ಲೋಕದರ್ಶನ ವರದಿ
ಕೊಪ್ಪಳ 20: ನ. 18ರಂದು ಹುಬ್ಳಳ್ಳಿಗೆ ಆಗಮಿಸಿದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೇಗೌಡರಿಗೆ ಹಾಗೂ ಸಭಾಪತಿಗಳಾದ ಬಸವರಾಜ ಹೊರಟ್ಟಿರವರಿಗೆ ರಾಜ್ಯ ಕರಾಟೆ ಶಿಕ್ಷಕರ ಸಂಘದ ವತಿಯಿಂದ ಕನರ್ಾಟಕ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳ ವಿದ್ಯಾಥರ್ಿನಿಯರಿಗೆ ಆತ್ಮ ರಕ್ಷಣಾ ಕಲೆಯಾದ ಕರಾಟೆ ತರಬೇತಿಯನ್ನು ಕಡ್ಡಾಯಗೊಳಿಸಲು ಮನವಿ ಸಲ್ಲಿಸಿದ ರಾಜ್ಯ ಕರಾಟೆ ಶಿಕ್ಷಕರ ಸಂಘದ ಕ್ರೀಡಾ ಕಾರ್ಯದಶರ್ಿಯಾದ ಮೌನೇಶ ಎಸ್ ವಡ್ಡಟ್ಟಿ ಮನವಿ ಸಲ್ಲಿಸಿದರು.
ಕೇಂದ್ರ ಸಕರ್ಾರದಿಂದ ಪಂಚವಾಷರ್ಿಕ ಯೋಜನೆಯ ಆರ್ಎಂಎಸ್ಎ ಯೋಜನೆ ಅಡಿಯಲ್ಲಿ ಸಕರ್ಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾಥರ್ಿನಿಯರಿಗೆ ವರ್ಷದಲ್ಲಿ ಮೂರು ತಿಂಗಳು ಕರಾಟೆ ತರಬೇತಿ ನೀಡುತ್ತಿದ್ದರು. ಈ ವರ್ಷ ನವ್ಹಂಬರ ಬಂದರೂ ಕೂಡಾ ತರಬೇತಿ ನೀಡಲು ಆದೇಶ ಬಂದಿಲ್ಲ ಆದ ಕಾರಣ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಶಾಲಾ ವಿದ್ಯಾಥರ್ಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು ಹೆಣ್ಣು ಮಕ್ಕಳು ಮನೋಬಲ ಮತ್ತು ಆತ್ಮ ಸ್ಥೈರ್ಯವನ್ನು ಹೆಚ್ಚಿಸಲು ಆತ್ಮ ರಕ್ಷಣೆಯ ಕಲೆಯಾದ ಕರಾಟೆ ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದು ತಿಳಿಸಿದರು.
ರಾಜ್ಯದಲ್ಲಿ ಸಾವಿರಾರು ನಿರುದ್ಯೋಗ ಕರಾಟೆ ಶಿಕ್ಷಕರಿಗೆ ತಾತ್ಕಾಲಿಕ ಹುದ್ದೆಯನ್ನು ನೀಡಿದಂತಾಗುತ್ತದೆ ಮತ್ತು ವಿದ್ಯಾಥರ್ಿನಿಯರಿಗೆ ಕರಾಟೆ ಕಲೆ ಸದುಪಯೋಗವಾಗುತ್ತದೆ ಎಂದು ತಿಳಿಸಿ ಮನವಿ ನೀಡಲಾಯಿತು.
ಹೆಚ್.ಡಿ ದೇವೇಗೌಡರು ಮತ್ತು ಬಸವರಾಜ ಹೊರಟ್ಟಿಯವರು ರಾಜ್ಯ ಯೋಜನಾ ನಿದರ್ೇಶಕರು ಸಮಗ್ರ ಶಿಕ್ಷಣ ಅಭಿಯಾನದ ಡಾ. ರೇಜು ರವರ ಜೊತೆ ಇದರ ಮಾಹಿತಿ ಪಡೆದು ಜಾರಿಗೆ ತರಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.ರಾಜ್ಯ ಕರಾಟೆ ಶಿಕ್ಷಕರ ಸಂಘದ ನಿದರ್ೇಶಕರಾದ ಬಾಷಾ ಸಾಹೇಬ, ಪ್ರಕಾಶ, ಸಲೀಂ, ವಿಠ್ಠಲ ಹೆಚ್, ಸೋಮಲಿಂಗ ಕವಲೂರು ಇತರರು ಇದ್ದರು.