ಮ್ಯಾರಥಾನ್ ದಕ್ಷಣ ಕರ್ನಾಟಕಕ್ಕಿಂತಲೂ ಉತ್ತರ ಕರ್ನಾಟಕದವರಿಗೆ ಅವಶ್ಯ : ಚಂದ್ರಕಾಂತ

Marathon is a must for North Karnataka more than South Karnataka: Chandrakanta

ಮ್ಯಾರಥಾನ್ ದಕ್ಷಣ ಕರ್ನಾಟಕಕ್ಕಿಂತಲೂ ಉತ್ತರ ಕರ್ನಾಟಕದವರಿಗೆ ಅವಶ್ಯ : ಚಂದ್ರಕಾಂತ

ವಿಜಯಪುರ 21: ವೃಕ್ಷಥಾನ್ ಹೆರಿಟೇಜ್ ರನ್‌-2024 ಒಂದು ಒಳ್ಳೆ ಕಾರ್ಯಕ್ರಮವಾಗಿದ್ದು, ಇದು ಕ್ರೀಡೆ ಹಾಗೂ ಪರಿಸರಕ್ಕೆ ಉಪಯುಕ್ತವಾಗಿದೆ. ಈ ಮ್ಯಾರಥಾನ್ ದಕ್ಷಣ ಕರ್ನಾಟಕಕ್ಕಿಂತಲೂ ಉತ್ತರ ಕರ್ನಾಟಕದವರಿಗೆ ಅವಶ್ಯ ಈ ಓಟ ಬೆಳಗ್ಗೆ ಜಾವ ನಡೆಯುವುದರಿಂದ  ಪರಿಸರ ಪ್ರೇಮಿಗಳಿಗೆ  ಆನಂದ ಉಂಟುಮಾಡುತ್ತದೆ ಎಂದು  ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಪವರ್ ಹೇಳಿದರು. ಇಂದು ಶನಿವಾರ ನಗರದ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ  ವೃಕ್ಷೋತಾನ  ಮ್ಯಾರಥಾನ ಪೂರ್ವಭಾವಿ ಸಮಾರಂಭ  ನಡೆಯಿತು ಇದನ್ನು ಉದ್ಘಾಟಿಸಿ  ಮಾತನಾಡಿದರು  

ಕಾರ್ಯಕ್ರಮದ ಅತಿಥಿ ಸ್ಥಾನ ಅಲಂಕರಿಸಿದ  ಖ್ಯಾತ ಉದ್ಯಮಿ  ಸಂಜಯ್  ಲಾಡರ ಮಾತನಾಡಿ ವೃಕ್ಷೋತಾನ ಒಂದು ಒಳ್ಳೆ ಕಾರ್ಯಕ್ರಮವಾಗಿದ್ದು ವಿಶೇಷವಾಗಿ ವಿಜಯಪುರ ಮ್ಯಾರಥಾನದಲ್ಲಿ ಬೆಳಗಾವಿ ಮ್ಯಾರಥಾನ್ ಗಿಂತ  ಹೆಚ್ಚಿನ ಪ್ರಮಾಣದ ಸ್ಪರ್ಧಾರ್ಥಿಗಳು  ಭಾಗವಹಿಸುತ್ತಿದ್ದಾರೆ ಬೆಳಗಾವಿ  ಮ್ಯಾರಥಾನದಲ್ಲಿ  ಮೂರರಿಂದ ನಾಲ್ಕು ಸಾವಿರ  ಓಟಗಾರರು ಪಾಲ್ಗೊಂಡಿದ್ದರು.  ವಿಜಯಪುರ ಮ್ಯಾರಥನದಲ್ಲಿ  10 ಸಾವಿರ ಓಟಗಾರರು ಭಾಗವಹಿಸಲಿದ್ದಾರೆ  ಈ ವೃಕ್ಷೋತನ್ ಮ್ಯಾರಥಾನ್  ಆಯೋಜಿಸಿದ  ಜಿಲ್ಲಾ ಉಸ್ತುವಾರಿ ಸಚಿವರಾದ  ಡಾ ಎಮ್ ಬಿ ಪಾಟೀಲ ಹಾಗೂ ಡಾ. ಮಾಂತೇಶ್ ಬಿರಾದರ ಅವರಿಗೆ ಅಭಿನಂದನೆ ಸಲ್ಲಿಸಿದರು ಇನ್ನೋರ್ವ  ಅತಿಥಿಗಳಾದ ಕ್ರೀಡಾ ಇಲಾಖೆಯ ಉಪನಿರ್ದೇಶಕ  ರಾಜಶೇಖರ್ ಮಾತನಾಡಿ  ವಿಜಯಪುರದವರು ಏನೇ ಮಾಡಿದರು  ವಿಭಿನ್ನವಾಗಿ ಮಾಡುತ್ತಾರೆ ಎಂಬ ವಾಡಿಕೆಯನ್ನು  ಡಾ. ಎಂಬಿ ಪಾಟೀಲ್ ಸಾಹೇಬರು, ಡಾ. ಮಹಾಂತೇಶ್ ಬಿರಾದಾರ ವೃಕ್ಷೋತಾನ್  ತಂಡದವರು  ಸಾಬೀತುಪಡಿಸುತ್ತಿದ್ದಾರೆ ಎಲ್ಲರೂ ಮ್ಯಾರಥಾನ್ ಆಯೋಜಿಸುತ್ತಾರೆ ವಿಜಯಪುರ  ವೃಕ್ಷೋಥಾನ್ ಆಯೋಜಿಸುತ್ತಿದೆ . 

