ಲೋಕದರ್ಶನ ವರದಿ
ಶಿಗ್ಗಾವಿ 23ಃ ಜಾತ್ರೆಗೆ ತೆರಳಿದ ಶಿಗ್ಗಾವಿ ತಾಲೂಕಿನ ಹೊಸೂರ ಗ್ರಾಮದ ಬೆಳವಲಕೊಪ್ಪ ಎಂಬ ಪರಿವಾರದ 9 ಜನ ಕಾರವಾರ ಬಳಿಯ ಸಮುದ್ರದ ನಡುಗಡ್ಡೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಸಮುದ್ರದ ಪಾಲಾದ ಘಟನೆಯ ವಿಷಯ ತಿಳಿದು ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಗ್ರಾಮಕ್ಕೆ ತೆರಳಿ ಕುಟುಂಬದ ಸದಸ್ಯರಿಗೆ ಬುಧವಾರ ಸಾಂತ್ವಾನ ಹೇಳುವ ಜೊತೆಗೆ ಪರಿಹಾರದ ಮೊತ್ತವನ್ನು 2 ಲಕ್ಷದಿಂದ 5 ಲಕ್ಷಕ್ಕೆ ಏರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ತಾಲೂಕಿನ ಹೊಸೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೊಂದು ರಾಜ್ಯಮಟ್ಟದ ದೊಡ್ಡ ದುರಂತವಾಗಿದ್ದು ನನಗೆ ಆಘಾತವಾಗಿದೆ ಈ ಕುಟುಂಬ ವಯಕ್ತಿಕವಾಗಿ ನನ್ನ ಜೊತೆ ಅತ್ಯಂತ ಒಡನಾಡಿ ಕುಟುಂಬವಾಗಿದೆ ಘಟನೆಯ ಹಿಂದೆ ಹಲವಾರು ಕಾರಣಗಳಿದ್ದು ಬೊಟಿನಲ್ಲಿ ಅವಶ್ಯಕ್ಕಿಂತ ಹೆಚ್ಚಿಗೆ ಜನರನ್ನು ಸಾಗಿಸುತ್ತಿರುವದರಿಂದ ಹಾಗೂ ಯಾವುದೇ ಮುಂಜಾಗೃತಾ ಸಲಕರಣೆಗಳನ್ನು ಬಳಸದೆ ಇರುವದು ಘಟನೆಗೆ ಕಾರಣವಾಗಿದ್ದು ಇಂತಹ ಘಟನೆಗಳು ನಡೆಯುವದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದು ಅದರ ಪೂರಕ ಯೋಜನೆಗಳನ್ನು ಸಕರ್ಾರ ಗಂಭೀರವಾಗಿ ಪರಿಗಣಿಸಬೇಕು ಘಟನೆಯಲ್ಲಿ ಚಿಕ್ಕ ಮಕ್ಕಳೂ ಸಹಿತ ಇದ್ದು ಮನ ಕಲುಕುವಂತಿದೆ, 10 ಸಾವಿರ ಜನ ಸೇರುವ ಈ ಜಾತ್ರಗೆ 10 ಕೀ ಮಿ ಅಂತರವಿರುವ ಬೋಟಿನ ಪ್ರಯಾಣಕ್ಕೆ ಸುರಕ್ಷತಾ ಕ್ರಮಗಳನ್ನು ಬಳಸಿ ನಿಯಂತ್ರಣ ಮಾಡದಿರುವದು ವಿಷಾದನಿಯ, ಸಕರ್ಾರ ಸಹಿತ ಇದರ ಬಗ್ಗೆ ಕ್ರಮ ಜರುಗಿಸಲು ಒತ್ತಾಯಿಸಿದರಲ್ಲದೆ ಇಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ವಿ ದೇಶಪಾಂಡೆಯವರು ತಲಾ 2 ಲಕ್ಷ ಘೋಷಣೆ ಮಾಡಿದ್ದು ಆ ಪರಿಹಾರದ ಮೊತ್ತವನ್ನು 5 ಲಕ್ಷಕ್ಕೆ ಏರಿಸುವಂತೆ ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚಚರ್ಿಸಲಾಗಿದೆ ಮುಖ್ಯಮಂತ್ರಿಗಳೂ ಸಹಿತ ನೀಡುವ ಭರವಸೆಯನ್ನು ಕೊಟ್ಟಿದ್ದು ಒಟ್ಟಾರೆ ಹೊಸೂರು ಗ್ರಾಮ ನಿರವ ಮೌನ ಆವರಿಸಿದ್ದು ಕುಟುಂಬಕ್ಕೆ ಅನ್ಯಾಯವಾಗಿದೆ ಇರುವ ಕುಟುಂಬದ ಸದಸ್ಯರೊಂದಿಗೆ ನಾನು ಸದಾ ಸಹಕಾರಿಯಾಗಿರುತ್ತೆನೆ ಎಂದು ಭರವಸೆ ನೀಡಿದರು.
ಕುಟುಂಬದ ಆರು ವರ್ಷದ ಬಾಲಕ ಗಣೇಶ ಬದುಕುಳಿದಿದ್ದು ಅವನನ್ನು ಅಲ್ಲಿಯ ಆ ಘಟನೆಯ ಬಗ್ಗೆ ಕೇಳಿದಾಗ ಎಳೆಎಳೆಯಾಗಿ ಅಲ್ಲಿನ ಸಂದರ್ಭವನ್ನು ಬಿಚ್ಚಿಡುತ್ತಾ ದೋಣಿಯಿಂದ ಬಿದ್ದ ಕೂಡಲೆ ಅಲ್ಲಿಯೇ ಇದ್ದ ಹಗ್ಗದ ಎಳೆಯಿಂದ ಜೀವ ಉಳಿಸಿಕೊಂಡು ಬಂದ ಸಂದರ್ಭವನ್ನು ವಿವರಿಸುತ್ತಿದ್ದಾಗ ಎಂತಹ ಕಟುಕರಿದ್ದರೂ ಮನ ಕಲುಕುವಂತ್ತಿತ್ತು.
ತಾಲೂಕಿನ ನೂರಾರು ಜನ ಜನಪ್ರತಿನಿಧಿಗಳು ತಂಡೋಪತಂಡವಾಗಿ ಕುಟುಂಬಕ್ಕೆ ಸಾಂತ್ವನ ಹೇಳುವುದು ಸಾಮಾನ್ಯವಾಗಿದೆ, ತಾಲೂಕಾ ತಹಶೀಲ್ದಾರ ಚಂದ್ರಶೇಖರ್ ಗಾಳಿ ಇದ್ದರು.
ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಗ್ರಾಮಕ್ಕೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.