ವಿಜಯಪುರ 30: ನಮ್ಮ ಪೂರ್ವಜರು ರೂಢಿಸಿಕೊಂಡು ಬಂದ ಜೀವನಶೈಲಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದರ ಪರಿಣಾಮ ಇಂದು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದರು.
ವಿಜಯಪುರ ತಾಲೂಕಿನ ಕಗ್ಗೋಡದ ರಾಮನಗೌಡ ಪಾಟೀಲ ಯತ್ನಾಳ ಗೋ ರಕ್ಷಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಶನಿವಾರ `ಕಾಯಕ ಮತ್ತು ಆರೋಗ್ಯ ಸಂಗಮ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೂರ್ವಜರ ಜೀವನಶೈಲಿ ಅತ್ಯಂತ ಶಿಸ್ತುಬದ್ಧವಾಗಿತ್ತು. ಶಿಸ್ತುಬದ್ಧ ಜೀವನಶೈಲಿಯಿಂದಾಗಿ ಅವರು ಧೀಘರ್ಾಯುಷಿಗಳಾಗಿದ್ದರು. ಪೂರ್ವಜರ ಹಾಗೂ ಇಂದಿನ ನಮ್ಮ ಜೀವನಶೈಲಿಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಧುಮೇಹ, ರಕ್ತದೊತ್ತಡ ಮೊದಲಾದ ರೋಗಗಳು ಜನರನ್ನು ಬಾಧಿಸುತ್ತಿವೆ. ಈ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ನಾವು ಪೂರ್ವಜರ ಜೀವನಶೈಲಿಯನ್ನು ಸಂಪೂರ್ಣವಾಗಿ ಮರೆತು ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದೇ ಕಾರಣವಾಗಿದೆ. ಇದೇ ಕಾರಣದಿಂದಾಗಿ ಆರೋಗ್ಯ ಹದಗೆಡುತ್ತಿದೆ ಎಂದರು.
ನಮ್ಮ ಪೂರ್ವಜರು ಸೂಯರ್ೋದಯಕ್ಕೂ ಮುಂಚೆ ಕೆಲವೊಂದು ಕಾರ್ಯಗಳನ್ನು ಕೈಗೊಳ್ಳುತ್ತಿದ್ದರು, ಸೂಯರ್ಾಸ್ತದ ನಂತರ ಕೆಲವೊಂದು ಕಾರ್ಯ ಕೈಗೊಳ್ಳುತ್ತಿರಲಿಲ್ಲ. ಈಗ ಆ ಪದ್ಧತಿ ಇಲ್ಲವಾಗಿದೆ. ಪೂರ್ವಜರು ಸೂರ್ಯ ಉದಯಿಸುವ ಮುಂಚೆ ಮಾಡುತ್ತಿದ್ದ ಕೆಲಸಗಳನ್ನು ಸೂರ್ಯ ಉದಯಿಸಿದ ನಂತರ, ಸೂಯರ್ಾಸ್ತದ ನಂತರ ಮಾಡಬೇಕಾದ ಕಾರ್ಯಗಳನ್ನು ಸೂಯರ್ಾಸ್ತದ ಮುಂಚೆ ಮಾಡುತ್ತಿದ್ದೇವೆ, ಈ ಬಗ್ಗೆ ಪುನರ್ ಅವಲೋಕನ ನಡೆಯಬೇಕಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಊಟ ಮಾಡುವ ಸಮಯದಲ್ಲಿಯೂ ಯಾವುದೇ ಶಿಸ್ತು ಇಲ್ಲ, 9 ಗಂಟೆಯ ಮುಂಚೆಯೂ ಊಟ ಮಾಡುತ್ತೇವೆ, 12 ಗಂಟೆಯ ನಂತರವೂ ಊಟ ಮಾಡುತ್ತೇವೆ, ಈ ಎಲ್ಲ ಅಶಸ್ತಿನಿಂದಾಗಿಯೇ ಆರೋಗ್ಯ ಹದಗೆಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಪ್ಯಾಷನ್ಗೆ ಮೊರೆ ಹೋಗಿರುವ ನಾವುಗಳು ಆಹಾರ ಪದ್ಧತಿಯಲ್ಲಿಯೂ ಫ್ಯಾಷನ್ ಸೇರ್ಪಡೆ ಮಾಡಿಕೊಂಡಿದ್ದೇವೆ. ಬಾಸುಮತಿ ಅಕ್ಕಿಯನ್ನೇ ಹೆಚ್ಚಾಗಿ ಬಳಸುತ್ತಿದ್ದೇವೆ. ಬಾಸಮತಿ ಅಕ್ಕಿ ಬಳಸಿದರೆ ತಪ್ಪೇನಿಲ್ಲ, ಆದರೆ ಬಳಸುವ ಪ್ರಮಾಣ ಕಡಿಮೆ ಇರಲಿ. ಸ್ಥಳೀಯ ಅಕ್ಕಿ ಸೇವನೆ ಮಾಡಿದರೆ ರೈತನ ಕಲ್ಯಾಣ ಸಾಧ್ಯವಾಗುತ್ತದೆ, ಆರೋಗ್ಯವೂ ಸಹ ವೃದ್ಧಿಯಾಗುತ್ತಿದೆ. ಸ್ಥಳೀಯವಾದ ಗೋದಿ, ಅಕ್ಕಿ ಮೊದಲಾದವುಗಳನ್ನು ಬಳಸಿದರೆ ರೈತನಿಗೂ ವೈಜ್ಞಾನಿಕ ದರ ದೊರಕುತ್ತದೆ ಎಂದು ನಿರ್ಮಲಾ ಸೀತಾರಾಮನ್ ಸಲಹೆ ನೀಡಿದರು.