  ವಿಜಯಪುರದ ಭವ್ಯ  ಸಾಂಸ್ಕೃತಿಕ ಪರಂಪರೆ, ಆರೋಗ್ಯ, ಪರಿಸರವನ್ನು  ಕಾಪಾಡುವ ಈ ಎಲ್ಲಾ ಉದ್ದೇಶದಿಂದ ಆಯೋಜಿಸುವ ವೃಕ್ಷೋತಾನ ಏಕೆ  ಸಂಘಟನೆಯಾಗಿದೆ ಎಂದು  ಹೇಳಿದರು.ಕಾರ್ಯಕ್ರಮದಲ್ಲಿ  ವಿಜಯಪುರ ಸೈಕ್ಲಿಂಗ್  ಗುಂಪಿನ ಕುರಿತು ಗೋಷ್ಠಿಯನ್ನು ಆಯೋಜಿಸಲಾಗಿತ್ತು.   ಕಾರ್ಯಕ್ರಮದಲ್ಲಿ ಋಷಿ ಪೋರವಾಲ ಪ್ರಾಸ್ತಾವಿಕವಾಗಿ ಮಾತನಾಡಿದರು ರಾಜು ಯಲಗೋಡ್  ಮಾತನಾಡಿ ಈ ವಿಜಯಪುರ ಸೈಕ್ಲಿಂಗ್ ಗ್ರೂಪ್ ವನ್ನು  2018 ರಲ್ಲಿ  ಡಾ. ಮಹಾಂತೇಶ ಬಿರಾದಾರವರು ಸ್ಥಾಪಿಸಿದರು ಅರಣ್ಯ ಪ್ರದೇಶವನ್ನು ಹೆಚ್ಚಿಸುವುದು,   ಆರೋಗ್ಯ  ಪ್ರಾಚೀನ ಸ್ಮಾರಕಗಳ ರಕ್ಷಣೆ ಬಗ್ಗೆ ಅರಿವು ಮೂಡಿಸುವುದು  ಮತ್ತು ಸಸಿಗಳ ನೆಡುವುದು  ಇದರ ಉದ್ದೇಶಗಳೆಂದು ಹೇಳಿದರು  ವಿಜಯಪುರ ಸೈಕ್ಲಿಂಗ್ ಗ್ರೂಪಿನ ಪ್ರಮುಖ  ಗುರಿ ಎಂದರೆ ಮುಂದಿನ ದಿನಗಳಲ್ಲಿ ಮನುಷ್ಯನನ್ನು  ಉಕ್ಕಿನ ಮನುಷ್ಯನಾಗಿ ಮಾಡುವುದಾಗಿದೆ  ಎಂದು ಹೇಳಿದರು  ಗೋಷ್ಠಿಯಲ್ಲಿ ಸಂಕೇತ ಬಗಲಿ ಶಂಭು ಕಪೂರ ಮಠ,  ಬಸವರಾಜ ದೇವೂರ, ಭಾಗವಹಿಸಿದ್ದರು. 

ಈ ಕಾರ್ಯಕ್ರಮದಲ್ಲಿ  ಋಷಿ ಪೂರವಾಲ ಪ್ರಾಸ್ತವಿಕವಾಗಿ  ಮಾತನಾಡಿದರು ಪೂಜಾ ಗೌಡ ನೇತೃತ್ವದಲ್ಲಿ ಭರತನಾಟ್ಯ ಹಾಗೂ  ವಿವಿಧ ನೃತ್ಯಗಳು  ನಡೆದವು ಹಾಗೂ  ವಿವಿಧ ಗೋಷ್ಠಿಗಳು ನಡೆದವು.  ಈ ಕಾರ್ಯಕ್ರಮದಲ್ಲಿ ಡಾ. ಮಾಂತೇಶ್ ಬಿರಾದಾರ , ಮುರುಗೇಶ್ ಪಟ್ಟಣಶೆಟ್ಟಿ  ಹಾಗೂ ಆರ್ ಕೆ  ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು  ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು  ಹರಿಕೃಷ್ಣ  ನಿರೂಪಿಸಿದರು.ಧನ್ಯವಾದಗಳು.-