ರಾಣೆಬೆನ್ನೂರಲ್ಲಿ ರಥಸಪ್ತಮಿ 108 ಸದಸ್ಯರಿಂದ ಸಾಮೂಹಿಕ ಸೂರ್ಯ ನಮಸ್ಕಾರ
ರಾಣೇಬೆನ್ನೂರು 05 : ಚೋಳಮರಡೇಶ್ವರ ನಗರದಲ್ಲಿ ರಥಸಪ್ತಮಿ ದಿನದ ಪ್ರಯುಕ್ತ ಸ್ಥಳಿಯ ಯೋಗ ಕೇಂದ್ರದ ಸದಸ್ಯರು 108 ಸೂರ್ಯನಮಸ್ಕಾರಗಳನ್ನು ಸಾಮೂಹಿಕವಾಗಿ ಮಾಡುವದರ ಮೂಲಕ ರಥಸಪ್ತಮಿ ದಿನವನ್ನು ವಿಶೇಷವಾಗಿ ಆಚರಿಸಿದರು.ನಗರದ ವಿಶ್ರಾಂತ ಸರ್ಕಾರಿ ನೌಕರರು, ಮತ್ತು ಸ್ಥಳೀಯ ಯೋಗ ಆಸಕ್ತರು ಒಡಗೂಡಿ ಚೋಳಮರಡೇಶ್ವರ ಯೋಗ ಸಾಧನಾ ಕೇಂದ್ರ ಸ್ಥಾಪನೆ ಮಾಡಿಕೊಂಡು ಪ್ರತಿದಿನ ಯೋಗ, ಧ್ಯಾನ ಮತ್ತಿತರ ಅರ್ಥಪೂರ್ಣ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು, ಇಂದಿನ ಯುವ ಪೀಳಿಗೆ ಅವಶ್ಯಕ ಕಾರ್ಯಚಟುವಟಿಕೆಗಳಿಗೆ ತಮ್ಮ ದಿನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಈ ರೀತಿಯ ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡುವ ಸಂಜೆ, ಮುಂಜಾನೆ ಕಾರ್ಯಕ್ರಮಗಳನ್ನು ಪಾಲಿಸಬೇಕು ಇದರ ಮುಲಕ ಸಧೃಡ ಭಾರತ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸ್ವಾಮೀ ವಿವೇಕಾನಂದರ ಯುವ ಭಾರತ ನಿರ್ಮಿಸಲೂ ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಮಲಾ ಬಣಗಾರ, ಮಹೇಶ್ವರ್ಪ ಜಾಡರ, ಸುಮಿತ್ರಾ ಹರಿಹರ, ಸುಧಾ, ಶಂಕರೇಗೌಡ, ಬಸಮ್ಮ ಹಾಗೂ ಚೋಳಮರಡೇಶ್ವರ ಯೋಗ ಕೇಂದ್ರದ ಯೋಗ ಸಾಧಕರು ಭಾಗವಹಿಸಿದ್ದರು.ಊ5-ಖಓಖ02-ಓಇಘಖ. ಂಓಆ. ಕಊಓಖಿಓ.