ಕುಮ್ಮೂರ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಮಾರುತಿ ಅವಿರೋಧವಾಗಿ ಆಯ್ಕೆ

Maruti elected unopposed as president of Kummura Gram Panchayat

ಕುಮ್ಮೂರ ಗ್ರಾಮ ಪಂಚಾಯತ ಅಧ್ಯಕ್ಷರಾಗಿ  ಮಾರುತಿ ಅವಿರೋಧವಾಗಿ ಆಯ್ಕೆ

ಬ್ಯಾಡಗಿ 20: ತಾಲ್ಲೂಕಿನ ಕುಮ್ಮೂರ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಮಾರುತಿ ಮನೋಹಾರ ಕಾಳಪ್ಪನವರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. 

ಹಿಂದಿನ ಅಧ್ಯಕ್ಷ ಲಕ್ಷ್ಮಣ ಹಾವೇರಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ಮಾರುತಿ ಕಾಳಪ್ಪನವರ ಮಾತ್ರ ನಾಮ ಪತ್ರ ಸಲ್ಲಿಸಿದ್ದರು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಮಾರುತಿಗೆ ಅಧಿಕಾರ ವಹಿಸಿಕೊಟ್ಟರು.ಉಪಾಧ್ಯಕ್ಷೆ ನೀಲವ್ವ ಹರಿಜನ, ಸದಸ್ಯರಾದ ಚನ್ನಪ್ಪ ಕಾಕೋಳ, ಲಕ್ಷ್ಮಿವ್ವ ಲಿಂಗಾಪೂರ, ಚಂದ್ರಕಲಾ ತಳವಾರ, ಚನ್ನಬಸಪ್ಪ ಬಣಕಾರ, ರೇಣುಕವ್ವ ತುಮರಿಕೊಪ್ಪ, ಸುಶೀಲವ್ವ ಫಾಸಿ, ಶಾಂತವ್ವ ಅಸುಂಡಿ, ಶಾಂತವ್ವ ಲಮಾಣಿ, ಪಿಡಿಓ ಗದಿಗೆಪ್ಪ ಕೊಪ್ಪದ, ಕಾರ್ಯದರ್ಶಿ ಎಚ್‌.ಎಸ್‌.ನಡುವಿನಹಳ್ಳಿ, ಬಿಲ್ ಕಲೆಕ್ಟರ್ ಎಚ್‌.ವೆಂಕಟೇಶ ಧುರೀಣರಾದ ಮಹೇಶಗೌಡ ಪಾಟೀಲ, ರವಿ ಬ್ಯಾಡಗಿ, ನಾಗನಗೌಡ ಪಾಟೀಲ, ಬಸನಗೌಡ ಲಿಂಗನಗೌಡ ಸೇರಿದಂತೆ ಇತರರಿದ್ದರು.