ಕರಮುಡಿ ಗ್ರಾಪಂಗೆ ನೂತನ ಅಧ್ಯಕ್ಷರಾಗಿ ಮಂಜುನಾಥ ಆಯ್ಕೆ

ಲೋಕದರ್ಶನ ವರದಿ

ಯಲಬುಗರ್ಾ 30: ಸುಮಾರು ಒಂದು ತಿಂಗಳುಗಳಿಂದ ಬಾರಿ ಕುತೂಹಲಕ್ಕೆ ಕಾರಣವಾಗಿದ್ದ ಕರಮುಡಿ ಗ್ರಾಪಂಗೆ ಸ್ಥಳೀಯ ಸದಸ್ಯ ಮಂಜುನಾಥ ಕುಕನೂರು ಅಧ್ಯಕ್ಷರಾಗಿ ಆಯ್ಕೆಯಾದರು.

ಇಂದು ನಡೆದ ಚುನಾವಣೆಯಲ್ಲಿ ಬಸವರಾಜ ಬಲಕುಂದಿ ಹಾಗೂ ಮಂಜುನಾಥ ಕುಕನೂರು ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು ಹಾಗೂ ಬಾರಿ ರಾಜಕೀಯ ಜಿದ್ದಾ ಜಿದ್ದಿ ನಡೆದಿತ್ತು ಹಾಗೂ ಮೂಲತ ಬಿಜೆಪಿ ಬೆಂಬಲಿತ ಸದಸ್ಯರಾದ ಮಂಜುನಾಥ ಅವರು ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದಿಂದ ಅಧ್ಯಕ್ಷರಾದರು, ಒಟ್ಟು 18 ಜನ ಸದಸ್ಯರು ಇದ್ದು ಬಸವರಾಜ ಬಲಕುಂದಿಯವರ ಪಾಳಯದಲ್ಲಿ 10 ಜನ ಸದಸ್ಯರು ಗುರುತಿಸಿಕೊಂಡಿದ್ದರು, ಆದರೆ ಬಹುಮತವಿಲ್ಲದ್ದರಿಂದ ಮಂಜುನಾಥ ಅವರ ಆಯ್ಕೆ ಸುಲಭವಿರಲಿಲ್ಲಾ ಆದರೆ ಚುನಾವಣೆ ಪ್ರಾರಂಭವಾದರು ಬಸವರಾಜ ಅವರ ಬೆಂಬಲಿತ 7 ಜನ ಸದಸ್ಯರು ಮತ ಚಲಾವಣೆಗೆ ತಡವಾಗಿ ಬಂದಿದ್ದರಿಂದ ಚುನಾವಣಾ ಅಧಿಕಾರಿಗಳು 7 ಜನ ಸದಸ್ಯರಿಗೆ ಮತದಾನ ಅವಕಾಶ ನೀಡಲಿಲ್ಲಾ ಆಗಾಗಿ 7 ಮತಗಳನ್ನ ಮಂಜುನಾಥ ಪಡೆದರೆ, ಬಸವರಾಜ ಬಲಕುಂದಿಯವರಿಗೆ 3 ಮತಗಳು ಬಂದವು ಆದ್ದರಿಂದ ಮಂಜುನಾಥ ಅವರು ವಿಜಯಶಾಲಿಯಾದರು, ಹಾಗೂ ಉಪಾಧ್ಯಕ್ಷರಾಗಿ ಬಸಮ್ಮ ರಾಂಪೂರ ಪುನರಾಯ್ಕೆಯಾದರು,

ಚುನಾವಣಾಧಿಕಾರಿಯಾ ತಹಸೀಲ್ದಾರ ರಮೇಶ ಅಳವಂಡಿಕರ್, ಸಿಬ್ಬಂದಿಯಾದ ವಿಜಯಕುಮಾರ ಪಿಡಿಓ ಎಪ್ ಡಿ ಕಟ್ಟಿಮನಿ ಹಾಜರಿದ್ದರು.

ಮಂಜುನಾಥ ಅವರ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು ಸದಸ್ಯರಾದ ಮಂಜಣ್ಣ ಕಳಸಪ್ಪನವರ, ಪಾರವ್ವ ದೊಡ್ಮನಿ, ವೀಜಯಲಕ್ಷ್ಮೀ ಹವಳಿ ಮುಖಂಡರಾದ ಮಾಜಿ ತಾಪಂ ಸದಸ್ಯ ಸಂಗಪ್ಪ ಬಂಡಿ, ರಾಮಣ್ಣ ಮಾನಶೆಟ್ಟಿ, ಶರಣಬಸವ ಹೊಸಮನಿ, ಶರಣಪ್ಪ ನಿಂಗೋಜಿ, ರಾಮಣ್ಣ ವಡ್ಡರ, ಶರಣಪ್ಪ ಅಂಗಡಿ, ಲಿಂಗನಗೌಡ ಹೊಸಳ್ಳಿ ಸೇರಿದಂತೆ ಅನೇಕ ಬೆಂಬಲಿಗರು ಹಾಜರಿದ್ದರು.