ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನ 48 ಕೆ.ಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ ಉಕ್ರೇನ್ನ ಹನಾ ಒಕೋಟಾ ಅವರ ವಿರುದ್ಧ ಭಾರತದ ಮೇರಿ ಕೋಮ್ ಜಯ ಸಾಧಿಸಿದ್ದಾರೆ.
ಈ ಮೂಲಕ ಮೇರಿ ಕೋಮ್ ಆರನೇ ಬಾರಿ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ನಿಮರ್ಿಸಿದ್ದಾರೆ.
ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನ 48 ಕೆ.ಜಿ ವಿಭಾಗದ ಸ್ಪಧರ್ೆಯಲ್ಲಿ ಮೇರಿ, ಉಕ್ರೇನ್ನ ಹನಾ ಒಕೋಟಾ ಅವರ ವಿರುದ್ಧ 5:0 ಅಂಕಗಳಿಂದ ಜಯಗಳಿಸಿ, ಚಿನ್ನಕ್ಕೆ ಮುತ್ತಿಕ್ಕಿದರು.
ಗುರುವಾರ ನಡೆದ ಸೆಮಿಫೈನಲ್ನಲ್ಲಿ ಮೇರಿ ದಕ್ಷಿಣ ಕೊರಿಯಾದ ಕಿಮ್ ಹಾಂಗ್ ಮಿ ಅವರನ್ನು ಮಣಿಸಿದ್ದರು. ಹನಾ ಒಕೋಟಾ ಸೆಮಿಫೈನಲ್ನಲ್ಲಿ ಜಪಾನ್ನ ಮಡೋಕಾ ವಾಡ ಅವರಿಗೆ ಸೋಲುಣಿಸಿದ್ದರು.
2002ರಲ್ಲಿ ಮೊದಲ ಬಾರಿ ಮೇರಿ ಕೋಮ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದಿದ್ದರು. ಆಗ ಅವರು 45 ಕೆ.ಜಿ ವಿಭಾಗದಲ್ಲಿ ಸ್ಪಧರ್ಿಸಿದ್ದರು. 2005, 2006 ಮತ್ತು 2008ರಲ್ಲಿ 46 ಕೆ.ಜಿ ವಿಭಾಗದಲ್ಲಿ ಚಿನ್ನ ಗಳಿಸಿದ್ದರು. 2010ರಲ್ಲಿ 48 ಕೆ.ಜಿ ವಿಭಾಗದಲ್ಲಿ ಕಣಕ್ಕೆ ಇಳಿದ ಮೊದಲಿಗರಾಗಿದ್ದರು.