ಶರಣರ ಜಯಂತಿಯಲ್ಲಿ ಮಾನೆ ಭಾಗವಹಿಸಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು

Mane participated in Sharan's Jayanti and paid floral tributes to the portraits

ಶರಣರ ಜಯಂತಿಯಲ್ಲಿ ಮಾನೆ ಭಾಗವಹಿಸಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು 

ಹಾನಗಲ್  11:   ಇಲ್ಲಿ ಸೋಮವಾರ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾಯಕ ಶರಣರ ಜಯಂತಿಯಲ್ಲಿ ಶಾಸಕ ಶ್ರೀನಿವಾಸ ಮಾನೆ ಭಾಗವಹಿಸಿ, ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. 

  ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಶರಣರು ಕಾಯಕ ನಿಷ್ಠೆ ಮೆರೆದಿದ್ದಾರೆ. ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಸಹ ಪ್ರಸ್ತುತವಾಗಿವೆ. 12 ನೇ ಶತಮಾನ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಕ್ರಾಂತಿ ಮಾಡಿದ ಶತಮಾನ. ಇವತ್ತಿನ ನಮ್ಮ ಸಂಸತ್ತಿನ ಮಾದರಿಯಲ್ಲಿ ಅಂದೇ ಅನುಭವ ಮಂಟಪ ನಿರ್ಮಾಣಗೊಂಡಿತ್ತು. ಯಾರನ್ನೂ ಕೀಳಾಗಿ ಕಾಣಬಾರದು ಎನ್ನುವುದು ಬಸವಣ್ಣನ ಸಮಾನತೆಯ ತತ್ವವಾಗಿದ್ದು ಅವರ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಶರಣ ಪಡೆಯ ಮಹನೀಯರಾಗಿದ್ದಾರೆ. ಶರಣರ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಹೆಚ್ಚು ಪ್ರಸ್ತುತವಾಗಿದ್ದು, ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯುವ ಮೂಲಕ ಜಯಂತಿ ಆಚರಣೆಗಳಿಗೆ ಅರ್ಥ ತಂದುಕೊಡಬೇಕಿದೆ ಎಂದರು.  ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಡಗಿ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಉಮೇಶ ದೊಡ್ಡಮನಿ, ಬಂಗಾರೇಶ ಹರಿಜನ, ಗುಡ್ಡಪ್ಪ ಬ್ಯಾಗವಾದಿ, ಎಂ.ಎಸ್‌.ಪಾಟೀಲ, ರಾಜೇಶ ಚವ್ಹಾಣ, ಕನಕಪ್ಪ ಕೊಪ್ಪದ, ಲಕ್ಷ್ಮಣ ಹರಿಜನ, ರಾಘವೇಂದ್ರ ಹಾನಗಲ್, ಚನ್ನಬಸಪ್ಪ ಬಿದರಗಡ್ಡಿ, ಅಶೋಕ ಪಾಟೀಲ, ಅಶೋಕ ಹಲಸೂರ, ವೀರನಗೌಡ ಪಾಟೀಲ, ಮಂಜುನಾಥ ವಡ್ಡರ, ಶೇಕಪ್ಪ ಹರಿಜನ, ಮಹದೇವಪ್ಪ ಹರಿಜನ, ಭೀಮನಗೌಡ ಹರಿಜನ, ರಾಮಪ್ಪ ಕುರಿಯವರ, ನಾಗಪ್ಪ ಚವ್ಹಾಣ, ಫಕ್ಕೀರ​‍್ಪ ಹರಿಜನ, ಕರಿಯಪ್ಪ ಗಂಟೇರ, ಶಿವಕುಮಾರ ತಳವಾರ, ಪ್ರವೀಣ ಹಿರೇಮಠ, ಲಿಂಗರಾಜ ಮಡಿವಾಳರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.