ಮೂರ್ತಿ ವಿರೂಪ ಗೊಳಿಸಿದ ಕುಕೃತ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಮೂರ್ತಿ ವಿರೂಪ ಗೊಳಿಸಿದ ಕುಕೃತ್ಯ ಖಂಡಿಸಿ ಬೃಹತ್ ಪ್ರತಿಭಟನೆ  Massive protest condemning the desecration of the idol

ಮೂರ್ತಿ ವಿರೂಪ ಗೊಳಿಸಿದ ಕುಕೃತ್ಯ ಖಂಡಿಸಿ ಬೃಹತ್ ಪ್ರತಿಭಟನೆ  

ತಾಳಿಕೋಟಿ 16: ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ವಿರೂಪಗೊಳಿಸಿರುವ ಹೇಯಕೃತ್ಯವನ್ನು ಖಂಡಿಸಿ ಅಪರಾಧಿಗಳಿಗೆ ಸೂಕ್ತ ದಂಡನೆಗೆ ಆಗ್ರಹಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.  ಈ ಹೇಯ ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸಮಾಜದ ಬಾಂಧವರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇವರ ಹಿಪ್ಪರಗಿ ರಸ್ತೆಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತದಲ್ಲಿ ಸಮಾವೇಶಗೊಂಡು ನಂತರ ಅಲ್ಲಿಂದ ಹೊರಟು ಪ್ರಮುಖ ಬೀದಿಗಳ ಮುಖಾಂತರ ಸ್ಥಳೀಯ ತಹಶೀಲ್ದಾರ ಕಚೇರಿಯನ್ನು ತಲುಪಿ ಅಲ್ಲಿ ಸಮಾಜದ ವತಿಯಿಂದ ತಹಶೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ತಮ್ಮ ಪ್ರತಿಭಟನಾ ಮನವಿಯನ್ನು ಸಲ್ಲಿಸಿದರು.   

ತಾಲೂಕಾ ಘಟಕದ ಅಧ್ಯಕ್ಷ ಪರಶುರಾಮ ತಂಗಡಗಿ, ಕಲಬುರ್ಗಿ ಜಿಲ್ಲೆಯ ಚಿತಾಪುರ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯ ಕೈಯ್ಯನ್ನು ತುಂಡು ಮಾಡಿ ಅದರ ಮುಖಕ್ಕೆ ಮಸಿ ಬಳಿದಿರುವ ಕೆಲವು ಕಿಡಿಗೇಡಿಗಳು ಮಾಡಿದ್ದು ನಮ್ಮ ಕುಲದ ಗುರುಗಳಿಗೆ ಆದ ಅವಮಾನ ಮಾಡಿದ್ದು ಸದರಿ ಕೃತ್ಯವನ್ನು ನಮ್ಮ ಸಮಾಜವು ತೀವ್ರವಾಗಿ ಖಂಡಿಸುತ್ತದೆ. ಹೀನಕೃತ್ಯವನ್ನು ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಉಗ್ರವಾದ ಶಿಕ್ಷೆಯನ್ನು ನೀಡಲು ಸರ್ಕಾರವು ನಿರ್ದೇಶನವನ್ನು ನೀಡಬೇಕೆಂದು ಒತ್ತಾಯಿಸಿದರು.  

ತಾಲೂಕು ಘಟಕದ ಉಪಾಧ್ಯಕ್ಷ ಕಾಶಿನಾಥ ಮದರಿ, ಸ್ಥಳೀಯ ಘಟಕದ ಅಧ್ಯಕ್ಷ ರಮೇಶ ಮೂಕಿಹಾಳ, ಬಸವರಾಜ ಯಡಹಳ್ಳಿ, ಎಂ.ಎನ್‌.ಅಂಬಿಗೇರ, ಎಂ.ಬಿ.ನಾಟೀಕಾರ, ಪಿ.ಎಸ್‌.ನಾಯ್ಕೋಡಿ, ಪಿ.ಬಿ.ವಾಲಿಕಾರ, ವಿ.ಎಚ್‌.ನಾಟೀಕಾರ, ಪಿ.ಎ.ತಳವಾರ, ಎಂ.ಡಿ.ನಾಯ್ಕೊಡಿ, ಬಿ.ಎನ್‌.ನಾಯ್ಕೊಡಿ, ಶಶಿ ಮೂಕಿಹಾಳ, ಮಲ್ಲು ನಾಯ್ಕೊಡಿ, ಸಂಗಮೇಶ ವನಹಳ್ಳಿ, ಚೇತನ ಜೂಲಿ, ದತ್ತಾ ಕೋಳಕೂರ, ಚಂದ್ರಶೇಖರ ಬಾರಿಕೇರ, ಮಡಿವಾಳಪ್ಪ ಚಳ್ಳಗಿ, ದೇವಿಂದ್ರ ಇಣಚಗಲ್ಲ, ಮುರಿಗೆಪ್ಪ ಮದರಿ, ಮಲ್ಲು ಗುರಗುಂಡಗಿ, ಬಸವರಾಜ ಯಡಹಳ್ಳಿ, ಮಲ್ಲಿಕಾರ್ಜುನ ನಾಟೀಕಾರ, ಭೀಮಣ್ಣ ತಳವಾರ, ಸಂಗಮೇಶ ಚಳ್ಳಗಿ, ಬಸವರಾಜ ತಳವಾರ, ದತ್ತಾತ್ರೇಯ ನಾಟೀಕಾರ, ಈರ​‍್ಪ ನಾಯ್ಕೊಡಿ, ಕಾಶಿನಾಥ, ಪ್ರವೀಣ, ಚಂದ್ರು, ಶ್ರೀನಾಥ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.