ಭೂಪಾಲ್, ಡಿ 24 - ಕಾಮನ್‌ವೆಲ್ತ್ ಕ್ರೀಡಾಕೂಟ ಚಿನ್ನದ ಪದಕ ವಿಜೇತೆ ಮನು ಭಾಕರ್ ಹಾಗೂ ಅನೀಷ್ ಭನ್ವಾಲ್ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್ ಹಿರಿಯರ ಮತ್ತು ಕಿರಿಯರ ಎರಡೂ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದಾರೆ.
ಮಂಗಳವಾರ ನಡೆದ ಅಂತಿಮ ಸುತ್ತಿನಲ್ಲಿ ಹರಿಯಾಣ ಪ್ರತಿನಿಧಿಸುತ್ತಿರುವ ಮನು ಭಾಕರ್ ಅವರು ಮಹಿಳೆಯರ 10 ಮೀ. ಏರ್ ಪಿಸ್ತೂಲ್ ನಲ್ಲಿ ಒಟ್ಟು ನಾಲ್ಕು ಚಿನ್ನದ (ವೈಯಕ್ತಿಕ ಮತ್ತು ತಂಡದ ವಿಭಾಗ) ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ರಾಜ್ಯಸ ಸಹ ಆಟಗಾರನಾದ ಅನೀಷ್ ಭನ್ವಾಲ್ ಅವರು 25 ರ್ಯಾಪಿಡ್ ಫೈರ್
ವೈಯಕ್ತಿಕ ಮತ್ತು ತಂಡದ ವಿಭಾಗಗಳಲ್ಲಿ(ಹಿರಿಯ ಮತ್ತು ಕಿರಿಯರ ಪುರುಷರ ವಿಭಾಗ) ಚಿನ್ನದ ಪದಕ ಗೆದ್ದರು.
17ರ ಪ್ರಾಯದ ಮನು ಭಾಕರ್ ಅವರು ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಈಗಾಗಲೇ ಪಡೆದುಕೊಂಡಿದ್ದಾರೆ. ಇವರ ಅರ್ಹತಾ ಸುತ್ತಿನಲ್ಲಿ ಮನು 588 ಅಂಕಗಳನ್ನು ಪಡೆದಿದ್ದರು. ಆ ಮೂಲಕ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಅನ್ನು ರಾಜ್ ಅವರ ದಾಖಲೆಯನ್ನು ಸರಿದೂಗಿಸಿದ್ದಾರೆ.
ದೇವಾಂಶಿ ಧಾಮ ಅವರು 238.8 ಅಂಕ ಹಾಗೂ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಪಡೆದಿರುವ ಯಶಸ್ವಿನಿ ಸಿಂಗ್ ದಸ್ವಾಲ್ ಅವರು 207.7 ಅಂಕಗಳೊಂದಿಗೆ ಕಂಚಿನ ಪದಕ ತನ್ನದಾಗಿಸಿಕೊಂಡರು.
ಫೈನಲ್ ಹಣಾಹಣಿಯಲ್ಲಿ ಭನ್ವಾಲ್ 28 ಶಾಟ್ ಗಳ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ರಾಜಸ್ಥಾನದ ಭಾವೇಶ್ ಶೇಖವತ್ 26 ಶಾಟ್ ಹಾಗೂ ಚಂಡೀಗಢದ ವಿಜಯ್ ವೀರ್ 22 ಶಾಟ್‌ಗಳೊಂದಿಗೆ ಕಂಚಿನ ಪದಕ ಗೆದ್ದರು.