ಬಸ್ಸು ಹತ್ತಲು ಹೋಗಿ ಗಾಯಗೊಂಡಿದ್ದ ವ್ಯಕ್ತಿ ಸಾವು
ಇಂಡಿ 24: ನಗರದ ಬಸ್ಸ್ ನಿಲ್ದಾಣದದಲ್ಲಿ ಬಸ್ಸು ಹತ್ತಲು ಹೋಗಿ ಗಾಯಗೊಂಡಿದ್ದ ವ್ಯಕ್ತಿ ಸಾವು ಅಪ್ಪಿದ್ದಾನೆ. ಮೃತ ವ್ಯಕ್ತಿ ಇಂಡಿ ತಾಲೂಕಿನ ತಡವಲಗಾ ಗ್ರಾಮದ ರೇವಣಸಿದ್ದಪ್ಪ ಬಿಂಜಲಬಾವಿ (58) ಎಂದು ತಿಳಿದು ಬಂದಿದೆ.ಈ ವ್ಯಕ್ತಿ ನಿನ್ನೆ ರವಿವಾರ ಬೆಳಿಗ್ಗೆ ಹತ್ತು ಸುಮಾರಿಗೆ ಇಂಡಿಯಿಂದ ತಡವಲಗಾ ಗ್ರಾಮಕ್ಕೆ ಹೋಗಬೇಕು ಎಂದು ಇಂಡಿ ನಗರದ ಬಸ್ ನಿಲ್ದಾಣದಲ್ಲಿ ವಿಜಯಪೂರಕ್ಕೆ ಹೋಗುವ ಬಸ್ಸು ಹತ್ತುವ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದಿದ್ದು, ಬಸ್ ಹಿಂಬದಿ ಗಾಲಿ ಹಾಯ್ದು ಎರಡು ಕಾಲುಗಳು ಸಂಪೂರ್ಣ ನುಜ್ಜು ನುಜ್ಜಾಗಿದ್ದವು ಎಂದು ತಿಳಿದು ಬಂದಿದ್ದು, ತಕ್ಷಣ ಆತನನ್ನು ಇಂಡಿ ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು, ಗಂಭೀರವಾಗಿ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪೂರ ಯಶೋದಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇಂಡಿ ಬಸ್ ನಿಲ್ದಾಣದಲ್ಲಿ ಇಂಡಿಯಿಂದ ವಿಜಯಪೂರಕ್ಕೆ ಹೋಗುವ ಬಸ್ಸು ಹತ್ತಲು ಸರಿಯಾದಂತ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಬಸ್ಸು ಬಂದ ತಕ್ಷಣ ನೂರಾರು ಪ್ರಯಾಣಿಕರು ಸೀಟ ಹಿಡಿಯಲು ನಾ ಮುಂದು ನೀ ಮುಂದು ಅಂತ ಓಡಿ ಓಡಿ ಬರುತ್ತಾರೆ, ಆದರೆ ವಯೋವೃದ್ಧರು, ಅಶಕ್ತರು, ಚಿಕ್ಕ ಮಕ್ಕಳು ಎನ್ನದೆ ಸೀಟು ಹಿಡಿಯಲು ತೆರಳುತ್ತಾರೆ. ಇದರಿಂದ ಇಂತಹ ಘಟನೆಗಳು ಆವಾಗಾವಾಗ ಸಂಭವಿಸುತ್ತಿವೆ. ಇನ್ನಾದರೂ ಎಚ್ಚೆತ್ತುಕೊಂಡು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.