ಮಾತಂಗ ಸಾಂಸ್ಕೃತಿಕ ನಾದಲೋಕ ಸಂಘ ಮತ್ತು ಶ್ರೀ ಮಾದಾರಚನ್ನಯ್ಯ ಸೇವಾ ಸಮಿತಿ ಘಟಕ ಲೋಕಾರೆ​‍್ಣ!

Matanga Cultural Nadaloka Sangh and Shri Madarachannaya Seva Samiti Unit Lokarena!

ಮಾತಂಗ ಸಾಂಸ್ಕೃತಿಕ ನಾದಲೋಕ ಸಂಘ ಮತ್ತು ಶ್ರೀ ಮಾದಾರಚನ್ನಯ್ಯ ಸೇವಾ ಸಮಿತಿ ಘಟಕ ಲೋಕಾರೆ​‍್ಣ! 

ಹುಬ್ಬಳ್ಳಿ 21: ಕರ್ಕಿ ಬಸವೇಶ್ವರ ನಗರದ ಸಮುದಾಯ ಭವನದಲ್ಲಿ “ಮಾತಂಗ ಸಾಂಸ್ಕೃತಿಕ ನಾದಲೋಕ” ಸಂಘದ ಉಧ್ಘಾಟನಾ ಸಮಾರಂಭವು ಅತ್ಯಂತ ವೈಭವಪೂರ್ಣವಾಗಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಡಾ.ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿಗಳು ಸಂಘವನ್ನು ಉದ್ಘಾಟಿಸಿದರು ಮತ್ತು ಅದೇ ಸಂದರ್ಭದಲ್ಲಿ “ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ, ಕರ್ನಾಟಕ” ದ ಹುಬ್ಬಳ್ಳಿ ಮಹಾನಗರ ಜಿಲ್ಲಾ ಘಟಕದ ಲೋಕಾರೆ​‍್ಣಯನ್ನು ಸಹ ನೆರವೇರಿಸಿದರು. 

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪೂಜ್ಯ ಶ್ರೀಗಳು “ಸರಿಗಮಪ ಸೃಷ್ಟಿಸಿದ ಸಂಗೀತದ ಪಿತಾಮಹ ಶ್ರೀ ಮಾತಂಗ ಮಹರ್ಷಿಗಳನ್ನು ಮೂಲಪುರುಷರಾಗಿ ಹೊಂದಿರುವ, ದೇವಿ ಮಾತಂಗಿಯ ಪಾವಿತ್ರ್ಯತೆ, ಜಾಂಬವಂತನ ಪೌರಾಣಿಕ ಇತಿಹಾಸ ಮತ್ತು ದೇವಿ ಅರುಂಧತಿಯ ಹಿನ್ನೆಲೆಯಿರುವ ಮಾದಿಗ ಸಮುದಾಯ ಇವತ್ತಿನ ವಿಷಮ ಪರಿಸ್ಥಿತಿಯಲ್ಲಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೋರಾಡಬೇಕಾಗಿ ಬಂದಿರುವುದು ಅತ್ಯಂತ ದೊಡ್ಡ ವಿಪರ್ಯಾಸ. ಇದೀಗ ಬದಲಾಗುತ್ತಿರುವ ಸಂದರ್ಭದಲ್ಲಿ ಒಳಮೀಸಲಾತಿ, ಶಿಕ್ಷಣದ ಅವಶ್ಯಕತೆಯಂಥ ವಿಷಯಗಳಲ್ಲಿ ಸಮುದಾಯದಲ್ಲಿ ಸಾಕಷ್ಟು ಜಾಗೃತಿ ಮೂಡುತ್ತಿದೆ ಅನ್ನುವುದು ಸ್ವಲ್ಪ ಮಟ್ಟಿಗೆ ಆಶಾದಾಯಕವಾಗಿದೆ. 

