ಮಕ್ಕಳ ಸದೃಢತೆ, ಸುರಕ್ಷತೆಗೆ ಅನೇಕ ಯೋಜನೆ ಜಾರಿ: ಚಿಣ್ಣನ್ನವರ

ಕಾಲವಾಡ 02:  ಮಕ್ಕಳು ಸದೃಢ ಹಾಗೂ ಸುರಕ್ಷಿತವಾಗಿ ಬೆಳವಣಿಗೆ ಹೊಂದಲು ಸಕರ್ಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಅವುಗಳ ಸದುಪಯೋಗ ಮತ್ತು ಮಕ್ಕಳ ಉತ್ತೇಜನಕ್ಕೆ ಸಹಕಾರಿಯಾಗಲು ಸಂಬಂಧಿಸಿದ ಅಧಿಕಾರಿಗಳು, ಪಾಲಕರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಚಿಣ್ಣನ್ನವರ ಆರ್.ಎಸ್. ಕರೆ ನೀಡಿದರು.  

ಅವರು ಜಿಲ್ಲೆಯ ಕಾಲವಾಡ ಗ್ರಾಮದಲ್ಲಿ ಆರೂಢ ಸ್ವಯಂ ಸೇವಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಕನರ್ಾಟಕ ಬಾಲವಿಕಾಸ ಅಕಾಡೆಮಿ, ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಘಟಕ, ಡಿಮ್ಹಾನ್ಸ, ಗ್ರಾಮ ಪಂಚಾಯತ್, ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಕಾಲವಾಡ ಇವರ ಸಂಯುಕ್ತ ಆಶ್ರಯದಲ್ಲಿ ಕನರ್ಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಬಾಲ್ಯ ವಿವಾಹ ತಡೆ  ಕುರಿತು ಪ್ರಭಂದ ಸ್ಪಧರ್ೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಇಂದು ಮಕ್ಕಳು ತಾಂತ್ರಿಕತೆಯಲ್ಲಿ ಅಪಾರ ಜ್ಞಾನವನ್ನು ಹೊಂದುತ್ತಿರುವರು. ಆದರೆ ಮೊಬೈಲ ಬಳಕೆಯಿಂದ ದುಷ್ಪರಿಣಾಮ ಬೀರುತ್ತಿರುವದರಿಂದ ಪಾಲಕರು  ತಮ್ಮ ಮಕ್ಕಳ ಚಲನವಲನಗಳನ್ನು ಗಮನಿಸಬೇಕು ಎಂದರು.  

ಕೌಟುಂಬಿಕ ದೌರ್ಜನ್ಯ ಸಾಮಾಜಿಕ, ಆಥರ್ಿಕ ದಮನಿತ ವರ್ಗದ ಜನರ ನೆರವಿಗೆ ಕಾನೂನು ಸೇವಾ ಪ್ರಾಧಿಕಾರ ಸದಾ ತೆರೆದಿರುತ್ತದೆ ಎಂದರು. 

ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅನ್ನಪೂರ್ಣ ಸಂಗಳದ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ  ಶಾಲೆಗೆ ಸೇರಿಸಿ ಅವರಿಗೆ ಪೌಷ್ಠಿಕ ಆಹಾರ ನೀಡುವ ಮೂಲಕ ಸದೃಢಗೊಳಿಸುವಂತಾಗಬೇಕು. ಮಕ್ಕಳ ಹಕ್ಕುಗಳ, ಮಕ್ಕಳ ಅಪಹರಣ, ಬಾಲ್ಯ ವಿವಾಹ ತಡೆಗಟ್ಟಲು ಹಾಗೂ ಸಕರ್ಾರಿ ಸೌಲಭ್ಯಗಳ ಪರಿಚಯವನ್ನು ಮಕ್ಕಳಿಗೆ ಮೇಲಿಂದಮೇಲೆ ನೀಡಿ, ಮೂಢನಂಬಿಕೆ, ಅನಕ್ಷರತೆಯನ್ನು ತೊಲಗುವಂತೆ ಮಾಡಿದಾಗ ಸದೃಢ ಸಮಾಜ ನಿಮರ್ಾಣ ಸಾದ್ಯ ಎಂದು ಕಥೆ ಮೂಲಕ ಮಕ್ಕಳನ್ನು ಮಂತ್ರಮುಗ್ಧಗೊಳಿಸಿದರು. 

