ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: 4 ಸೆರೆ

gangrape

ಬುಲಂದ್‌ಶಹರ್, ಡಿ.7  ಸಾಮೂಹಿಕ ಅತ್ಯಾಚಾರ ನಡೆದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನಾಲ್ವರು  ಅಪ್ರಾಪ್ತ ವಯಸ್ಕಿನ ಬಾಲಕರನ್ನು  ಯುಪಿಯಲ್ಲಿ  ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಶನಿವಾರ ತಿಳಿಸಿವೆ.

ಈ ಘಟನೆಯ ಸಂಬಂಧ ನಾಲ್ವರ ವಿರುದ್ಧ  ಪ್ರಕರಣ ದಾಖಲಾಗಿದೆ ಎಂದು  ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಹೇಳಿದ್ದಾರೆ. 

ಬಂಧಿತರನ್ನು , ಪಿಂಕೇಶ್, ಶಿವಂ, ಅಮರ್ಕಂತ್ ಮತ್ತು ಹೇಮಂತ್ ಎಂದು ಗುರುತಿಸಲಾಗಿದೆ ಇವರೆಲ್ಲರೂ ಅಪ್ರಾಪ್ತ  ವಯಸ್ಸಿನವರಾಗಿದ್ದಾರೆ . 

ಪಹಾಸು ಪ್ರದೇಶದ ಹಳ್ಳಿಯಲ್ಲಿ  15 ವರ್ಷದ ವಿದ್ಯಾರ್ಥಿನಿ ಡಿಸೆಂಬರ್ 3 ರಂದು ತರಕಾರಿ ತರಲು ತನ್ನ ಹೊಲಕ್ಕೆ ಹೋಗಿದ್ದಾಗ ಅದೇ ಹಳ್ಳಿಯ ನಾಲ್ಕು ಯುವಕರು ಆಕೆಯನ್ನು ಬಲವಂತವಾಗಿ ಮೈದಾನಕ್ಕೆ ಕರೆದೊಯ್ದರು, ಅಲ್ಲಿ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರೆ ಮತ್ತೊಬ್ಬ ಈ ಹೀನ,  ನಾಚಿಕೆಗೇಡಿನ ಕೃತ್ಯದ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ.

ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಸಿಬೇಕಾಗುತ್ತದೆ ಎಮದು ಆಕೆಗೆ  ಬೆದರಿಕೆ ಹಾಕಿದ್ದರೆ. 

ಈ ನಡುವೆ   ಆರೋಪಿ ವಿಡಿಯೋವನ್ನು ನಂತರ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದು, ನಂತರ ಆ ಪ್ರದೇಶದಲ್ಲಿ ಕೋಲಾಹಲ ಉಂಟಾಗಿದೆ.

ಬಾಲಕಿಯ  ಚಿಕ್ಕಪ್ಪ ಸಾಮೂಹಿಕ ಅತ್ಯಾಚಾರ ಮತ್ತು ವೈರಲ್ ವಿಡಿಯೋ ಬಗ್ಗೆ ಪಹಾಸು ಪೊಲೀಸರಿಗೆ ಮಾಹಿತಿ ನೀಡಿದ್ದು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಳಿಕ ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದೂ  ಮೂಲಗಳು ತಿಳಿಸಿವೆ.