ಕಾಯಕಕ್ಕೂ ಹಾಗೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ, ದೇಶದ ತತ್ವವೇ ಸೇವಾ ಹಾಗೂ ತ್ಯಾಗವೇ ಭಾರತದ ತತ್ವ. ವೃತ್ತಿಯನ್ನು ಪ್ರೀತಿಸಬೇಕು, ಆಗ ವೃತ್ತಿ ಸುಲಲಿತವಾಗುತ್ತದೆ. ಕಾಯಕವನ್ನು ಪ್ರೀತಿಸದೇ ಇದ್ದರೆ ನೀವು ಪ್ರಧಾನಿ, ರಕ್ಷಣಾ ಮಂತ್ರಿಯಾಗಿಯೂ ಸಂತೋಷ ಅನುಭವಿಸುವುದಿಲ್ಲ. ಕಾಯಕ ಇಷ್ಟಪಡದಿದ್ದರೆ ಮಾನಸಿಕ ಒತ್ತಡ ವೃದ್ಧಿಯಾಗುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಅನುದಿನವೂ ಆತ್ಮಾವಲೋಕನ ಮಾಡಿಕೊಂಡು ಮಲಗಬೇಕು, ಹೊಸ ಆತ್ಮವಿಶ್ವಾಸ ಮೂಡಿಸಿಕೊಳ್ಳಬೇಕು ಎಂದರು.
ಭಕ್ತಿ ಭಂಡಾರಿ ಅಣ್ಣ ಬಸವಣ್ಣನರ ಕೊಡುಗೆಯನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಮರಿಸಿದರು. ಸಾಮಾಜಿಕ ನ್ಯಾಯ ಮೊದಲಾದ ಅಂಶಗಳನ್ನು ಎಲ್ಲ ಸಕರ್ಾರಗಳು ಬಲವಾಗಿ ಪ್ರತಿಪಾದಿಸುತ್ತಿವೆ, ಈ ಸಾಮಾಜಿಕ ನ್ಯಾಯದ ಆಶಯ ಈಡೇರಿಕೆಗಾಗಿ ಸಕರ್ಾರದ ಆಡಳಿತ ಯಂತ್ರ ಕಾರ್ಯನಿರ್ವಹಿಸುತ್ತಿದೆ, ಆದರೆ ಇದೆಲ್ಲಕ್ಕಿಂತ ಮುಂಚೆಯೇ ಅಣ್ಣ ಬಸವಣ್ಣನವರು ತಮ್ಮ ಆತ್ಮಬಲ, ಮನೋಬಲದ ಮೂಲಕ ಸಾಮಾಜಿಕ ನ್ಯಾಯದ ಆಶಯವನ್ನು ಈಡೇರಿಸಿದ ಮಹಾನುಭವ. ಅಂತಹ ಮಹಾನುಭಾವ ಜನ್ಮತಾಳಿದ ಪವಿತ್ರ ನೆಲ ಪಂಚನದಿಗಳ ಬೀಡು ಸಹ ಹೌದು ಎಂದರು.
ಹನ್ನೆರಡನೇ ಶತಮಾನದಲ್ಲಿ ದೂರದೃಷ್ಟಿಯ ಚಿಂತನೆಗಳನ್ನು ಸಾಕಾರಗೊಳಿಸಿದ ಕೀತರ್ಿ ಅಣ್ಣ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಅಣ್ಣ ಬಸವಣ್ಣನವರ ಸಾಮಾಜಿಕ ನ್ಯಾಯದ ಕೊಡುಗೆಯನ್ನು ತಮ್ಮ ಸಂದೇಶದಲ್ಲಿ ಸ್ಮರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಮಾತನಾಡಿ, ನಿಸರ್ಗವೇ ಜಗತ್ತಿನ ದೊಡ್ಡ ವೈದ್ಯ. ದೇಶದ ಜನರಿಗೆ ಉತ್ತಮ ಆರೋಗ್ಯ ಒದಗಿಸುವ ಉದ್ದೇಶದಿಂದ ಆಯುಷ್ಮಾನ ಭಾರತ ಹಾಗೂ ಆರೋಗ್ಯ ಕನರ್ಾಟಕ ಆರೋಗ್ಯ ಯೋಜನೆಯನ್ನು ಸಮನ್ವಯತೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಕಾಯಕ ಹಾಗೂ ದಾಸೋಹದ ಪರಂಪರೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಬೆಳಗಾವಿ ಸಂಸದ ಸುರೇಶ ಅಂಗಡಿ, ಭಾರತ ವಿಕಾಸ ಸಂಗಮದ ಸಂಸ್ಥಾಪಕ ಅಧ್ಯಕ್ಷ ಕೆ.ಎನ್. ಗೋವಿಂದಾಚಾರ್ಯ, ಭಾರತ ವಿಕಾಸ ಸಂಗಮದ ರಾಷ್ಟ್ರೀಯ ಸಂರಕ್ಷಕ ಬಸವರಾಜ ಪಾಟೀಲ ಸೇಡಂ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇನ್ನಿತರ ಗಣ್ಯರು ವೇದಿಕೆ ಮೇಲಿದ್ದರು. ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು.