ಬಳ್ಳಾರಿ 10: ಕ್ಷಯರೋಗ ಪತ್ತೆ ಆಂದೋಲನವನ್ನು ಜಿಲ್ಲೆಯಲ್ಲಿ ಜು.15ರಿಂದ 27ರವರೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೈಗೆತ್ತಿಕೊಳ್ಳಬೇಕು. ಈ ಸಂದರ್ಭದಲ್ಲಿ ಪೌರಕಾಮರ್ಿಕರಿಗೆ, ಗಣಿ ಸೇರಿದಂತೆ ವಿವಿಧ ರೀತಿಯ ಕಾರಖಾನೆಗಳಲ್ಲಿ ದುಡಿಯುತ್ತಿರುವ ಕಾಮರ್ಿಕರಿಗೆ ಕಡ್ಡಾಯವಾಗಿ ಕ್ಷಯರೋಗ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಸಂಬಂಧಿಸಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಕ್ಷಯರೋಗ ಮತ್ತು ಅದರ ಲಕ್ಷಣಗಳು ಹಾಗೂ ಅದಕ್ಕಿರುವ ಚಿಕಿತ್ಸೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಶಾಲಾ ಮಕ್ಕಳ ಜಾಥಾ, ಡಂಗೂರು ಬಾರಿಸುವಿಕೆ,ಕರಪತ್ರಗಳ ಹಂಚುವಿಕೆ, ವಿವಿಧ ಮಾಧ್ಯಮಗಳ ಮೂಲಕ ಪ್ರಸಾರ, ಕಸದ ವಾಹನಗಳ ಜಿಂಗಲ್ಸ್ ಮೂಲಕ ಪ್ರಚಾರ ಸೇರಿದಂತೆ ವಿವಿಧ ರೀತಿಯ ಕ್ರಮಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದ ಅವರು ಈ ಕ್ಷಯರೋಗ ಪತ್ತೆ ಆಂದೋಲನ ಯಶಸ್ವಿಗೆ ವಿವಿಧ ಇಲಾಖೆಗಳ ಸಹಕಾರ ಅಗತ್ಯ, ಎಲ್ಲರು ತಮಗೆ ವಹಿಸಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದರು.
ಜಿಪಂ ಸಿಇಒ ಕೆ.ನಿತೀಶ್ ಅವರು ಮಾತನಾಡಿ ಕ್ಷಯರೋಗ ಪತ್ತೆ ಆಂದೋಲನ ಪರಿಣಾಮಕಾರಿಯಾಗಿ ಮಾಡಿ ಮತ್ತು ಪ್ರತಿನಿತ್ಯ ವರದಿಗಳನ್ನು ನಮಗೆ ಸಲ್ಲಿಸುವಂತೆ ಸೂಚಿಸಿದರು.
ಕ್ಷಯರೋಗ ಪತ್ತೆ ಆಂದೋಲನ ಮತ್ತು ಡೆಂಘೆ, ಚಿಕನ್ಗುನ್ಯಾ, ಮಲೇರಿಯಾದಂತ ರೋಗಗಳ ವಿರುದ್ಧ ಅನುಸರಿಸಬೇಕಾದ ಕ್ರಮಗಳ ಕುರಿತು ಇಡೀ ಜಿಲ್ಲೆಯಾದ್ಯಂತ ಒಂದು ದಿನ ತರಬೇತಿಯನ್ನು ತಾಲೂಕುವಾರು ಏಕಕಾಲಕ್ಕೆ ನಡೆಸಬೇಕು. ಆಶಾ ಕಾರ್ಯಕತರ್ೆಯರು ಮತ್ತು ಆರೋಗ್ಯ ಸಹಾಯಕರಿಗೆ ಅಗತ್ಯ ತರಬೇತಿ ನೀಡಬೇಕು. ತಾಲೂಕುಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಅವರು ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ನಮಗೆ ನೀಡಿ ನಾವು ಕೂಡ ಸ್ವಚ್ಛಭಾರತ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರೊಜೆಕ್ಟರ್ ಮೂಲಕ ಅರಿವು ಮೂಡಿಸಲಾಗುವುದು ಎಂದರು.
35 ಗ್ರಾಪಂಗಳಲ್ಲಿ ಮನೆ-ಮನೆಗೆ ತೆರಳಿ ಕಸ ಸಂಗ್ರಹ: ನಗರಗಳಂತೆ ಗ್ರಾಪಂಗಳ ಮಟ್ಟದಲ್ಲಿಯೂ ಸಹ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವುದಕ್ಕೆ ಬಳ್ಳಾರಿ ಜಿಪಂ ಮುಂದಾಗಿದ್ದು, ಮೊದಲ ಹಂತದಲ್ಲಿ 35 ಗ್ರಾಪಂಗಳಲ್ಲಿ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಉಳಿದ ಗ್ರಾಪಂಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಜಿಪಂ ಸಿಇಒ ಕೆ.ನಿತೀಶ್ ಹೇಳಿದರು. ಗ್ರಾಮದ ಒಳಗಡೆ ಇರುವ ತಿಪ್ಪೆಗುಂಡಿಗಳನ್ನು ತಕ್ಷಣಕ್ಕೆ ತೆರವು ಮಾಡಲು ಆಗದಿದ್ದರೂ ಇನ್ನೂ ಕೆಲದಿನಗಳಲ್ಲಿ ಒಂದು ಪ್ಲಾನ್ ಮಾಡಿ ಅವುಗಳನ್ನು ತೆಗೆಯಲಾಗುವುದು ಎಂದರು.
ಸೊಳ್ಳೆಯಿಂದ ಹರಡುವ ಕಾಯಿಲೆಗಳ ನಿಯಂತ್ರಣಕ್ಕೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ: ಸೊಳ್ಳೆಯಿಂದ ಹರಡುವ ಕಾಯಿಲೆಗಳಾದ ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್ ಗುನ್ಯಾದಂತ ಕಾಯಿಲೆಗಳ ನಿಯಂತ್ರಣಕ್ಕೆ ವಿವಿಧ ಇಲಾಖೆಗಳಿಗೆ ತನ್ನದೇಯಾದ ಜವಾಬ್ದಾರಿಗಳನ್ನು ವಹಿಸಲಾಗಿದ್ದು,ಎಲ್ಲ ಇಲಾಖೆಗಳ ಸಮನ್ವಯ ಮತ್ತು ಸಹಕಾರಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದರು.
ಮಲೇರಿಯಾ ಪ್ರಕರಣಗಳು ಕಳೆದ ವರ್ಷ ಇದೇ ಸಮಯದಲ್ಲಿ 18 ಪ್ರಕರಣಗಳು ದೃಢಪಟ್ಟಿದ್ದವು. ಈ ವರ್ಷ ಇಲ್ಲಿಯವರೆಗೆ 9 ಪ್ರಕರಣಗಳು ದೃಢಪಟ್ಟಿವೆ. ಡೆಂಘೆ ಪ್ರಕರಣಗಳು ಕಳೆದ ವರ್ಷ ಇದೇ ಸಮಯದಲ್ಲಿ 1188 ಸಂಶಯಾಸ್ಪದ ಪ್ರಕರಣಗಳಾಗಿದ್ದವು;ಅದರಲ್ಲಿ 52 ಪ್ರಕರಣಗಳು ಪಾಸಿಟಿವ್ ಎಂದು ದೃಢಪಡಿಸಲಾಗಿತ್ತು. ಈ ವರ್ಷ 1320 ಸಂಶಯಾಸ್ಪದ ಪ್ರಕರಣಗಳಿದ್ದು 33 ಪಾಸಿಟಿವ್ ಎಂದು ದೃಢಪಟ್ಟಿವೆ. ಚಿಕನ್ಗುನ್ಯಾ ಕಳೆದ ವರ್ಷ 116 ಸಂಶಯಾಸ್ಪದ ಪ್ರಕರಣಗಳಿದ್ದವು;ಅದರಲ್ಲಿ 23 ಪಾಸಿಟಿವ್ ಎಂದು ದೃಢಪಟ್ಟಿದ್ದವು. ಈ ವರ್ಷ 21 ಸಂಶಯಾಸ್ಪದ ಪ್ರಕರಣಗಳು ಕಂಡುಬಂದಿದ್ದು 04 ಪಾಸಿಟಿವ್ ಎಂದು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಅಬ್ದುಲ್ಲಾ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಶಿವರಾಜ ಹೆಡೆ ಸೇರಿದಂತೆ ವಿವಿಧ ಆರೋಗ್ಯ ಇಲಾಖೆಗಳ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.