ಲೋಕದರ್ಶನ ವರದಿ
ಸಂಬರಗಿ 22: ಜೀವನದಲ್ಲಿ ಮನುಷ್ಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ವಿದ್ಯಾವಂತರಾಗಿ ತಾಯಿ-ತಂದೆಗೆ ಹೆಸರು ತರಬೇಕು ಎಂದು ಕವಲಗುಡ್ಡ ಹಣಮಾಪೂರ ಮಠದ ಅಮರೇಶ್ವರ ಮಹಾರಾಜರು ಆಶಿರ್ವಚನ ನೀಡಿದರು.
ಮದಬಾವಿ ಗ್ರಾಮದ ಹೊರವಲಯದಲ್ಲಿ 10 ಕೋಟಿ ವೆಚ್ಚದ ಮೊರಾಜರ್ಿ ದೇಸಾಯಿ ವಸತಿ ಶಾಲಾ ನೂತನ ಕಟ್ಟಡವನ್ನು ದಿ.21ರಂದು ಉದ್ಘಾಟಿಸಿ ಅವರು ಮಾತನಾಡಿ ಜೀವನದಲ್ಲಿ ಮನುಷ್ಯ ಸಂಪತ್ತಿಗೆ ಮಹತ್ವ ನೀಡದೇ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮದಬಾವಿ ಗ್ರಾಮದಲ್ಲಿ ರಾಜಕೀಯ ಚುನಾವಣೆ ಬಂದಾಗ ಪಕ್ಷ ಮಾಡಿ ಚುನಾವಣೆ ಪೈಪೋಟಿಗೆ ಇಳಿಯುತ್ತಾರೆ. ಆದರೆ ಗ್ರಾಮದ ಅಭಿವೃದ್ಧಿಗಾಗಿ ಎಲ್ಲರೂ ಒಂದುಗೂಡಿ ಪ್ರಥಮ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಮೊರಾಜರ್ಿ ವಸತಿ ಶಾಲೆ ಪ್ರಾರಂಭಿಸಿ ಬಡ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಶಾಲೆಯಲ್ಲಿ ಎಲ್ಲಾ ಸೌಲಭ್ಯಗಳು ವಿದ್ಯಾಥರ್ಿಗಳಿಗೆ ಸಿಗುತ್ತವೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳು ಸರಿಯಾಗಿ ವಿದ್ಯಾಬ್ಯಾಸ ಮಾಡುತ್ತಾರೋ ಇಲ್ಲವೋ ಎಂದು ಈ ಕಡೆ ಗಮನಹರಿಸಬೇಕು. ತಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕೀತರ್ಿ ಪಡೆಯಬೇಕು.
ಈ ವೇಳೆ ಗ್ರಾಮದ ಮುಖಂಡರು ಆರ್.ಎಮ್.ಪಾಟೀಲ ಮಾತನಾಡಿ ತಾಯಿ-ತಂದೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಶಿಕ್ಷಣದ ಕಡೆ ಹೆಚ್ಚು ಒತ್ತು ನೀಡಬೇಕು. 2008ರಲ್ಲಿ ಈ ಮೊರಾಜರ್ಿ ವಸತಿ ಶಾಲೆಗಳು ಪ್ರಾರಂಭವಾಗಿ ತಾಲೂಕಿನ ಎಲ್ಲ ಬಡ ಮಕ್ಕಳಿಗೆ ಅನುಕೂಲವಾಗಿದೆ.
ಈ ವೇಳೆ ಜಿ ಪಂ ಸದಸ್ಯೆ ಉಮಾ ರೇವಣ್ಣಾ ಪಾಟೀಲ, ಮಹದೇವ ಕೋರೆ, ವಿನಾಯಕ ಬಾಗಡಿ, ಮಹಾನಂದಾ ನೀವಲಗಿ, ಕೃಷ್ಣಾ ಶಿಂದೆ, ಬಸವರಾಜ ಯಾದವಾಡ. ಈಶ್ವರ ಕುಂಬಾರ, ರವಿ ಬಾಸಿಂಗೆ, ಸುರೇಶ ಮುಂಜೆ, ಭೀಮರಾವ ಕಾರೆ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದರು. ಪ್ರಾಚಾರ್ಯ ರಾಮಣ್ಣ ಸ್ವಾಗತಿಸಿದರು. ಪ್ರಭಾಕರ ಕೊಂಡಿ ವಂದಿಸಿದರು.