ವಿದ್ಯುತ್ ಗುತ್ತಿಗೆದಾರರ ಬೇಡಿಕೆ ಈಡೇರಿಸುವಂತೆ ಸಚಿವ ಜಾರ್ಜಗೆ ಮಂಜುನಾಥ ಮನವಿ
ಶಿಗ್ಗಾವಿ 17 : ಹಾವೇರಿ ಜಿಲ್ಲೆಗೆ ಆಗಮಿಸಿದ ಇಂದನ ಸಚಿವ ಕೆಜೆ ಜಾರ್ಜ್ ರವರಿಗೆ ಹೆಸ್ಕಾಂ ಅಧ್ಯಕ್ಷರ ಸಮ್ಮುಖದಲ್ಲಿ ವಿದ್ಯುತ್ ಗುತ್ತಿಗೆದಾರರ ಬೇಡಿಕೆಗಳನ್ನು ಈಡೇರಿಸುವಂತೆ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಮಂಜುನಾಥ ಮಣ್ಣಣ್ಣವರ ಮನವಿ ಸಲ್ಲಿಸಿದರು. ಹಾವೇರಿ ಜಿಲ್ಲೆಗೆ ಸರ್ಕಾರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆಗಮಿಸಿದ ಇಂದನ ಸಚಿವ ಕೆ.ಜೆ.ಜಾರ್ಜ ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ರಾಜ್ಯ ವಿದ್ಯುತ್ ಗುತ್ತಿಗೆದಾರ ಸಂಘದ ಪೂರ್ವ ನಿಯೋಜಿತ ರಾಜ್ಯ ಸಮಿತಿಯ ಸದಸ್ಯ ಮಂಜುನಾಥ ಮಣ್ಣಣ್ಣವರ ಭೇಟಿಯಾಗಿ ಈಗಾಗಲೇ ಟೆಂಡರ್ ರಹಿತ ಐದು ಲಕ್ಷಗಳವರೆಗಿನ ಕಾಮಗಾರಿಗಳನ್ನು ನೀಡುತ್ತಿದ್ದು ಗುತ್ತಿಗೆದಾರರಿಗೆ ನೆರವಾಗುವ ದೃಷ್ಟಿಯಿಂದ 10 ಲಕ್ಷಗಳವರೆಗೆ ಹೆಚ್ಚಿಸಲಾಗುವುದು ಎಂದು ಹಿಂದೆ ರಾಜ್ಯ ಗುತ್ತಿಗೆದಾರ ಸಭೆಯಲ್ಲಿ ತಿಳಿಸಿ ಸಂಬಂಧಿಸಿದ ಅಧಿಕಾರಿಗಳಿಗೂ ಈ ಕುರಿತು ಕ್ರಮ ಕೈಗೊಳ್ಳಲು ಸೂಚಿಸಿದ್ದೀರಿ ಆದರೆ ಅಧಿಕಾರಿಗಳ ನಿರ್ಲಕ್ಷ ಧೋರಣೆ ಇವರಿಗೂ ಯಾವುದೇ ಕ್ರಮವಾಗಿಲ್ಲ ಜೊತೆಗೆ ಕಾಮಗಾರಿ ನಿರ್ವಹಿಸುವ ನಮಗೆ ಜೀವ ಭದ್ರತೆ ವಿಮಾ ಜಾರಿ ಮಾಡಿ ಅನುಕೂಲ ಮಾಡುವಂತೆ ಜೊತೆಗೆ ತುಂಡು ಗುತ್ತಿಗೆಗಳನ್ನು ಸಾಧ್ಯವಾದಷ್ಟು ಹೆಚ್ಚಿಗೆ ಕೊಡುವ ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಈ ಸಂದರ್ಭದಲ್ಲಿ ಹೆಸ್ಕಾಂ ಅಧ್ಯಕ್ಷ ಅಜ್ಜಂಪಿರ್ ಖಾದ್ರಿ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಶಾಸಕರುಗಳಾದ ಬಸವರಾಜ ಶಿವಣ್ಣವರ, ಶ್ರೀನಿವಾಸ ಮಾನೆ,ಯಾಸಿರಖಾನ ಪಠಾಣ ಸೇರಿದಂತೆ ಇನ್ನು ಹಲವು ಮುಖಂಡರು ಗುತ್ತಿಗೆದಾರರು ಉಪಸ್ಥಿತರಿದ್ದರು.