ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹಗಳು
ಹೂವಿನಹಡಗಲಿ 18: ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿದೆಎಂದು ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ ಹೇಳಿದರು. ಪಟ್ಟಣದ ಗವಿಮಠದಲ್ಲಿ 30ನೇ ವರ್ಷದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸರಳ ಮದುವೆಯಿಂದ ಬದುಕಿನಲ್ಲಿ ಶಾಂತಿ. ನೆಮ್ಮದಿ ಸಿಗುತ್ತದೆ ಎಂದರು. ವಿವಾಹ ನೆರವೇರಿತು. ಬೆಳಿಗ್ಗೆ ಜಂಗಮ ವಟುಗಳ ಶಿವದೀಕ್ಷೆ ಅಯ್ಯಾಚಾರ ಜರುಗಿತು. ಹಾಲಯ್ಯ ಶಾಸ್ತ್ರಿ, ಸಿ.ಎಂ. ಚನ್ನಬಸಯ್ಯ ನೇತೃತ್ವದ ತಂಡ ಪೌರೋಹಿತ್ಯ ನೆರವೇರಿಸಿದರು.ಹೂವಿನಹಡಗಲಿ ಗವಿಮಠದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಉತ್ತಂಗಿಯ ಸೋಮಶಂಕರ ಸ್ವಾಮೀಜಿ ಮಾತನಾಡಿದರು
ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಿಂಧೋಗಿಯ ಚಿದಾನಂದ ಸ್ವಾಮೀಜಿ, ಸ್ವಾಮೀಜಿ, ಬಳ್ಳಾರಿಯ ಮಲ್ಲಿಕಾರ್ಜುನ ಸ್ವಾಮೀಜಿ, ಉಪನಾಯಕನಹಳ್ಳಿ ದೊಡ್ಡಬಸಯ್ಯ ಶಾಸ್ತ್ರಿ, ಶಿವಕುಮಾರ ಅನ್ನ ದಿನಗಳಲ್ಲಿ ವಿರುಪಾಪುರದ ಮುದುಕೇಶ್ವರ ಸ್ವಾಮೀಜಿ, ನಾಗತಿಬಸಾಪುರ ಗಿರಿರಾಜ ಹಾಲಸ್ವಾಮೀಜಿ, ಮೈನಳ್ಳಿಯ ಸಿದ್ದೇಶ್ವರ ಶಾಸ್ತ್ರಿ ಸಾನ್ನಿಧ್ಯ ವಹಿಸಿದ್ದರು. ಡಾ. ನಾಗನಗೌಡ, ಪ್ರಸನ್ನಗೌಡ ಇದ್ದರು. ಸಂಗಪ್ಪ ಧರ್ಮಸಾಗರ ಉದ್ಘಾಟಿಸಿದರು.
ಮೂರು ಜೋಡಿಗಳ ಸಾಮೂಹಿಕ ರುದ್ರಮುನಿ ಶಿವಯೋಗಿಗಳ ಪೂಜಾ ಮಂದಿರವನ್ನು ನಿವೃತ್ತ ಪ್ರಾಚಾರ್ಯ ಕೆ. ರವೀಂದ್ರನಾಥ, ಡಾ.ನಾಗನಗೌಡ ಉದ್ಘಾಟಿಸಿದರು. ಗವಿಸಿದ್ದೇಶ್ವರ ಸ್ವಾಮಿ ಜಾತ್ರೆಯಲ್ಲಿ ಕೊಪ್ಪಳ ಮಠದ ಮಾದರಿಯಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಪ್ರಸಾದಕ್ಕೆ ಕರ್ಚಿಕಾಯಿ, ಜಿಲೇಬಿ, ಮಾದಲಿ, ಗೋಧಿ ಪಾಯಸ, ಬದನೆಕಾಯಿ ಪಲ್ಕೆ, ತರಕಾರಿ ಪಲಾವ್, ಸಾಂಬಾರ್, ಚಟ್ಟಿಪುಡಿ, ಉಪ್ಪಿನಕಾಯಿ ಬಡಿಸಲಾಯಿತು. ಮಧ್ಯಾಹ್ನ, ರಾತ್ರಿ ಸಾವಿರಾರು ಸಂಖ್ಯೆಯ ಜನರು ಪ್ರಸಾದ ಸ್ವೀಕರಿಸಿದರು.