 ಆದರೆ ಇನ್ನೂ ಬಹಳಷ್ಟು ದೊಡ್ಡ ಸವಾಲುಗಳು ನಮ್ಮ ಮುಂದಿದ್ದು, ನಮ್ಮ ಮುಂದಿನ ಪೀಳಿಗೆಗಳಿಗೆ ನಮ್ಮ ಸಂಸ್ಕೃತಿ, ಇತಿಹಾಸ, ಪರಂಪರೆ ಮತ್ತು ಶ್ರೇಷ್ಠತೆಯನ್ನು ತಿಳಿಸುವ ನಿಟ್ಟಿನಲ್ಲಿ ‘ಮಾತಂಗ ಸಾಂಸ್ಕೃತಿಕ ನಾದಲೋಕ(ರಿ)’ ಸಂಘ ಕೆಲಸ ಮಾಡಲಿ” ಎಂದು ಹಾರೈಸಿದರು.ಮುಂದುವರಿದು ಮಾತನಾಡಿದ ಪೂಜ್ಯ ಶ್ರೀಗಳು “ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ, ಕರ್ನಾಟಕ” ಶ್ರೀಮಠದ ಅತ್ಯಂತ ಮಹತ್ವಾಕಾಂಕ್ಷಿ ಗತಿವಿಧಿಯಾಗಿದ್ದು, ಸಮುದಾಯದಲ್ಲಿ ಮುಖ್ಯವಾಗಿ ಯುವಜನರಲ್ಲಿ ಮಠ ಪರಂಪರೆಯನ್ನು ಬೆಳೆಸುವುದು, ಮತ್ತು ಆ ಮೂಲಕ ತಳಮಟ್ಟದಿಂದ ಶಿಕ್ಷಣ, ನಾಯಕತ್ವ ನಿರ್ಮಾಣ, ಸ್ವಾವಲಂಬನೆ, ಆರ್ಥಿಕ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಲಿದೆ ಎಂದರು.  

ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಮತ್ತು ಹಟ್ಟಿ/ಕೇರಿಗಳಿಗೆ ಶ್ರೀಮಠವನ್ನು ಸಮಿತಿಯ ಯುವಕಾರ್ಯಕರ್ತರ ಮೂಲಕ ತಲುಪಿಸುವ ಯೋಜನೆ ಇದಾಗಿದೆ. ನಮ್ಮವರಲ್ಲಿ ಆಧ್ಯಾತ್ಮಿಕ ಮಠ ಪರಂಪರೆಯನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ನಾನು ಸ್ವತಃ ರಾಜ್ಯದ ಪ್ರತಿ ಮಾದಿಗ ಸಮುದಾಯದ ಕೇರಿ, ಕಾಲೋನಿ, ಹಟ್ಟಿಗಳಿಗೆ ಸ್ಥಳೀಯ ಸಮಿತಿಯ ನೇತೃತ್ವದಲ್ಲಿ ಭೇಟಿ ನೀಡಲಿದ್ದೇನೆ. ಆದ್ದರಿಂದ ಸಮುದಾಯದ ಹಿರಿಯರು, ಮುಖಂಡರು ಇದಕ್ಕೆ ಮಾರ್ಗದರ್ಶನ ನೀಡಿ ಸಮಾಜದ ಪ್ರತಿಯೊಬ್ಬರೂ ಸದಸ್ಯತ್ವ ಪಡೆದುಕೊಂಡು ನಿಮ್ಮ ನಿಮ್ಮ ಕೇರಿ, ಊರುಗಳಲ್ಲಿ ‘ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ”ಯನ್ನು ಸೃಜಿಸಬೇಕೆಂದು ಕರೆ ನೀಡಿದರು. 

ಮಾತಂಗ ಸಾಂಸ್ಕೃತಿಕ ನಾದಲೋಕ ತಂಡದ ಸಿದ್ರಾಮ ಪಗಲಾಪುರ, ಭೀಮಪ್ಪ ಕೆಂಪಣ್ಣವರ, ಬಸವರಾಜ ಯರಮಸಾಳ, ರವಿ ಬೆಳ್ದಡ್ಡಿ, ಪ್ರಕಾಶ ಗುಡಿಹಾಳ, ಮಾದಿಗ ದಂಡೋರ ಒಖಕಖ ರಾಜ್ಯ ವಕ್ತಾರರಾದ ಮಂಜುನಾಥ ಕೊಂಡಪಲ್ಲಿ, ಇಂದಿರಾನಗರ ಸಮಾಜದ ಅಧ್ಯಕ್ಷರಾದ ಸೂರ್ಯನಾರಾಯಣ ಕನಮಕ್ಕಲ, ಉಪಾಧ್ಯಕ್ಷರಾದ ನಾಗೇಶ ಕತ್ರಿಮಾಲ, ಸತ್ಯನಾರಾಯಣ ಎಂ, ಗುರುಮೂರ್ತಿ ಬೆಂಗಳೂರು, ಶ್ರೀಧರ ದೊಡ್ಡಮನಿ, ಹಾಲಪ್ಪ ಎಂ, ಮಂಜುನಾಥ ಮಾದರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.