿಷಯಗಳನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹಂಚಿ ಕೊಂಡರು.
ಸಂಕ್ರಾಂತಿ ಸುಗ್ಗಿ
ಕರ್ನಾಟಕದಲ್ಲಿ ಸಂಕ್ರಾಂತಿಯೆಂದರೆ, ರೈತಪರಿವಾರವು ತಮ್ಮ ಬೆಳೆ, ಹೊಲ, ಎತ್ತು, ದನ ಕರುಗಳ ಜತೆ ಸಂಭ್ರಮಿಸುವ ಹಬ್ಬ. ಸಾಮಾನ್ಯವಾಗಿ ಕೇಳಿರುತ್ತೇವೆ. ನೇಗಿಲಯೋಗಿ ಗೀತೆ ವಿದ್ಯಾರ್ಥಿ ಹಾಡಿ ಎಲ್ಲರ ಗಮನ ಸೇಳೆದರೆ, ಕಥನಗೀತೆಯೊಂದು ಹುಟ್ಟಿಕೊಂಡ ಸಂದರ್ಭ ಕೂಡ ಸಂಕ್ರಾಂತಿಯ ಹಬ್ಬದ್ದು ಎನ್ನುವ ಮಾತಿದೆ. ಇದಕ್ಕಾಗಿಯೇ ಇರಬೇಕು ಈ ಸಂಪ್ರದಾಯಿಕ ಉಡುಗೆ ತೊಡಿಗೆ ಇದು ಕಂಡುಬಂದಿತು ಈ ಶಾಲೆಯಲ್ಲಿ.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಎಲ್ಲ ಎಸ್,ಡಿ,ಎಮ್,ಸಿ ಸದ್ಯಸ್ಯರು, ಮಾದರಿ ಶಾಲೆ, ಕೆ,ಜಿ,ಎಸ್ ಶಾಲೆ ಹಾಗೂ ಉರ್ದು ಶಾಲೆಯ ಮುಖ್ಯಾಧ್ಯಾಪಕರು, ಸಹ ಶಿಕ್ಷಕರು ಹಾಗೂ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಗಣಿತದ ಸೂತ್ರಗಳ, ಪ್ರಮೇಯಗಳ, ಆಕೃತಿಗಳ, ತ್ರಿಭುಜ ಆಕೃತಿ, ಪ್ರಮೇಯ ತ್ರಿಭುಜಗಳು, ಕೋನಗಳು, ಅನುಪಾತ ಕೋನಗಳು, ಜೋಡಿಸಿದ ಘನಾಕೃತಿಗಳು, ವಿವಿಧ ರೀತಿಯ ತಮ್ಮ ತಮ್ಮ ಕಲಾ ಪ್ರತಿಭೆಯಿಂದ ಮಾಡಿದಂತಹ ಗಣಿತ ಮೇಳದ ಕೆಲವರು ಥರ್ಮಲ್ ಕೋಲಗಳಿಂದ ಹಾಗೂ ಪೇಪರ್ಸ್ ಕಟಿಂಗ್ ಗಳ ಮೂಲಕ ಗಣಿತ ಶಾಸ್ತ್ರಜ್ಞರ ಭಾವ ಚಿತ್ರಗಳನ್ನು ಕಲಾತ್ಮಕ ಚಿತ್ರಗಳಲ್ಲಿ ಅಳವಡಿಸುವುದರ ಮೂಲಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಎಲ್ಲರ ಗಮನ ಸೆಳೆದರು.
ಸಂಕ್ರಾಂತಿ ಸುಗ್ಗಿ ಹಾಗೂ ಈ ಸಂದರ್ಭದಲ್ಲಿ ಕಾರ್ಯಕ್ರಮದ ಎಲ್ಲ ಎಸ್,ಡಿ,ಎಮ್,ಸಿ ಸದ್ಯಸ್ಯರು, ಮಾದರಿ ಶಾಲೆ, ಕೆ,ಜಿ,ಎಸ್ ಶಾಲೆ ಹಾಗೂ ಉರ್ದು ಶಾಲೆಯ ಮುಖ್ಯಾಧ್ಯಾಪಕರು, ಸಹ ಶಿಕ್ಷಕರು ಹಾಗೂ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.