ಮಲ್ಲಯ್ಯ ಚಿಕ್ಕಮಠ ಶಾಸ್ತ್ರಿಗಳನ್ನು ನೇಮಕ
ಬೈಲಹೊಂಗಲ 05: ಅಖಿಲ ಕರ್ನಾಟಕ ವೀರಶೈವ ಅರ್ಚಕ ಪುರೋಹಿತರ ನಿಸ್ವಾರ್ಥ ಸೇವಾ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ತಾಲೂಕಿನ ಲಕ್ಕುಂಡಿ ಗ್ರಾಮದ ಮಲ್ಲಯ್ಯ ಚಿಕ್ಕಮಠ ಶಾಸ್ತ್ರಿಗಳನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿ ಎಸ್ ಗಣೇಶ ಆರಾಧ್ಯವರು ಹಾಗೂ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಗಂಗಾಧರಯ್ಯಾ ಶಾಸ್ತ್ರಿಗಳು ಜಂಟಿಯಾಗಿ ಆದೇಶ ಹೊರಡಿಸಿದ್ದಾರೆ. ನೇಮಕಾತಿಗಾಗಿ ಹಣ್ಣಿಕೇರಿ ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದು ಬೋಳಣ್ಣವರ ಭಾಂವಿಹಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ ಚಿಕ್ಕಮಠ ಯುವ ಮುಖಂಡರಾದ ಮಲ್ಲಿಕಾರ್ಜುನ ಕುಲಕರ್ಣಿ ಪ್ರದೀಪ ದೋಡ್ಡಗೌಡರ ಅಭಿನಂದನೆ ತಿಳಿಸಿದ್ದಾರೆ.