ಧಾರವಾಡ 20: ಅವಶ್ಯಕತೆ ಇದ್ದವರಿಗೆ ಕೈಲಾದ ಸಹಾಯ ಮಾಡುವುದೇ ನಿಜವಾದ ಭಕ್ತಿ ಮತ್ತು ಧರ್ಮವಾಗಿದೆ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಗಳಾದ ಪ್ರೊ. ಎ.ಎಸ್.ಶಿರಾಳಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಕನರ್ಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠ ಹಾಗೂ ಕನಕ ಅಧ್ಯಯನ ಪೀಠ ಇವರ ಸಹಯೋಗದಲ್ಲಿ ಬಸವೇಶ್ವರ ಅಧ್ಯಯನ ಪೀಠದ 'ಅಲ್ಲಮ ಪ್ರಭು' ಸಭಾಭವನದಲ್ಲಿ ಶುಕ್ರವಾರದಂದು ಆಯೋಜಿಸಿದ ಎರಡು ದಿನಗಳ ವಿಶೇಷ ಉಪನ್ಯಾಸ ಮಾಲೆಯನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಮಾನವೀಯ ಮೌಲ್ಯಗಳು ಕುಸಿಯುತ್ತಿರುವದು ಬಹಳ ವಿಷಾದದ ಸಂಗತಿಯಾಗಿದ್ದು, ನಮ್ಮಲ್ಲಿ ಅನುಭಾವ ಮತ್ತು ಭಕ್ತಿಯ ಕೊರತೆಯಿಂದ ಮನುಷ್ಯ ಬಳಲುತ್ತಿದ್ದಾನೆ ಎಂದ ಅವರು ನಿಜವಾದ ಭಕ್ತಿ ವ್ಯಕ್ತಿಯ ಹೃದಯದಲ್ಲಿ ಇರಬೇಕು ಮತ್ತು ಇನ್ನೊಬ್ಬರ ಒಳತಿಗಾಗಿ ಶ್ರೇಯಸ್ಸನ್ನು ಬಯಸುವದೇ ನಿಜವಾದ ಭಕ್ತಿಯಾಗಿದೆ ಎಂದರು.
ಕವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ವಿರಣ್ಣ ರಾಜೂರ ಮಾತನಾಡಿ ಕವಿವಿಯಲ್ಲಿ ಪ್ರಥಮವಾಗಿ 1970ರಲ್ಲಿ ಬಸವ ಪೀಠವು ಪ್ರಾರಂಭವಾಗಿದ್ದು, ಡಾ. ಎಂ.ಎಂ.ಕಲಬುಗರ್ಿ ಅವರ ಸಲಹೆಯಂತೆ ಈ ಪೀಠವು ದಾಸೋಹದ ರೀತಿಯಲ್ಲಿ ಇಂದು ನಡೆಯುತ್ತಿದ್ದು, ಮುಂದಿನ ವರ್ಷವು ಈ ಬಸವ ಪೀಠಕ್ಕೆ ಐವತ್ತು ವರ್ಷ ತುಂಬಲಿದ್ದು, ಇದರ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವದು ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಬಸವರಾಜ ಕಲ್ಗುಡಿ ಅವರು 'ಅನುಭಾವ ಎಂದರೇನು? ಅನುಭಾವ ಹಾಗೂ ಭಕ್ತಿಯ ನಡುವಿನ ವ್ಯತ್ಯಾಸಗಳು' ಎಂಬ ವಿಷಯದ ಕುರಿತು ಮಾತನಾಡಿ ಅನುಭಾವ ಪದಕ್ಕೆ ವಿಶಾಲವಾದ ಅರ್ಥವಿದ್ದು, ಜ್ಞಾನದಿಂದ ಅರಿವು ಹೊಂದುವದು ವ್ಯಕ್ತಿಯು ತನ್ನನ್ನು ತಾನು ಅರಿಯುವುದಾಗಿದೆ ಎಂದ ಅವರು ಆಗಿನ ಎಲ್ಲ ಧರ್ಮ ಮತ್ತು ಭಕ್ತಿ ಪರಂರೆಗಳು ಅನುಭಾವದ ಪರಿಕಲ್ಪನೆಯನ್ನು ಹೊಂದಿದ್ದವು ಎಂದರು.
ಅನುಭಾವ ಪರಂಪರೆಯು 8ನೇ ಶತಮಾನದಲ್ಲಿ ಬೌದ್ಧರಿಂದ ಪ್ರಾರಂಭವಾದ ಈ ಪರಿಕಲ್ಪನೆಯು ಬಸವ ಪರಂಪರೆಯಿಂದ ಮುಂದೆ ವರೆದು ಆಗಿನ ಅನೇಕ ವಚನಕಾರರು ತಮ್ಮ ಅನೇಕ ವಚನಗಳಲ್ಲಿ ಈ 447 ಕಡೆಗಳಲ್ಲಿ ಅನುಭಾವ ಎಂಬ ಪದವನ್ನು ಪ್ರಸ್ತಾಪ ಮಾಡಿದ್ದಾರೆ ಎಂದರು.
ಭಕ್ತಿಪಂಥದ ಚಳುವಳಿಗಳು ಶ್ರೇಣಿಕೃತ ಸಮಾಜದ ನಿಮರ್ಾಣ ಮತ್ತು ಪುನರಜನ್ಮದ ನಂಬಿಕೆಗಳನ್ನು ವಿರೋಧಿಸಿದ್ದು, ನಾಥ ಮತ್ತು ಸಿದ್ದ ಭಕ್ತಿ ಪರಂಪರೆಗಳು ವೈಜ್ಞಾನಿಕ ತಳಹದಿಯನ್ನು ಹೊಂದಿದ್ದವು ಎಂದರು. ಬಸವೇಶ್ವರರು ಕೂಡಲ ಸಂಗಮ ಎಂಬ ನಾಮಾಂಕಿತದಿಂದ ಸಮಾಜಕ್ಕೆ ಇಡಿ ಮಾನವ ಕುಲ ಒಂದು ಎಂಬ ಎಂಬ ಪರಿಕಲ್ಪನೆಯನ್ನು ಸರಳವಾಗಿ ತಮ್ಮ ವಚನಗಳಲ್ಲಿ ದಾಖಲಿಸದ್ದಾರೆ ಎಂದ ಅವರು ಇಂದು ಮನುಷ್ಯ ಯಾಂತ್ರಿಕ ಜೀವನದಲ್ಲಿ ಇದ್ದು ಅದರಿಂದ ಹೊರಬರಬೇಕಾದರೆ ಅನುಭಾವದ ಸಾಂಗತ್ಯ ಬೇಕು ಎಂದರು.
ಕಾರ್ಯಕ್ರಮದಲ್ಲಿ ಕನಕ ಅಧ್ಯಯನ ಪೀಠದ ಸಂಯೋಜಕ ಡಾ. ಬಿ.ವಿ.ಯಕ್ಕುಂಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಪ್ರೊ. ಹಳ್ಯಾಳ್, ಡಾ. ನಿಜಲಿಂಗಪ್ಪ ಮಟ್ಟಿಹಾಳ್, ಡಾ. ಪಂಡಿತ್ ರಾಠೋಡ್, ಡಾ. ಶಿವಾನಂದ ಶೆಟ್ಟರ್, ಡಾ. ರುದ್ರೇಶ ಮೇಟಿ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾಥರ್ಿಗಳು ಇದ್ದರು.