ಪೋಲಿಸರ ಭಾರೀ ಭರ್ಜರಿ ಬೇಟೆ! ಸಿಕ್ಕಿಬಿದ್ದ ಕಳ್ಳರು, ದಕ್ಕಿತು ಕಳೆದುಹೋದ ಬಂಗಾರ

Massive hunt by the police! Caught thieves, robbed and lost gold

ಪೋಲಿಸರ ಭಾರೀ ಭರ್ಜರಿ ಬೇಟೆ! ಸಿಕ್ಕಿಬಿದ್ದ ಕಳ್ಳರು, ದಕ್ಕಿತು ಕಳೆದುಹೋದ ಬಂಗಾರ

ಮುಂಡಗೋಡ 03  : ಪಟ್ಟಣದಲ್ಲಿ ಮನೆ ಕಳ್ಳತನ ಮಾಡಿ ನಗದು ಸೇರಿದಂತೆ ಬಂಗಾರದ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರನ್ನು ಆರೋಪಿಗಳನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ   ಕಳ್ಳತನ ಮಾಡಿದ ಆರೋಪಿಗಳಾದ ಮುಂಡಗೋಡಿನ ನಿವಾಸಿಗಳಾದ ಪ್ರವೀಣ, ಬಸವರಾಜ ಭೋವಿ (23 ವರ್ಷ) ಸಾ// ಸುಭಾಸನಗರ ಮುಂಡಗೋಡ ರಾಕೇಶ ಹನುಮಂತ ಹೆಬ್ಬಳ್ಳಿ 21ವರ್ಷ ಸಾ// ಕ್ಯಾಸನಕೇರಿ ಮುಂಡಗೋಡ ಇವರನ್ನು ವಶಪಡಿಸಿಕೊಂಡಿದ್ದಾರೆ, ಇವರಿಬ್ಬರೂ ಕೂಡ ಕೂಲಿಕಾರರಾಗಿ ಕೆಲಸ ಮಾಡುತ್ತಿದ್ದರು. ದಸ್ತಗಿರಿ ಮಾಡಿದ ನಂತರ ಆರೋಪಿತರಿಂದ ದರೋಡೆ ಮಾಡಿದ 10 ಗ್ರಾಂ ಬಂಗಾರದ ಆಭರಣಗಳನ್ನು ಜಪ್ತು  ಮಾಡಿಕೊಂಡಿದ್ದಾರೆ.   ಇವರಿಬ್ಬರು ಸೇರಿ 27 ಜನವರಿ 2025 ರಂದು ಪಟ್ಟಣದ ವಡ್ಡರ ಓಣಿಯಲ್ಲಿರುವ ತಿಪ್ಪವ್ವಾ  ಭೋವಿ ಯವರ ಮನೆಯ ಹಿಂದಿನ ಬಾಗಿಲನ್ನು ತೆಗೆದು ಮನೆಯ ಒಳಗಡೆ ಹೋಗಿ ಯಾವುದೋ ಗಟ್ಟಿಯಾದ ವಸ್ತುವಿನಿಂದ ಮನೆಯಲ್ಲಿದ್ದ ಟ್ರಜರಿಯ ಬಾಗಿಲನ್ನು ಮುರಿದು ಟ್ರಜರಿಯಲ್ಲಿಟ್ಟಿದ್ದ 05 ಗ್ರಾಂ ಬಂಗಾರದ 32 ಗುಂಡುಗಳು ಇರುವ ಬೋರ್ ಮಾಲ್ ಸರ ಹಾಗೆಯೇ ಅಂದಾಜು ಮೊತ್ತ 30,000/-ರೂ ಹಣ ಮತ್ತು 3ಗ್ರಾಂ ಬಂಗಾರದ ಜಾಲರಿ  ಅದರ ಜೊತೆಗೆ ಅಂದಾಜು ಮೊತ್ತ 15.000/-ರೂ. 1 ಜೊತೆ ಬೆಂಡೋಲೆ ಅಂದಾಜು ಮೊತ್ತ 15.000 ರೂ ಹಾಗೂ ನಗದು ಹಣ 2000-ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರು ಇಂದು ಸಿಕ್ಕಿ ಬಿದ್ದಿದ್ದಾರೆ!   ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಲು ಶ್ರೀ ಎಮ್‌. ನಾರಾಯಣ ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ. ಶ್ರೀ ಜಗದೀಶ ನಾಯ್ಕ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ, ಶ್ರೀ ಗಣೇಶ ಕೆ.ಎಲ್ ಡಿ.ಎಸ್‌.ಪಿ ಶಿರಸಿ ರವರ ಮಾರ್ಗದರ್ಶನದಲ್ಲಿ ಶ್ರೀ ರಂಗನಾಥ ನೀಲಮ್ಮನವರ ಪೊಲೀಸ್ ನೀರೀಕ್ಷಕರು ಮುಂಡಗೋಡ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಪಿ.ಎಸ್‌.ಐಗಳಾದ ಪರಶುರಾಮ ಮಿರ್ಜಗಿ, ಹನುಮಂತ ಕುಡಗುಂಟಿ ಹಾಗೂ ಸಿಬ್ಬಂದಿಯವರಾದ  ಮಂಜಪ್ಪ ಚಿಂಚಿಲಿ, ಕೋಟೇಶ್ವರ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ ಇವರು ಆರೋಪಿತರನ್ನು ಹೆಡೆಮುರಿ ಕಟ್ಟಲು ಪ್ರಮುಖ ಪಾತ್ರ ವಹಿಸಿದ್ದಾರೆ. ಸದರಿ ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಪೋಲಿಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಶ್ಲಾಘಿಸಿದ್ದು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.