ಶಿವಲಿಂಗ ಶ್ರೀಗಳ ಭಾವಚಿತ್ರ ಸಿಂಗರಿಸಿದ ಮಂಟಪದ ಮೆರವಣಿಗೆ

Mandapam procession decorated with the portrait of Lord Shivlinga

ಶಿವಲಿಂಗ ಶ್ರೀಗಳ ಭಾವಚಿತ್ರ  ಸಿಂಗರಿಸಿದ ಮಂಟಪದ ಮೆರವಣಿಗೆ  

ಹಾವೇರಿ  11: ನಗರದ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಲಿಂ. ಶಿವಬಸವ ಮತ್ತು ಲಿಂ. ಶಿವಲಿಂಗ ಶ್ರೀಗಳ ಭಾವಚಿತ್ರ ವು ಸಿಂಗರಿಸಿದ ಮಂಟಪದಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಐರಣಿ ಮಠದ ಆನೆ, ಗೊಂಬೆ ಕುಣಿತ, ರಾಣೇಬೆನ್ನೂರನ ಹನುಮಾನ್ ಬ್ಯಾಂಡ, ಹರಪನಹಳ್ಳಿಯ ನಂದಿಕೋಲು ಕುಣಿತ, ಅಗಡಿಯ ಸಮ್ಮಾಳ, ಸ್ತಬ್ದಚಿತ್ರಗಳು, ವೀರಗಾಸಿ ಕುಣಿತ, ಲಂಬಾಣಿ ಮೆಳಾವ, ಡೊಳ್ಳು ಕುಣಿತ ಮತ್ತಿತರ ಕಲಾ ತಂಡಗಳು ಭಾಗವಹಿಸಿದ್ದವು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಅಕ್ಕಿ ಆಲೂರಿನ ಶಿವಬಸವ ಸ್ವಾಮೀಜಿ, ದುಂಡಸಿಯ ಕುಮಾರ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಶಶಿಕಲಾ ಮಾಳಗಿ, ಅಶೋಕ ಮಾಗನೂರ, ಗಣೇಶ ಮುಷ್ಠಿ, ಮಾಂತಣ್ಣ ಸುರಳಿಹಳ್ಳಿ, ಸಿ. ಜಿ. ತೋಟಣ್ಣನವರ, ಮತ್ತಿತರರು ಉಪಸ್ಥಿತರಿದ್ದರು. ಮೆರವಣಿಗೆಯು ಎಂ. ಜಿ. ರೋಡ್, ಸುಭಾಸ್ ಸರ್ಕಲ್, ಹಳೇ ಅಂಚೆ ರಸ್ತೆ, ದೇಸಾಯಿ ಗಲ್ಲಿ, ರೈತರ ಓಣಿ, ದ್ಯಾಮವ್ವನ ಪಾದಗಟ್ಟಿ, ಬಸ್ತಿ ಓಣಿ, ತರಕಾರಿ ಮಾರುಕಟ್ಟೆ, ಅಕ್ಕಿ ಪೇಟೆ, ಯಾಲಕ್ಕಿ ಓಣಿ, ಪುರಸಿದ್ಧೇಶ್ವರ ಓಣಿ, ಸ್ಟೇಷನ್ ರಸ್ತೆ ಮೂಲಕ ತಡ ರಾತ್ರಿ ಶ್ರೀ ಮಠಕ್ಕೆ ಬಂದು ಸೇರಿತು.