ಜಿಲ್ಲಾ ಆಸ್ಪತ್ರೆ ರಕ್ತಭಂಡಾರ ವಿಭಾಗದ ಮೇಲ್ವಿಚಾರಕ ಹನಮಂತ ಹೊಸಮನಿ ಮಾತನಾಡಿ, ಮಕ್ಕಳು ಅನುಭವ ಮಂಟಪ, ಮಕ್ಕಳು ಬೆಲೆ ಕಟ್ಟಲಾಗದ ವಸ್ತು. ಅವರಿಗೆ ಬಾಲ್ಯಾವಸ್ಥೆಯಲ್ಲಿ ಸೂಕ್ತ ಶಿಕ್ಷಣ, ಮಾರ್ಗದರ್ಶನ ನೀಡುವದು ಶಿಕ್ಷಕರ ಗುರುತರ ಜವಾಬ್ದಾರಿ. ಜೊತೆ ಪಾಲಕರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು. 

ಡಿಮ್ಹಾನ್ಸ ವೈದ್ಯಕೀಯ ಅಧೀಕ್ಷಕ ನಿವಾಸ ಕೆ, ಬಾಲವಿಕಾಸ ಅಕಾಡೆಮಿ ಅಧೀಕ್ಷಕ ಸಿ ಎ. ಮುತ್ತಣ್ಣವರ, ಅಣ್ಣಿಗೇರಿ ಎಪಿಎಂಸಿ ಅದ್ಯಕ್ಷ ಯಲ್ಲಪ್ಪ ಮಾಡೊಳ್ಳಿ, ತಾಪಂ ಸದಸ್ಯ ಎನ.ಎಮ.ಪಾಟೀಲ ಡಾ. ಕೊಣ್ಣೂರ ಮಾತನಾಡಿದರು. 

ಕಾಲವಾಡ ಪಂಚಾಯತ್ ಅಧ್ಯಕ್ಷ ಬಸವರಾಜ ಬ್ಯಾಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಅಂಗಡಿ, ಡಿಮ್ಹಾನ್ಸ ಆಪ್ತಸಮಾಲೋಚಕ ಅಶೋಕ ಕೋರಿ, ಗ್ರಾ.ಪಂ.ಸದಸ್ಯರಾದ ಪಿ.ವಾಯ ಬಾಡಗಿ, ಗೋವಿಂದ ಮನ್ನೆನ್ನವರ, ತಿಪ್ಪಣ್ಣ ಯಮನೂರ, ಅರಬಣ್ಣವರ, ಸಾಲಮನಿ, ರೇಣುಕಾ ಬಾಕರ್ಿ, ಆರೂಢ ಸಂಸ್ಥೆ ಗೌರವಾಧ್ಯಕ್ಷ ಶಿವಪ್ಪ ಹೂಗಾರ, ಎಸ್ಡಿಎಮ್ಸಿ ಅಧ್ಯಕ್ಷ ಕೆ.ಜಿ ಧಾರವಾಡ, ಬಾಪು ಪಾಟೀಲ, ಮುಖ್ಯೋಪಾಧ್ಯಾಯ ವಿ.ಕೆ. ಗುಮಡಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರದೀಪ ಚಾಲುಕ್ಯ, ಶಾಂತಾಶಂಕರ, ಗೀತಾ ಮಗರ, ಚರಂತೆಪ್ಪ ಹಡಪದ, ಸಂತೋಷ ಹೂಗಾರ ಸೇರಿದಂತೆ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತರು,  ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಶಾಲಾ ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು. 

ಆರ್.ಎಸ್.ಜಗ್ಗಲ್ ನಿರೂಪಿಸಿದರು. ಆರೂಢ ಸಂಸ್ಥೆ ಕಾರ್ಯದಶರ್ಿ ನಾಗರಾಜ ಕಾಲವಾಡ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆ ಅಧ್ಯಕ್ಷೆ ಮಾಧವಿ ಹೂಗಾರ ವಂದಿಸಿದರು. 

ಸ್ಪಧರ್ೆಯಲ್ಲಿ ವಿಜೇತರಾದ ಮಕ್ಕಳಿಗೆ ನ್ಯಾಯಾಧೀಶರು ಬಹುಮಾನ ಮತ್ತು ಪ್ರಶಸ್ತಿ ಪತ್ರ ಪ್ರದಾನ ಮಾಡಿದರು.