ಪತ್ರಕರ್ತರ ತಾಲೂಕ ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ ಅರೆಪಲ್ಲಿ ಆಯ್ಕೆ

ಮಂಜುನಾಥ ಅರೆಪಲ್ಲಿ ಅವಿರೋಧವಾಗಿ ಆಯ್ಕೆ

ಪತ್ರಕರ್ತರ ತಾಲೂಕ ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ ಅರೆಪಲ್ಲಿ ಆಯ್ಕೆ 

ಶಿರಹಟ್ಟಿ 27: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಶಿರಹಟ್ಟಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ ಅರೆಪಲ್ಲಿ ಅವಿರೋಧವಾಗಿ ಆಯ್ಕೆಯಾದರು. 

ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿಯವರ ಸೂಚನೆ ಮೇರೆಗೆ ಹಾಗೂ ಜಿಲ್ಲಾ ಕಾನಿಪ ಸಂಘದ ಉಪಾಧ್ಯಕ್ಷ ವಿರುಪಾಕ್ಷಪ್ಪ ಕಣವಿ ಹಾಗೂ ವೀರ​‍್ಪ ಸಿದ್ಧನಗೌಡರ ಉಪಸ್ಥಿತಿಯಲ್ಲಿ ನವ್ಹಂಬರ್ 27ರ ಬುಧವಾರದಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಎಲ್ಲರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹದೇವಪ್ಪ ಸ್ವಾಮಿ, ಕಾರ್ಯದರ್ಶಿ ಪ್ರಕಾಶ ಮೇಟಿ, ಶಿವಾನಂದ ಕುಳಗೇರಿ, ರಾಘವೇಂದ್ರ ಕುಲಕರ್ಣಿ, ಶಶಿಧರ ಶಿರಸಂಗಿ, ಪ್ರದೀಪ ಗೊಡಚಪ್ಪನವರ, ನಿಂಗಪ್ಪ ಹಮ್ಮಗಿ, ಭರಮಪ್ಪ ಬಳೊಟಗಿ, ಉದಯಕುಮಾರ ಹಣಗಿ, ವಿರೇಶ ಹುಮನಾಬಾದಿ, ಗೌರೀಶ ನಾಗಶೆಟ್ಟಿ, ಬಸವರಾಜ ನವಲಗುಂದ ಮತ್ತಿತರರು ಉಪಸ್ಥಿತರಿದ್ದರು.